ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ''ಶ್ರೀರಾಮಚಂದ್ರ''
ನವದೆಹಲಿ, ಮಾರ್ಚ್ 18: "ರಾಮಾಯಣ" ಧಾರಾವಾಹಿ ಖ್ಯಾತಿಯ ಶ್ರೀರಾಮನ ಪಾತ್ರಧಾರಿ ಅರುಣ್ ಗೋವಿಲ್ ಬಿಜೆಪಿ ಸೇರಿದ್ದಾರೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಪಕ್ಷಕ್ಕೆ ಅಧೀಕೃತವಾಗಿ ಸೇರ್ಪಡೆಯಾಗಿದ್ದಾರೆ.
ಅರುಣ್ ಗೋವಿಲ್ ಉತ್ತರ ಪ್ರದೇಶದ ಮೀರತ್‌ನವರಾಗಿದ್ದು, 1987ರಲ್ಲಿ ಪ್ರಸಾರವಾಗುತ್ತಿದ್ದ ರಮಾನಂದ ಸಾಗರ್ ಅವರ "ರಾಮಾಯಣ" ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಿದ್ದರು. ಆ ಪಾತ್ರದಿಂದ ಅರುಣ್ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದರು.
ಹಿಂದಿ, ಒಡಿಯಾ, ಭೋಜಪುರಿ, ತೆಲುಗು, ಭ್ರಜ್ ಭಾಷೆಯ ಹಲವು ಟಿ.ವಿ.ಕಾರ್ಯಕ್ರಮಗಳ ನಿರೂಪಕರಾಗಿಯೂ ಅರುಣ್ ಕಾರ್ಯನಿರ್ವಹಿಸಿದ್ದಾರೆ. 1992ರಲ್ಲಿ ಯುಗೊ ಸಾಕೋ ಇಂಡೊ-ಜಪಾನ್ ಆನಿಮೇಷನ್ ಸಿನಿಮಾ "ರಾಮಾಯಣ; ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮಾ"ಗೆ ವಾಯ್ಸ್ ಓವರ್ ಕೂಡ ನೀಡಿದ್ದರು.

ಪ್ರೇಕ್ಷಕರ ಒತ್ತಾಯದ ಮೇರೆಗೆ ಲಾಕ್‌ಡೌನ್ ಸಮಯದಲ್ಲಿ "ರಾಮಾಯಣ" ಧಾರಾವಾಹಿಯನ್ನು ಮರುಪ್ರಸಾರ ಮಾಡಿದ್ದನ್ನು ಸ್ಮರಿಸಬಹುದು.












Click it and Unblock the Notifications