ದೆಹಲಿ ಶಾಲೆಯಲ್ಲಿ 4ರ ಬಾಲಕಿ ಗುಪ್ತಾಂಗದೊಳಗೆ ಪೆನ್ಸಿಲ್ ಹಾಕಿದ ಸಹಪಾಠಿ
ನವದೆಹಲಿ, ನವೆಂಬರ್ 23: ನಾಲ್ಕು ವರ್ಷದ ಬಾಲಕಿ ಮೇಲೆ ಆಕೆಯ ಸಹಪಾಠಿ ಚೂಪಾದ ಪೆನ್ಸಿಲ್ ಹಾಗೂ ಬೆರಳಿನಿಂದ ಎರಡು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಶಿಕ್ಷಕಿ ಇಲ್ಲದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂಬುದನ್ನು ಬಾಲಕಿಯ ತಾಯಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಈ ಘಟನೆ ವರದಿಯಾದ ನಂತರ ಶಾಲೆ ಆಡಳಿತ ಮಂಡಳಿ ಪೋಷಕರಿಗೆ ಸ್ಪಷ್ಟನೆ ನೀಡಿದೆ. ಬಾಲಕರಿಗೆ ಪ್ರತ್ಯೇಕ ತರಗತಿ ಮಾಡಿದ್ದೇವೆ. ನಿಮ್ಮ ಮಗಳನ್ನು ಶಾಲೆಗೆ ಧೈರ್ಯವಾಗಿ ಕಳುಹಿಸಬಹುದು ಎಂದು ಹೇಳಿದೆ.
ಪೊಲೀಸರು ನಾಲ್ಕು ವರ್ಷದ ಬಾಲಕನ ಮೇಲೆ ದೂರು ದಾಖಲಿಸಿದ್ದಾರೆ. ಏಳು ವರ್ಷದೊಳಗಿನ ಮಕ್ಕಳನ್ನು ಕಾನೂನು ಪ್ರಕಾರ ಯಾವುದೇ ಅಪರಾಧಕ್ಕೆ ಹೊಣೆ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ, ಶಾಲೆಯ ಆಡಳಿತ ಮಂಡಳಿಯ ಬೇಜವಾಬ್ದಾರಿತನದಿಂದ ಹೀಗಾಗಿದೆ. ಆದ್ದರಿಂದ ಅವರಿಗೆ ಶಿಕ್ಷೆ ಆಗಬೇಕು ಎಂದು ಬಾಲಕಿಯ ತಾಯಿ ಒತ್ತಾಯಿಸಿದ್ದಾರೆ. ಆದರೆ ಈ ವರೆಗೆ ಶಾಲೆ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ.
"ಆ ಹುಡುಗ ಆಹಾರ ಸೇವಿಸಿದ ಮೇಲೆ ಕೈ ತೊಳೆಯದೆ ನನ್ನ ಮಗಳ ಗುಪ್ತಾಂಗವನ್ನು ಮುಟ್ಟಿದ್ದಾನೆ. ಆ ಸಂದರ್ಭದಲ್ಲಿ ಆಯಾ ಅಲ್ಲಿರಲಿಲ್ಲ. ಇನ್ನು ತರಗತಿಯಲ್ಲಿ ಶಿಕ್ಷಕಿ ಇಲ್ಲದ ವೇಳೆ ಪೆನ್ಸಿಲ್ ಅನ್ನು ಚೂಪು ಮಾಡಿ ಆಕೆಯ ಜನನಾಂಗದೊಳಗೆ ಅದನ್ನು ಹಾಕಿದ್ದಾನೆ" ಎಂದು ಬಾಲಕಿಯ ತಾಯಿ ತಿಳಿಸಿದ್ದಾರೆ.
ಬಾಲಕಿಯ ಗುಪ್ತಾಂಗದಲ್ಲಿ ವಿಪರೀತ ನೋವು ಕಾಣಿಸಿಕೊಂಡ ನಂತರ ಈ ಘಟನೆ ಬಗ್ಗೆ ಪೋಷಕರಿಗೆ ಆಕೆ ತಿಳಿಸಿದ್ದಾಳೆ. ಮಕ್ಕಳ ವೈದ್ಯರು ಸಹ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ದೃಢಪಡಿಸಿದ್ದಾರೆ.
ಆದರೆ, ಪೊಲೀಸರು ಸಂದಿಗ್ಧದಲ್ಲಿದ್ದಾರೆ. ನಾಲ್ಕರ ವಯಸ್ಸಿನ ಬಾಲಕನನ್ನು ಅಪರಾಧಕ್ಕೆ ಹೊಣೆ ಮಾಡಲು ಸಾಧ್ಯವೆ? ಮುಂದೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಚಿಂತನೆ ನಡೆಸಿದ್ದಾರೆ.












Click it and Unblock the Notifications