ನನ್ ಪರ್ಮಿಶನ್ ಇಲ್ದೆ ಫೋಟೋ ಕ್ಲಿಕ್ ಮಾಡಿದ್ರೆ... ಜೋಕೆ!

Posted By:
Subscribe to Oneindia Kannada

ನವದೆಹಲಿ, ಜುಲೈ 24: ನನ್ ಪರ್ಮಿಶನ್ ಇಲ್ದೆ ಫೋಟೋ ಕ್ಲಿಕ್ ಮಾಡಿದ್ರೆ... ಜೋಕೆ! ಪ್ರಾಣಿಗಳಿಗೂ ಮಾತಾಡೊಕೆ ಬಂದಿದ್ರೆ ಹಾಗೇ ಹೇಳ್ತಿದ್ವೇನೋ. ಆದ್ರೆ ಅವಕ್ಕೆ ಮಾತಾಡೋಕೆ ಬರಲ್ವೇ! ಆದ್ರೇನಂತೆ, ಅವುಗಳ ಯಾವ ನಡೆಯೂ ಮನುಷ್ಯನಿಗಿಂತ ಕಡಿಮೆಯೇನಿಲ್ಲ!

ಹೌದು, ಸರಿಯಾಗಿ ಗಮನಿಸಿದರೆ, ಸೃಷ್ಟಿ ವಿಸ್ಮಯ ಎಂಬ ಅಭೇದ್ಯ ಕೋಟೆಯೊಳಗೆ ಪ್ರತಿದಿನ ಹುಟ್ಟಿಕೊಳ್ಳುವ ಕತೆಗಳು ನೂರಾರು. ಆ ಕತೆಗಳು ವರ್ಣನೆಗೆ, ವಿಮರ್ಶೆಗೆ ಅತೀತವಾದವು. ಸೃಷ್ಟಿಯ ಮಹೋನ್ನತಿಯನ್ನು, ಶ್ರೇಷ್ಠತೆಯನ್ನು, ಕುತೂಹಲ ಹುಟ್ಟಿಸುವ ಗಹನತೆಯನ್ನು ವ್ಯಕ್ತಪಡಿಸುವ ಕೆಲವು ಚಿತ್ರಗಳು ಇಲ್ಲಿವೆ.

ಕಾಜಿರಂಗದ ತುಂಬ ವನ್ಯಪ್ರಾಣಿಗಳ ಮೌನ ರೋದನ

ಜುಲೈ 23 ರಂದು ದೆಹಲಿಯ ರಾಷ್ಟ್ರೀಯ ಝೂಲಾಜಿಕಲ್ ಪಾರ್ಕ್(ದೆಹಲಿ ಝೂ)ನಲ್ಲಿ ಕಮಲ್ ಕಿಶೋರ್ ಎಂಬುವವರು ಕ್ಲಿಕ್ಕಿಸಿದ ಚಿತ್ರಗಳಿವು. ದೆಹಲಿಯ ಈ ಝೂನಲ್ಲಿ 130 ಪ್ರಭೇದದ 1350ಕ್ಕೂ ಹೆಚ್ಚು ಪ್ರಾಣಿಗಳಿವೆ. ಅವು ವನ್ಯಲೋಕದ ರಮಣೀಯತೆಯನ್ನೂ, ರೌದ್ರತೆಯನ್ನೂ, ವನ್ಯಮೃಗಗಳಲ್ಲೂ ಇರುವ ಮಾನವೀಯ ಅಂತಃಕರಣವನ್ನೂ ಪ್ರತಿನಿಧಿಸುವುದು ಸುಳ್ಳಲ್ಲ.

ಹಿಮಾಲಯದಿಂದ ಬಂದ ಅಪರೂಪದ ಅತಿಥಿ ನವರಂಗಿ!

ಪ್ರತಿಯೊಂದು ಪ್ರಾಣಿಗೂ ಪ್ರಕೃತಿಯೇ ನೀಡಿದ ಪಾತ್ರವನ್ನು ನಿರ್ವಹಿಸುವುದು ಇಲ್ಲಿ ಕಡ್ಡಾಯ. ಅಲಿಖಿತ ಕಾಡಿನ ನಿಯಮಕ್ಕೆ ಇಲ್ಲಿನ ಪ್ರತಿಪ್ರಾಣಿಯೂ ಬದ್ಧ! 'ನಾಗರಿಕ' ಎನ್ನಿಸಿಕೊಂಡ ಮನುಷ್ಯನಿಗೂ ಪ್ರೀತಿ, ವಿಶ್ವಾಸ, ನಂಬಿಕೆಯ ಪಾಠ ಹೇಳುವ ವನ್ಯ ಪ್ರಾಣಿಗಳ ಸುಂದರ ಚಿತ್ರಗಳು ಇಲ್ಲಿವೆ. (ಚಿತ್ರ ಕೃಪೆ: ಪಿಟಿಐ)

ಇದು ರ್ರೌದ್ರವೋ, ರಮಣೀಯವೋ!

ಇದು ರ್ರೌದ್ರವೋ, ರಮಣೀಯವೋ!

ದೆಹಲಿ ಝೂ ನಲ್ಲಿ ಬಂಗಾಳದ ಹುಲಿಯೊಂದು ಕಂಡಿದ್ದು ಹೀಗೆ. ಹಸಿದ ಹೊಟ್ಟೆಯ ತವಕವೋ, ಬಂಧನದಲ್ಲಿರುವ ಬೇಸರವೋ, ರಾಷ್ಟ್ರ ಪ್ರಾಣಿ ಎಂಬ ಜಂಭವೋ ಅಥವಾ ಯಾವುದೋ ಹಾಸ್ಯ ನೆನಪಿಸಿಕೊಂಡು ನಗುತ್ತಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಕ್ಯಾಮೆರಾಮನ್ ಗಂತೂ ಸಂತೃಪ್ತಿಯಾಗುವ ಹಾಗೆ ವ್ಯಾಘ್ರ ಪೋಸ್ ಕೊಟ್ಟಿದ್ದು ಹೀಗೆ!

ತಾಯಿ ಪ್ರೀತಿಗೆಲ್ಲಿದೆ ಹೋಲಿಕೆ?

ತಾಯಿ ಪ್ರೀತಿಗೆಲ್ಲಿದೆ ಹೋಲಿಕೆ?

ಮೃಗದ ಹೃದಯದಲ್ಲೂ ಮಾತೃಪ್ರೇಮವಿದೆ. ಮರಿ ಎಂದೊಡನೆ ಅವುಗಳಲ್ಲೂ ಸಹಜವಾಗಿ ಉಕ್ಕುತ್ತದೆ ಅಕ್ಕರೆ, ಪ್ರೇಮ. ದೆಹಲಿ ಝೂ ನಲ್ಲಿ ತನ್ನ ಮರಿಗೆ ಹಾಲುಣಿಸುತ್ತಿರುವ ಕೋತಿ ಕಂಡಿದ್ದು ಹೀಗೆ. ಪುಟ್ಟ ಮರಿಯನ್ನು ಎದೆಗವಚಿಕೊಂಡು ಅವ್ಯಕ್ತ ಪ್ರೀತಿಯ ಅಮೃತಧಾರೆ ಹರಿಸುತ್ತಿರುವ ಈ ಪ್ರೀತಿ ಯಾವ ತಾಯಿ ತನ್ನ ಮಗುವಿಗೆ ತೋರುವ ಪ್ರೀತಿಗಿಂತ ಕಡಿಮೆಯಿದೆ ಹೇಳಿ?

ನವಿಲು ಕುಣಿಯುತಿದೆ ನೋಡೆ...

ನವಿಲು ಕುಣಿಯುತಿದೆ ನೋಡೆ...

ಎಲ್ಲೆಡೆ ಮಳೆ ಸುರಿದು, ಆಗಾಗ ಹೌದೋ, ಅಲ್ಲವೋ ಎಂಬಂತೆ ಸೂರ್ಯಕಿರಣ ಇಣುಕಿ ಹೋಗುತ್ತಿದೆ. ದೆಹಲಿಯ ಝೂ ನಲ್ಲಿ ಒಂದೇ ಒಂದು ಕಿರಣ ಸೋಂಕಿದ ಖುಷಿಗೆ ನವಿಲೊಂದು ಗರಿಬಿಚ್ಚಿ ನೃತ್ಯ ಮಾಡಿತು. ಒಂದೊಂದು ಗರಿಗಳ ಮೇಲೂ ವರ್ಣಮಯ ಚಿತ್ತಾರ ಮೂಡಿಸಿ, ಅವನ್ನೆಲ್ಲ ಒಪ್ಪವಾಗಿ ಜೋಡಿಸಿಟ್ಟ ಭಗವಂತನಿಗೆ ಧನ್ಯವಾದ ಅರ್ಪಿಸಿತು! ರಾಷ್ಟ್ರಪಕ್ಷಿ ಮಯೂರದ ನರ್ತನ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.

''ಹೇ... ನವಿಲೇ... ಹೆಣ್ಣವಿಲೇ...'' (ಮಯೂರ ಜನ್ಮ ರಹಸ್ಯ)

ಗುಟುಕು ಅರಸುತ್ತಾ...

ಗುಟುಕು ಅರಸುತ್ತಾ...

ದೆಹಲಿಯ ಝೂನಲ್ಲಿ ಹೂವಿನ ನಡುವಲ್ಲಿ ಗುಟುಕೇನಾದರೂ ಸಿಕ್ಕೀತಾ ಎಂದು ಹುಡುಕುತ್ತಿರುವ ನೇರಳೇ ಬಣ್ಣದ ಹಕ್ಕಿ ಕಂಡಿದ್ದು ಹೀಗೆ. ಪರ್ಪಲ್ ಸನ್ ಬರ್ಡ್ ಎಂದೇ ಈ ಹಕ್ಕಿ ಜನಪ್ರಿಯವಂತೆ!

ಶಕುನ ಹೇಳುತೀನಿ...

ಶಕುನ ಹೇಳುತೀನಿ...

ಪಿಳಿ ಪಿಳಿ ಕಣ್ಣು ಬಿಡುತ್ತ, ಗಾಂಭೀರ್ಯದಿಂದ ಕುಳಿತ ಗೂಬೆಯೊಂದು ಯಾವುದೋ ಶಕುನ ಹೇಳುವುದಕ್ಕೆ ತವಕದಿಂದಿರುವಂತೆ ಕಂಡಿದ್ದು ಹೀಗೆ! ಬ್ರೌನ್ ಫಿಶ್ ಗೂಬೆ ಎಂದೇ ಕರೆಯಲ್ಪಡುವ ಈ ಗೂಬೆ ಈ ಮೃಗಾಲಯದಲ್ಲಿರುವ ಅಪರೂಪದ ಪ್ರಭೇದವೂ ಹೌದು.

ಜೊತೆಯಲಿ... ಜೊತೆ ಜೊತೆಯಲಿ...

ಜೊತೆಯಲಿ... ಜೊತೆ ಜೊತೆಯಲಿ...

ಏಶ್ಯಾಟಿಕ್ ಸಿಂಹದ ಜೋಡಿಯೊಂದು ದೆಹಲಿಯ ಮೃಗಾಲಯದಲ್ಲಿ ರೊಮಾನ್ಸ್ ಮಾಡುತ್ತಿದ್ದಿದ್ದು ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ! ಅವಕ್ಕೂ ಮಾತು ಬಂದಿದ್ರೆ, 'ನೆಮ್ಮದಿಯಿಂದ ರೊಮಾನ್ಸ್ ಮಾಡೋಕಾದ್ರೂ ಬಿಡ್ರಿ' ಅಂತಿದ್ವೇನೊ!

ರೋಸಿ ಪೆಲಿಕಾನ್

ರೋಸಿ ಪೆಲಿಕಾನ್

ತಣ್ಣನೆ ಗಾಳಿಯಲ್ಲಿ ಸ್ವತಂತ್ರವಾಗಿ ಹಾರುವ ಸೊಬಗಿಗೂ ಮೀರುದ್ದು ಯಾವುದಿದೆ? ದೆಹಲಿ ಝೂ ನ ಅಪರೂಪದ ಹಕ್ಕಿಗಳಾದ ರೋಸಿ ಪೆಲಿಕಾನ್ ನೀರಿನ ಮೇಲೆ ಸ್ವಚ್ಛಂದವಾಗಿ ಹಾರುತ್ತಿದ್ದ ದೃಶ್ಯ ಕಂಡಿದ್ದು ಹೀಗೆ!

IPL 2017: 5 Reasons Why Hyderabad Won Against Delhi | Oneindia Kannada
ಗುಡ್ ಮಾರ್ನಿಂಗ್..!

ಗುಡ್ ಮಾರ್ನಿಂಗ್..!

ದೆಹಲಿ ಮೃಗಾಲಯದ ಆಕರ್ಷಣೆಯ ಕೇಮದ್ರ ಬಿಂದುವಾಗಿರುವ ಬಿಳಿ ಹುಲಿಯೊಂದು ಬೆಳ್ಳಂಬೆಳಗ್ಗೆ ಎದ್ದು ಜಗದಗಲ ಬಾಯ್ದೆರೆದು ಆಕಳಿಸಿ, ಕ್ಯಾಮರಾಮನ್ ಗೆ ಗುಡ್ ಮಾರ್ನಿಂಗ್ ಹೇಳಿದ್ದು ಹೀಗೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Royal Bengal Tiger spotted at its enclosure inside the Delhi zoo or National Zoological Park on July 23rd. Here are so many wonderful pictures, which express real beauty of wildlife. Photos by PTI.
Please Wait while comments are loading...