ಶಶಿ ತರೂರ್‌ಗೆ ಪೊಲೀಸರು ಸಿದ್ಧಪಡಿಸಿರುವ 11 ಪ್ರಶ್ನೆಗಳು
ನವದೆಹಲಿ, ಜ. 16: ಸುನಂದಾ ಪುಷ್ಕರ್ ಅವರದ್ದು ಪಕ್ಕಾ ಕೊಲೆ ಎಂದು ಪೊಲೀಸ್ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ. ಕೊಲೆ ಆರೋಪಿ ಬಂಧಿಸಲು ಎಲ್ಲ ನಿಟ್ಟಿನಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸುನಂದಾ ಪುಷ್ಕರ್ ಅವರು ಐಪಿಎಲ್ ಹಾಗೂ ಮೆಹರ್ ತರಾರ್ ವಿಷಯದಲ್ಲಿ ತೀವ್ರ ಅಸಮಾಧಾನಗೊಂಡಿದ್ದರು. ಈ ಕುರಿತು ಕುಟುಂಬದ ಇತರ ಸದಸ್ಯರಲ್ಲಿ ಆತಂಕ ತೋಡಿಕೊಂಡಿದ್ದರು. ಅಲ್ಲದೆ, ಹವಾಲಾ ಆಪರೇಟರ್ ಜೊತೆ ಸುನಂದಾ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. [ಕೊಲೆ ದೃಢಪಡಿಸಿದ್ದು ಗಾಯ ಸಂ. 10]

ಕೇಟಿ ಎನ್ನಲಾದ ಕ್ಯಾಥರೀನ್ ಅಬ್ರಹಾಂ ಹೆಸರೂ ತನಿಖೆ ಮಧ್ಯೆ ಕೇಳಿಬಂದಿದೆ. ಅವರು ತಿರುವನಂತಪುರಂನ ಓರ್ವ ಲೇಖಕಿ. ಅವರೊಂದಿಗೆ ಶಶಿ ತರೂರ್ ಸಲುಗೆ ಹೊಂದಿದ್ದು ಸುನಂದಾ ಅಸಮಾಧಾನಕ್ಕೆ ಕಾರಣವಾಗಿತ್ತು. ಆದ್ದರಿಂದ ಅವರನ್ನೂ ಪ್ರಶ್ನೆಗೊಳಪಡಿಸುವ ನಿರೀಕ್ಷೆಯಿದೆ. [ಕೊಲೆ ತನಿಖೆ ಕಬ್ಬಿಣದ ಕಡಲೆ]
ಮೋಯಿನ್ ಖುರೇಶಿ ಎಂಬ ಹವಾಲಾ ಏಜೆಂಟ್‌ಗೆ ಸುನಂದಾ ಕಳುಹಿಸಿದ್ದ ಸಂದೇಶಗಳನ್ನೂ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಆದ್ದರಿಂದ ಶಶಿ ತರೂರ್ ವಿಚಾರಣೆಗೆ ಸಿದ್ಧತೆ ಆರಂಭಿಸಿರುವ ವಿಶೇಷ ತನಿಖಾ ದಳ 11 ಮುಖ್ಯ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದೆ. ಪ್ರಶ್ನೆಗಳು ಈ ಕೆಳಗಿನಂತಿವೆ. [ತರಾರ್ ಜೊತೆ 3 ರಾತ್ರಿ ಕಳೆದರೇ ತರೂರ್?]
- ಸುನಂದಾ ಅವರಿಗೆ ಇಂಜೆಕ್ಷನ್ ಅಗತ್ಯವಿತ್ತೇ?
- ಪುಷ್ಕರ್ ಎಡಗೈಯಲ್ಲಿದ್ದ ಗಾಯದ ಕುರಿತು ತಿಳಿಸಿರಿ.
- ಅವರಿಗೆ ವಿಷ ಸಿಕ್ಕಿದ್ದು ಹೇಗೆ? [ಇಂಜೆಕ್ಷನ್ ಚುಚ್ಚಿದ್ದು ಪರಿಚಿತರು]
- ಸುನಂದಾ ಕೈ ಕಚ್ಚುವಂತಹ ಮಾರಾಮಾರಿ ಏನಾದರೂ ನಡೆದಿತ್ತೇ?
- ನಿಮ್ಮ ಮತ್ತು ಅವರ ಮಧ್ಯೆ ಸಂಬಂಧ ಹೇಗಿತ್ತು?
- ಐಪಿಎಲ್ ಮತ್ತು ಮೆಹರ್ ತರಾರ್ ವಿವಾದದ ನಂತರ ಸುನಂದಾ ಏಕೆ ನಿರುತ್ಸಾಹಗೊಂಡಿದ್ದರು?
- ನೀವು ವೈದ್ಯಕೀಯ ವರದಿ ಮೇಲೆ ಪ್ರಭಾವ ಬೀರಲು ಯತ್ನಿಸಿದರೇ?
- ಐಪಿಎಲ್‌ನಿಂದ ಸುನಂದಾ ಅವರು ಹಣ ಕಳೆದುಕೊಂಡಿದ್ದರೇ?
- ಕೇಟಿ ಜೊತೆ ನೀವು ಹೊಂದಿದ್ದ ಸಂಬಂಧವೇನು?
- ಮೆಹರ್ ತರಾರ್ ವಿವಾದವೇನು?
- ಮೋಯಿನ್ ಕುರೇಶಿ ಜೊತೆ ಇದ್ದ ಸಂಪರ್ಕ ಎಂತಹದ್ದು?












Click it and Unblock the Notifications