ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲೂವ್ಹೇಲ್ ಗೇಮ್ ದುಷ್ಪರಿಣಾಮದ ಕುರಿತು ಅರಿವು ಮೂಡಿಸಿ: ಸುಪ್ರೀಂ ಸೂಚನೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 27: ಮಾರಣಾಂತಿಕ ಆನ್ ಲೈನ್ ಆಟ ಬ್ಲೂವ್ಹೇಲ್ ಚಾಲೆಂಜ್ ಕುರಿತು ದೂರದರ್ಶನ ಮತ್ತು ಇತರೆ ಖಾಸಗಿ ವಾಹಿನಿಗಳು ಜಾಗೃತಿ ಮೂಡಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ

ವಿವಾದಾತ್ಮಕ ಬ್ಲೂವ್ಹೇಲ್ ಗೇಮ್ ಕುರಿತಂತೆ ಇಂದು(ಅ.27) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬ್ಲೂವ್ಹೇಲ್ ಆಟ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮದ ಕುರಿತು ಪ್ರೈಂ ಟೈಂ ನಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಜಾಗೃತಿ ಮೂಡಿಸಬೇಕು ಎಂದಿದೆ.

SC asks TV channels to create awareness on health hazards in Blue Whale game

ಚೆನ್ನೈನ ಅಡ್ವೋಕೇಟ್ ಒಬ್ಬರು ಬ್ಲೂವ್ಹೇಲ್ ಗೇಮ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಕೈಗೆತ್ತಿಕೊಂಡಿತ್ತು.

ಬ್ಲೂವ್ಹೇಲ್ ಒಂದು ಆನ್ ಲೈನ್ ಗೇಮ್ ಆಗಿದ್ದು 50 ಅಪಾಯಕಾರಿ ಟಾಸ್ಕ್ ಗಳನ್ನು ಹೊಂದಿರುತ್ತದೆ. ಪ್ರತಿ ಟಾಸ್ಕ್ ನಲ್ಲೂ ವ್ಯಕ್ತಿ ತನ್ನ ದೇಹಕ್ಕೆ ತಾನೇ ಹಿಂಸೆ ಕೊಟ್ಟುಕೊಳ್ಳಬೇಕು. ಕೊನೆಯ ಟಾಸ್ಕ್ ನಲ್ಲಿ ಆಟಗಾರ ಆತ್ಮಹತ್ಯೆಗೆ ಶರಣಾಗಬೇಕು. ಇಂಥ ವಿಚಿತ್ರ, ಅಪಾಯಕಾರಿ, ವಿಕೃತ ಆಟಕ್ಕೆ ಯುವ ಜನಾಂಗ ಬಲಿಯಾಗುತ್ತಿರುವುದು ಸರ್ಕಾರಕ್ಕೂ, ನ್ಯಾಯಾಲಯಕ್ಕೂ ತಲೆನೋವಾಗಿ ಪರಿಣಮಿಸಿದ್ದು, ಇದರ ನಿಷೇಧದ ಕುರಿತು ಎಲ್ಲೆಲ್ಲೂ ಕೂಗಿ ಕೇಳಿಬರುತ್ತಿದೆ.

English summary
The Supreme Court on Oct 27th said the national broadcasting channel Doordarshan and private channels should create awareness on health hazards in Blue Whale Challenge game by telecasting it in their prime time programmes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X