ರಾಮ್ ನಾಥ್ ಕೋವಿಂದ್ ಗೆ ಟ್ವಿಟ್ಟಿಗರ ಅಭಿನಂದನೆ

Posted By:
Subscribe to Oneindia Kannada

ನವದೆಹಲಿ, ಜುಲೈ 20: ನಿರೀಕ್ಷೆಯಂತೇ ಭಾರತದ 14 ನೇ ರಾಷ್ಟ್ರಪತಿಯಾಗಿ ಎನ್ ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಆಯ್ಕೆಯಾಗಿದ್ದಾರೆ. ಜುಲೈ 17 ರಂದು ನಡೆದಿದ್ದ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಇಂದು(ಜುಲೈ 20) ಬಿಡುಗಡೆಯಾಗಿದ್ದು, ದಲಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಗೆ ಎಲ್ಲೆಡೆಯಿಂದ ಅಭಿನಂದನೆಯ ಮಹಾಪೂರ ಹರಿದುಬರುತ್ತಿದೆ.

ನೂತನ ರಾಷ್ಟ್ರಪತಿ ಸೇರಿದಂತೆ ಈವರೆಗಿನ ರಾಷ್ಟ್ರಾಧ್ಯಕ್ಷರ ಪರಿಚಯ

20 ವರ್ಷದ ಹಿಂದೆ ರಾಮ್ ನಾಥ್ ಕೋವಿಂದ್ ಅವರ ಮಗನ ಮದುವೆಯಲ್ಲಿ ಮೋದಿ ಮತ್ತು ಕೋವಿಂದ್ ಇದ್ದ ಚಿತ್ರವನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ನೂತನ ರಾಷ್ಟ್ರಪತಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಜೊತೆಗೆ ಪರಾಜಿತ ಅಭ್ಯರ್ಥಿ ಕಾಂಗ್ರೆಸ್ ನ ಮೀರಾ ಕುಮಾರ್ ಅವರ ಪ್ರಚಾರ ಕಾರ್ಯ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿವ ಅವರ ಬದ್ಧತೆಯನ್ನು ಕೊಂಡಾಡಿ, ಅವರಿಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಭರ್ಜರಿ ಗೆಲುವಿನೊಂದಿಗೆ 14ನೇ ರಾಷ್ಟ್ರಪತಿಯಾಗಿ ರಾಮ್ ನಾಥ್ ಕೋವಿಂದ್ ಆಯ್ಕೆ
ಜೊತೆಗೆ ಹಲವು ಗಣ್ಯರು ಕೋವಿಂದ್ ಅವರನ್ನು ಅಭಿನಂದಿಸಿದ್ದಾರೆ.

ಇಪ್ಪತ್ತು ವರ್ಷದ ನಂತರ

ಇಪ್ಪತ್ತು ವರ್ಷದ ನಂತರ ಮತ್ತು ಈಗ... ನಿಮ್ಮನ್ನು ರಾಷ್ಟ್ರಪತಿಯಾಗಿ ನೋಡುವುದು ಯಾವಾಗಲೂ ಸಂತಸದ ವಿಷಯ ಎಂದು ಪ್ರಧಾನಿ ಮೋದಿಯವರು ಟ್ವೀಟ್ ಮಾಡಿದ್ದಾರೆ.

ಮೌಲ್ಯಗಳನ್ನು ಎತ್ತಿಹಿಡಿಯುತ್ತಾರೆ

ಭಾರತದ 14 ನೇ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನಮ್ಮ ಸಂವಿಧಾನದ ಮೌಲ್ಯಗಳನ್ನು ಅವರು ಸಮರ್ಥವಾಗಿ ಎತ್ತಿಹಿಡಿಯಲಿದ್ದಾರೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.

ಹೃದಯದಲ್ಲಿದೆ ಗೌರವದ ಸ್ಥಾನ

ಶೇ.65 ಎಂಪಿ, ಎಂಎಲ್ ಎ ಗಳು ರಾಮ್ ನಾಥ್ ಕೋವಿಂದ್ ಅವರಿಗೆ ಮತ ಹಾಕಿದ್ದಾರೆ. ಇದರರ್ಥ ನಮ್ಮೆಲ್ಲ ಹೃದಯದಲ್ಲೂ ಅವರಿಗೆ ಬಹಳ ಗೌರವದ ಸ್ಥಾನವಿದೆ ಎಂಬುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಹರ್ಷ ವರ್ಧನ್ ಟ್ವೀಟ್ ಮಾಡಿದ್ದಾರೆ.

ಅತ್ಯುನ್ನತ ಸಾಂವಿಧಾನಿಕ ಹುದ್ದೆ

ರಾಷ್ಟ್ರದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಆಯ್ಕೆಯಾದ ರಾಮ್ ನಾಥ್ ಕೋವಿಂದ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಟ್ವೀಟ್ ಮಾಡಿದ್ದಾರೆ.

Ram Nath Kovind to be sworn in as 14th President of India on July 25 |

ಅವರ ಅನುಭವ ನಮಗೆ ದಾರಿದೀಪ

ರಾಷ್ಟ್ರಪತಿಯಾಗಿ ಆಯ್ಕೆಯಾದ ಕೋವಿಂದ್ ಅವರಿಗೆ ಅಭಿನಂದನೆಗಳು. ಅವರ ಜ್ಞಾನ ಮತ್ತು ಅನುಭವ ಭಾರತಕ್ಕೆ ಉಪಯುಕ್ತವಾಗುವುದು ಖಂಡಿತ ಎಂದು ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dalit leader Ram Nath Kovind has appointed as 14th presdident of India. Many leaders congratulates him for his success. Here are twitter statements from various leaders on Ram Nath Kovind's success.
Please Wait while comments are loading...