ಶಶಿ ತರೂರ್ ಪಾಕಿಸ್ತಾನಕ್ಕೆ ಹೋಗಿ ತನ್ನ ಪ್ರೇಯಸಿ ಜತೆ ಕಾಲ ಕಳೆಯಲಿ:ಸ್ವಾಮಿ

ನವದೆಹಲಿ, ಜುಲೈ 18: ಹಿಂದೂ ಪಾಕಿಸ್ತಾನ, ಹಿಂದೂ ತಾಲಿಬಾನ್ ಹೇಳಿಕೆ ನೀಡಿರುವ ಕಾಂಗ್ರೆಸ್ ಪ್ರಮುಖ ಮುಖಂಡ ಶಶಿ ತರೂರ್ ವಿರುದ್ಧ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶಶಿ ತರೂರ್, ಪಾಕಿಸ್ತಾನದಲ್ಲಿರುವ ತನ್ನ ಗರ್ಲ್‌ ಫ್ರೆಂಡ್ ಜೊತೆ ಅಲ್ಲಿಯೇ ಆರಾಮವಾಗಿ ಇರಲಿ ಎಂದು ಸುಬ್ರಹ್ಮಣಿಯನ್ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

'ನಾನು ಯಾವ ಧರ್ಮದವನು ಮತ್ತು ಭಾರತದಲ್ಲಿ ನಾನು ವಾಸ ಮಾಡಬೇಕೆ ಬೇಡವೇ ಎಂದು ನಿರ್ಧರಿಸುವ ಹಕ್ಕು ಅವರಿಗೆ ಯಾರು ಕೊಟ್ಟಿದ್ದು, ನನ್ನನ್ನು ಪಾಕಿಸ್ತಾನಕ್ಕೆ ಹೋಗುವಂತೆ ಹೇಳಲು ಅವರು ಯಾರು, ಅವರೇನು ಹಿಂದುತ್ವದ ಹೆಸರಲ್ಲಿ ತಾಲಿಬಾನ್ ಪ್ರಾರಂಭಿಸಿದ್ದಾರೆಯೇ? ಎಂದು ಶಶಿ ತರೂರ್ ನಿನ್ನೆ ಪ್ರಶ್ನಿಸಿದ್ದರು.

ಶಶಿ ತರೂರ್ ಪಾಕಿಸ್ತಾನಕ್ಕೆ ಹೋಗಲಿ

ಶಶಿ ತರೂರ್ ಪಾಕಿಸ್ತಾನಕ್ಕೆ ಹೋಗಲಿ

ಇದಕ್ಕೆ ಪ್ರತಿಕ್ರಿಯಿಸಿದ ಸುಬ್ರಹ್ಮಣಿಯನ್ ಸ್ವಾಮಿ, ನಾವು ಆತನಿಗೆ (ಶಶಿ ತರೂರ್)ಗೆ ಸಲಹೆ ನೀಡುತ್ತಿದ್ದೇವೆ, ಆತ ಆರಾಮವಾಗಿ ಪಾಕಿಸ್ತಾನಕ್ಕೆ ಹೋಗಿ, ತನ್ನ ಐಎಸ್ಐ ಪ್ರೇಯಸಿಯ ಜೊತೆ ಆರಾಮವಾಗಿ ಇರಲಿ' ಎಂದು ಸುಬ್ರಹ್ಮಣ್ಯಿಯನ್ ಸ್ವಾಮಿ ಹೇಳಿದ್ದಾರೆ.

ಶಶಿ ತರೂರ್ ಪತ್ನಿ ಸಾವಿನ ಪ್ರಸ್ತಾಪ

ಶಶಿ ತರೂರ್ ಪತ್ನಿ ಸಾವಿನ ಪ್ರಸ್ತಾಪ

ಶಶಿ ತರೂರ್ ಮಡದಿ ಸುನಂದಾ ಪುಷ್ಕರ್ ಅವರ ಪ್ರಕರಣವನ್ನೂ ಕೆದಕಿರುವ ಸುಬ್ರಹ್ಮಣಿಯನ್ ಸ್ವಾಮಿ, 'ತಾನೊಬ್ಬ ಹಿಂದೂ ಎಂದು ಹೇಳಿಕೊಳ್ಳುವ ಶಶಿ ತರೂರ್ ತನ್ನ ಅನುಮಾನಾಸ್ಪದವಾಗಿ ಸಾವಿಗೀಡಾದ ತನ್ನ ಹಿಂದೂ ಪತ್ನಿಯ ಬಗ್ಗೆ ಒಮ್ಮೆಯೂ ಧನಿ ಎತ್ತಿಲ್ಲ' ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಶಶಿ ತರೂರ್‌ನಿಂದ ಪಾಕ್‌ಗೆ ಲಾಭ

ಶಶಿ ತರೂರ್‌ನಿಂದ ಪಾಕ್‌ಗೆ ಲಾಭ

ಶಶಿ ತರೂರ್ ಅವರ ಹೇಳಿಕೆಗಳಿಂದ ಪಾಕಿಸ್ತಾನಕ್ಕೆ ಲಾಭವಾಗುತ್ತಿದೆ ಎಂದ ಸುಬ್ರಹ್ಮಣಿಯನ್ ಸ್ವಾಮಿ, ಸಂಸತ್ ಸದಸ್ಯನೊಬ್ಬ ಈ ರೀತಿಯಾಗಿ ಮಾತನಾಡುತ್ತಿರುವುದು ಆತಂಕಕಾರಿ ಎಂದು ಅವರು ಹೇಳಿದ್ದಾರೆ.

ಶಶಿ ತರೂರ್ ಕಚೇರಿ ಮೇಲೆ ಬಿಜೆಪಿ ದಾಳಿ

ಶಶಿ ತರೂರ್ ಕಚೇರಿ ಮೇಲೆ ಬಿಜೆಪಿ ದಾಳಿ

ಶಶಿ ತರೂರ್ ಅವರ ಹಿಂದೂ ಪಾಕಿಸ್ತಾನ ಹೇಳಿಕೆ ವಿವಾದ ಹುಟ್ಟು ಹಾಕಿದ ಕೂಡಲೇ ಅವರ ತಿರುವನಂತಪುರಂ ನಲ್ಲಿನ ಕಚೇರಿ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ದಾಳಿ ನಡೆಸಿ ದಾಂಧಲೆ ನಡೆಸಿದ್ದರು. ಆದರೆ ಆ ಸಮಯದಲ್ಲಿ ಶಶಿ ತರೂರ್ ಕಚೇರಿಯಲ್ಲಿ ಇರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+