ಮಗಳನ್ನು ಚುಡಾಯಿಸಿದವನಿಗೆ ಸ್ಮೃತಿ ಇರಾನಿ ನೀಡಿದ ಪ್ರತಿಕ್ರಿಯೆ ಇದು...

ನವದೆಹಲಿ, ಜೂನ್ 22: ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿಯ ಫೋಟೋ ಬಗ್ಗೆ ಅಸಭ್ಯವಾಗಿ ಮಾತನಾಡಿದ ಆಕೆಯ ಸಹಪಾಠಿ ಒಬ್ಬನನ್ನು ಇನ್ ಸ್ಟಾಗ್ರಾಂ ನಲ್ಲೇ ಸ್ಮೃತಿ ಇರಾನಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

"ಮಿ.ಜಾ, ನನ್ನ ಮಗಳು ಒಬ್ಬ ಕ್ರೀಡಾಪಟು. ಲಿಮ್ಕಾ ಬುಕ್ ನಲ್ಲಿ ದಾಖಲೆ ಬರೆದಿದ್ದಾಳೆ. ಅಷ್ಟೇ ಅಲ್ಲ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾಳೆ. ಎರಡು ಬಾರಿ ವಿಶ್ವ ಚಾಂಪಿಯನ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾಳೆ. ಅಷ್ಟೇ ಅಲ್ಲ ತುಂಬಾ ಸುಂದರಿ. ನಿನಗೆ ಎಷ್ಟು ಚುಡಾಯಿಸಬೇಕು ಅನ್ನಿಸುತ್ತೋ ಚುಡಾಯಿಸು. ಅವಳು ಅದರ ವಿರುದ್ಧ ಅಷ್ಟೇ ಸಮರ್ಥವಾಗಿ ಹೋರಾಡುತ್ತಾಳೆ. ಅವಳು ಝೋಯಿಶ್ ಇರಾನಿ, ನನಗೆ ಅವಳ ಅಮ್ಮ ಆಗಿರುವುದಕ್ಕೆ ಹೆಮ್ಮೆ ಇದೆ" ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.

Smriti Iranis Fierce response to a boy who bulled her daughter

ನಡೆದಿದ್ದಿಷ್ಟು: ಇತ್ತೀಚೆಗೆ ಸ್ಮೃತಿ ಇರಾನಿ ಅವರು ತಮ್ಮ ಪುತ್ರಿಯ ಸೆಲ್ಫಿಯೊಂದನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಆ ಚಿತ್ರದ ಬಗ್ಗೆ ಆಕೆಯ ಸಹಪಾಠಿಯೊಬ್ಬ ಟೀಕಿಸಿ, ಆಕೆಯನ್ನು ಚುಡಾಯಿಸಿದ್ದ. ಇದರಿಂದ ಮುಜುಗರಕ್ಕೊಳಗಾದ ಸ್ಮೃತಿ ಪುತ್ರಿ, 'ಅಮ್ಮಾ ದಯವಿಟ್ಟು ಆ ಚಿತ್ರವನ್ನು ಡಿಲೀಟ್ ಮಾಡಿ. ಅವರು ಆ ಚಿತ್ರವನ್ನು ನೋಡಿ ಆಡಿಕೊಂಡು ನಗುತ್ತಾರೆ' ಎಂದು ತಾಯಿಯ ಬಳಿ ಮನವಿ ಮಾಡಿದ್ದಳು. "ಆಕೆಯ ಕಣ್ಣೀರು ನೋಡಲಾಗದೆ ನಾನು ಆ ಚಿತ್ರವನ್ನು ಡಿಲೀಟ್ ಮಾಡಿದೆ. ಆಅದರೆ ನಂತಗರ ನನಗೆ ತಿಳಿಯಿತು,ನಾನು ಅದನ್ನು ಡಿಲೀಟ್ ಮಾಡುವುದರಿಂದ ಹೀಗೆ ಚುಡಾಯಿಸುವವರಿಗೆ ಹೆದರಿದ ಹಾಗೆ ಮತ್ತು ಅವರನ್ನು ಪರೋಕ್ಷವಾಗಿ ಬೆಂಬಲಿಸಿದಂತಾಗುತ್ತದೆ. ಆದ್ದರಿಂದ ಈ ಚಿತ್ರವನ್ನು ನಾನು ಮತ್ತೆ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡುತ್ತಿದ್ದೇನೆ" ಎಂದು ಸ್ಮೃತಿ ಇರಾನಿ ಪೋಸ್ಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+