ಸಿಂಘು ಗಡಿ ಹತ್ಯೆ ಪ್ರಕರಣ: ಪಂಜಾಬ್‌ನಲ್ಲಿ 2ನೇ ಆರೋಪಿ ನಾರಾಯಣ್ ಸಿಂಗ್ ಬಂಧನ

ನವದೆಹಲಿ, ಅಕ್ಟೋಬರ್ 16: ದೆಹಲಿ-ಹರಿಯಾಣದ ಸಿಂಘು ಗಡಿಯಲ್ಲಿ ಲಖಬೀರ್ ಸಿಂಗ್ ಹತ್ಯೆಗೆ ಸಂಬಂಧಿಸಿದಂತೆ ನಿಹಾಂಗ್ ಸಮುದಾಯಕ್ಕೆ ಸೇರಿದ ಎರಡನೇ ಆರೋಪಿ ನಾರಾಯಣ್ ಸಿಂಗ್ ಅನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಲಖಬೀರ್ ಸಿಂಗ್ ಹತ್ಯೆ ನಂತರ ಎರಡನೇ ಆರೋಪಿ ನಾರಾಯಣ್ ಸಿಂಗ್ ಪಂಜಾಬ್‌ನ ತನ್ನ ಗ್ರಾಮಕ್ಕೆ ಹಿಂದಿರುಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಪಂಜಾಬ್‌ನ ಅಮರ್ಕೋಟ್ ಗ್ರಾಮದವರು ಎಂದು ಗೊತ್ತಾಗಿದೆ.

ಸಿಂಘು ಗಡಿಯಲ್ಲಿ ಹತ್ಯೆಯಾದ ಲಖಬೀರ್ ಸಿಂಗ್ ಜೇಬಲ್ಲಿ 50 ರೂ.: ಕುಟುಂಬಸ್ಥರು ಹೇಳುವುದೇನು?
ಶುಕ್ರವಾರ ಸಿಂಘು ಗಡಿಯ ಹತ್ಯೆಯ ಹೊಣೆ ಹೊತ್ತುಕೊಂಡ ಮೊದಲ ಆರೋಪಿ ಸರವಜೀತ್ ಸಿಂಗ್ ಪೊಲೀಸರ ಎದುರಿಗೆ ಶರಣಾಗಿದ್ದನು. ತದನಂತರ ಆರೋಪಿಯನ್ನು ಏಳು ದಿನಗಳವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ವಿಚಾರಣೆ ವೇಳೆ ಮೊದಲ ಆರೋಪಿ ನೀಡಿದ ಇತರೆ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Singhu border killing case: Police Arrest Second Accused in Punjab Village

ಏನಿದು ಲಖಬೀರ್ ಸಿಂಗ್ ಹತ್ಯೆಯ ಘಟನೆ:
ದೆಹಲಿಯ ಹೊರಗಿನ ಸಿಂಗು ಗಡಿಯಲ್ಲಿ ಲಖಬೀರ್ ಸಿಂಗ್ ಎಂಬ 35 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿಯ ದೇಹವು ಪ್ರತಿಭಟನಾ ನಿರತ ರೈತರ ಮುಖ್ಯ ವೇದಿಕೆ ಬಳಿ ಬ್ಯಾರಿಕೇಡ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೈಗಳನ್ನು ಕತ್ತರಿಸಲಾಗಿದೆ. ಚೂಪಾದ ಆಯುಧದಿಂದ ವ್ಯಕ್ತಿಯ ದೇಹದ ಮೇಲೆ ದಾಳಿ ಮಾಡಿದ ಗುರುತುಗಳು ಪತ್ತೆಯಾಗಿದ್ದವು. ಈ ಘಟನೆ ಮುಂಜಾನೆ 3 ಗಂಟೆಗೆ ನಡೆದಿದ್ದು ಎಂದು ತಿಳಿದು ಬಂದಿತ್ತು.

ಲಖಬೀರ್ ಸಿಂಗ್ ಹತ್ಯೆ ಬಗ್ಗೆ ಸಂಬಂಧಿಕರ ಆರೋಪ:
ದೆಹಲಿಯ ಹೊರಗಿನ ಸಿಂಗು ಗಡಿಯಲ್ಲಿ ನಿಹಾಂಗ್ ಸಿಖ್ಖರ ಗುಂಪಿನಿಂದ ಹತ್ಯೆಗೀಡಾದ ಲಖಬೀರ್ ಸಿಂಗ್ ಒಬ್ಬ ವ್ಯಸನಿಯಾಗಿದ್ದರು ಎಂದು ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ. ಲಖಬೀರ್ ಸಿಂಗ್ ಅನ್ನು ಕೆಲವು ವ್ಯಕ್ತಿಗಳು ಆಮಿಷವೊಡ್ಡಿ ಪ್ರತಿಭಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು ಎಂದು ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಆರೋಪಿಸಿದ್ದಾರೆ. "ಮೃತ ಲಖಬೀರ್ ಸಿಂಗ್, ಸಿಖ್ ಧಾರ್ಮಿಕ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ, ಆದರೂ ಈ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ. ಅವನು ಅಲ್ಲಿಗೆ ಹೋಗಲು ಆಮಿಷವೊಡ್ಡಲಾಗಿದ್ದು, ಈ ಬಗ್ಗೆ ಸೂಕ್ತ ರೀತಿ ತನಿಖೆ ನಡೆಸಬೇಕು ಮತ್ತು ಅವನಿಗೆ ನ್ಯಾಯ ಸಿಗಬೇಕು ಎಂದು ಮಾವ ಬಲದೇವ್ ಸಿಂಗ್ ಹೇಳಿದ್ದಾರೆ.
"50 ರೂಪಾಯಿ ತೆಗೆದುಕೊಂಡು ಹೋದ ಲಖಬೀರ್ ಸಿಂಗ್ ಚಬಲ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದೇನೆ ಮತ್ತು ಒಂದು ವಾರದ ನಂತರ ಹಿಂತಿರುಗುವುದಾಗಿ ಹೇಳಿದ್ದರು. "ಅವನು ಅಲ್ಲಿ ಕೆಲಸಕ್ಕೆ ಹೋಗಿದ್ದಾನೆ ಎಂದು ನಾನು ಭಾವಿಸಿದೆ. ಆತ ಗುರು ಗ್ರಂಥ ಸಾಹಿಬ್ ನ ಅಪವಿತ್ರಗೊಳಿಸುವಂತ ವ್ಯಕ್ತಿಯಲ್ಲ, ಈ ಪ್ರಕರಣದಲ್ಲಿ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು," ಎಂದು ಸಹೋದರಿ ರಾಜ್ ಕೌರ್ ಆಗ್ರಹಿಸಿದ್ದಾರೆ.

ಲಖಬೀರ್ ಸಿಂಗ್ ಕುರಿತು ವಿಶೇಷ ಸುದ್ದಿಗಳು:
* "ಲಖಬೀರ್ ಸಿಂಗ್ ತಮ್ಮ ತಂದೆ ತಾಯಿ ಸಾವಿನ ನಂತರದಲ್ಲಿ ತಮ್ಮ ಸಹೋದರಿ ಹಾಗೂ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಜೊತೆಗೆ ವಾಸವಾಗಿದ್ದರು. ಅವರು ಯಾರೊಂದಿಗೆ ದೆಹಲಿಗೆ ಹೋದರು ಎಂದು ನಾವು ತನಿಖೆ ಮಾಡುತ್ತಿದ್ದೇವೆ. "ದರ್ಶನ್ ಸಿಂಗ್ ಪುತ್ರನಾದ ಲಖಬೀರ್ ಸಿಂಗ್ ಅನ್ನು ಚಿಕ್ಕಪ್ಪ ಹರ್ನಮ್ ಸಿಂಗ್ ಆರು ತಿಂಗಳ ಮಗುವಾಗಿದ್ದಾಗಲೇ ದತ್ತು ಪಡೆದಿದ್ದರು," ಎಂದು ಎಎಸ್ಐ ಕಾಬಲ್ ಸಿಂಗ್ ಹೇಳಿದ್ದಾರೆ.
* ಐಎಎನ್ಎಸ್ ವರದಿಗಳ ಪ್ರಕಾರ, ಲಖಬೀರ್ ಸಿಂಗ್ ಕಳೆದ 3 ರಿಂದ 4 ದಿನಗಳಿಂದ ಸಿಂಘು ಗಡಿಯಲ್ಲಿ ನಿಹಾಂಗ್ ಸಿಖ್ಖರ ಗುಂಪಿನೊಂದಿಗೆ ತಂಗಿದ್ದ ಎಂದು ಗೊತ್ತಾಗಿದೆ.
* ಸಂಯುಕ್ತ ಕಿಸಾನ್ ಮೋರ್ಚಾ (SKM) ಸಿಂಘು ಗಡಿ ಪ್ರತಿಭಟನಾ ಸ್ಥಳದಲ್ಲಿ ವ್ಯಕ್ತಿಯ ಬರ್ಬರ ಹತ್ಯೆಯನ್ನು ಖಂಡಿಸಿದ್ದು, ನಿಹಾಂಗ್‌ಗಳಿಗೂ ತಮಗೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
* "ಸರ್ಬಲೋಹ್ ಗ್ರಂಥಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಿಂದ ಈ ಘಟನೆ ನಡೆದಿದೆ ಎಂದು ಹೇಳುತ್ತಾ, ಸ್ಥಳದಲ್ಲಿದ್ದ ನಿಹಾಂಗ್ ಗುಂಪು ಕೊಲೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಲಖಬೀರ್ ಸಿಂಗ್ ಸ್ವಲ್ಪ ಸಮಯದವರೆಗೆ ಅದೇ ನಿಹಾಂಗ್‌ಗಳ ಗುಂಪಿನೊಂದಿಗೆ ಇದ್ದರು ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+