ದೆಹಲಿ ಬಾರಾಖಂಭಾ ಮೆಟ್ರೋ ನಿಲ್ದಾಣಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಹೆಸರು!
Recommended Video

ನವದೆಹಲಿ, ಆಗಸ್ಟ್ 6: ದೆಹಲಿಯ ಬಾರಾ ಖಂಭಾ ಮೆಟ್ರೋ ನಿಲ್ದಾಣಕ್ಕೆ ಸರ್.ಎಂ. ವಿಶ್ವೇಶ್ವರಯ್ಯ ಎಂದು ನಾಮಕರಣ ಮಾಡಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಭಾಗಿಯಾಗಿದ್ದರು.
ಉದ್ಘಾಟನೆ ಬಳಿಕ ಮಾತನಾಡಿದ ಅವರು, ಸರ್.ಎಂ. ವಿಶ್ವೇಶ್ವರಯ್ಯ ಕರ್ನಾಟಕದವರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ. ಅವರು ಮೈಸೂರಿನ ದಿವಾನರಾಗಿ ಹಾಗೂ ಜನಪ್ರಸಿದ್ಧ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ನೆಹರೂ ಅವರ ಕಾಲದಲ್ಲಿ ಭಾರತರತ್ನ ಪ್ರಶ್ತಿಯೂ ಅವರಿಗೆ ಸಂದಿದೆ ಎಂದರು.

ಅವರು 70 ಬಗೆಯ ಹನಿನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ಇಂತಹ ಮಹಾನ್ ವ್ಯಕ್ತಿಯ ಹೆಸರನ್ನು ದೆಹಲಿ ರೈಲು ನಿಲ್ದಾಣಕ್ಕೆ ಇಟ್ಟಿರುವುದು ಸಂತಸದ ಸಂಗತಿ, ಕರ್ನಾಟಕದ ಆರೂವರೆ ಕೋಟಿ ಜನತೆಯ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದು ದೆಹಲಿಯ ಬಾರಾಖಂಭಾಮೆಟ್ರೋ ಭವನದಲ್ಲಿ ಕನ್ನಡದಲ್ಲಿಯೇ ಭಾಷಣ ಮಾಡಿದರು.
ಈ ಮೆಟ್ರೋ ನಿಲ್ದಾಣ ದೆಹಲಿಯ ಮೋತಿಬಾಗ್‌ನಲ್ಲಿರುವ ಕರ್ನಾಟಕ ಸಂಘದ ಪಕ್ಕದಲ್ಲಿದೆ. ಕನ್ನಡಿಗ ಸರ್ ಎಂ ವಿಶ್ವೇಶ್ವರಯ್ಯ ಎಂದು ಹೆಸರಿಡುವಂತೆ ಕೇಂದ್ರ ಸಚಿವ ಅನಂತ ಕುಮಾರ್ ಅವರು ಈ ಹಿಂದೆ ಒತ್ತಾಯಿಸಿದ್ದರು.
ಆಗ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ವೆಂಕಯ್ಯ ನಾಯ್ಡು ಅವರು ಒಪ್ಪಿಗೆ ಸೂಚಿಸಿದ್ದರು. ಒಟ್ಟಿನಲ್ಲಿ ಬೆಂಗಳೂರಿನಂತೆ ದೆಹಲಿಯಲ್ಲೂ ಕೂಡ ಸರ್ ಎಂ ವಿಶ್ವೇರಯ್ಯ ಮೆಟ್ರೋ ನಿಲ್ದಾಣ ನಿರ್ಮಾಣವಾದಂತಾಗಿದೆ.
ಕಾರ್ಯಕ್ರಮದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರು ಭಾಗಿಯಾಗಿದ್ದರು.












Click it and Unblock the Notifications