ದೆಹಲಿಯಲ್ಲಿ ಸಿಂಗಾಪುರ ವಿಮಾನ ತುರ್ತು ಲ್ಯಾಂಡಿಂಗ್
ನವದೆಹಲಿ,ಮೇ 9: ನವದೆಹಲಿ ವಿಮಾನ ನಿಲ್ದಾಣದಲ್ಲಿ ಸಿಂಗಾಪುರ ವಿಮಾನವು ತುರ್ತು ಲ್ಯಾಂಡಿಂಗ್ ಮಾಡಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿ ಮಾಡಿತ್ತು.
ವಿಮಾನದಲ್ಲಿನ ತಾಂತ್ರಿಕ ದೋಷ ಹಾಗೂ ವ್ಹೀಲ್‌ನಲ್ಲಿರುವ ಸಮಸ್ಯೆಯಿಂದ ಲ್ಯಾಂಡಿಂಗ್ ಮಾಡುವುದು ಪೈಲಟ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಈ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಮಾನವನ್ನು ರನ್‌ವೇ ನಿಂದ ಟೋ ಮಾಡಿಕೊಂಡು ಪಾರ್ಕಿಂಗ್ ಪ್ರದೇಶಕ್ಕೆ ತರಲಾಯಿತು.

15 ನಿಮಿಗಳ ಕಾಲ ವಿಮಾನ ನಿಲ್ದಾಣದಲ್ಲಿ ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು, ಪ್ರಯಾಣಿಕರು ಕೂಡ ಆತಂಕಕ್ಕೊಳಗಾಗಿದ್ದರು. ಆದರೆ ಈ ಹಂತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಸಿಂಗಾಪುರದ ಎ-380800 ವಿಮಾನವು ಬುಧವಾರ ರಾತ್ರಿ ತುರ್ತು ಲ್ಯಾಂಡ್ ಮಾಡಲಾಯಿತು.












Click it and Unblock the Notifications