ಕೊರೊನಾ ಚಿಕಿತ್ಸೆ ಬಳಕೆಯಿಂದ ರೆಮ್‌ಡೆಸಿವಿರ್ ಕೈಬಿಡಲು ನಿರ್ಧಾರ - ಹಿರಿಯ ವೈದ್ಯರು
ನವದೆಹಲಿ, ಮೇ 19: ಈವರೆಗೂ ಕೊರೊನಾ ಚಿಕಿತ್ಸೆಗಾಗಿ ಬಳಸಲಾಗುತ್ತಿದ್ದ ಆಂಟಿ-ವೈರಲ್ ಔಷಧಿ ರೆಮ್‌ಡೆಸಿವಿರ್ ಔಷಧಿಯನ್ನು ಶೀಘ್ರದಲ್ಲೇ ಕೊರೊನಾ ಚಿಕಿತ್ಸೆಯಿಂದ ಕೈಬಿಡಲಾಗುತ್ತದೆ ಎಂದು ದೆಹಲಿಯ ಉನ್ನತ ಆಸ್ಪತ್ರೆಯ ಹಿರಿಯ ವೈದ್ಯರು ಮಂಗಳವಾರ ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆಯ ಮಧ್ಯೆ ರೆಮ್‌ಡೆಸಿವಿರ್ ಭಾರೀ ಬೇಡಿಕೆ ಪಡೆದಿದೆ. ಏತನ್ಮಧ್ಯೆ ವೈದ್ಯರು ಈ ಹೇಳಿಕೆಯನ್ನು ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಗಂಗಾ ರಾಮ್ ಆಸ್ಪತ್ರೆಯ ಮುಖ್ಯಸ್ಥ ಡಾ.ಡಿ.ಎಸ್. ರಾಣಾ, ಈ ಆಂಟಿ-ವೈರಲ್ ಔಷಧಿ ಕೊರೊನಾ ಸೋಂಕಿಗೆ ಚಿಕಿತ್ಸೆಗೆ ಪರಿಣಾಮಕಾರಿ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಕೊರೊನಾ ಚಿಕಿತ್ಸೆಗೆ ಬಳಸುವ ಇತರ ಔಷಧಿಗಳಿಗೆ ಹೋಲಿಕೆ ಮಾಡಿದರೆ, ರೆಮ್‌ಡೆಸಿವಿರ್ ಔಷಧಿ ಪರಿಣಾಮದ ಬಗ್ಗೆ ಯಾವುದೇ ಪುರಾವೆ ಇಲ್ಲ. ಯಾವುದೇ ಪರಿಣಾಮ ಬೀರದ ಔಷಧಿಯ ಬಳಕೆ ನಿಲ್ಲಿಸುವುದೇ ಉತ್ತಮ ಎಂದು ಅಭಿಪ್ರಾಯಿಸಿದ್ದಾರೆ.

ಪ್ಲಾಸ್ಮಾ ಥೆರಪಿ ಮೊದಲಾದವುಗಳ ಉತ್ತಮ ಪರಿಣಾಮದ ಬಗ್ಗೆ ಯಾವುದೇ ಪುರಾವೆ ಇಲ್ಲದ ಕಾರಣ ಈಗಗಾಲೇ ಈ ಚಿಕಿತ್ಸೆಗಳನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಈ ಔಷಧಿಯ ಬಳಕೆಯನ್ನು ಸ್ಥಗಿತಗೊಳಿಸುವುದು ಎಂದು ಹೇಳಿದ್ದಾರೆ.












Click it and Unblock the Notifications