ಜಿಡಿಪಿ ಇಳಿಕೆ: ಟ್ವೀಟ್ ಮೂಲಕ ಮೋದಿ ಕಾಲೆಳೆದ ರಾಹುಲ್

Posted By:
Subscribe to Oneindia Kannada

ನವದೆಹಲಿ, ಜನವರಿ 06: ಪ್ರಸಕ್ತ ಹಣಕಾಸು ವರ್ಷದಲ್ಲಿ(2017-18) ಜಿಡಿಪಿ ದರ ಶೇ.6.5% ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಸೆಂಟ್ರಲ್ ಸ್ಟೆಟಿಸ್ಟಿಕ್ಸ್ ಆಫೀಸ್ ನೀಡಿದ ಮಾಹಿತಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕಾಲೆಳೆದಿದ್ದಾರೆ.

ಜಿಡಿಪಿಯನ್ನು ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ ಬದಲಾಗಿ, ಮೋದಿಯವರ ಗ್ರಾಸ್ ಡಿವಿಸಿವ್ (ವಿಭಜಿಸುವ) ಪೊಲಿಟಿಕ್ಸ್ ಎಂದು ಮಾರ್ಮಿಕವಾಗಿ ವ್ಯಾಖ್ಯಾನಿಸಿದ ರಾಹುಲ್ ಗಾಂಧಿ, ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ಅಂದಾಜು ಜಿಡಿಪಿ ಬೆಳವಣಿಗೆ ದರ ಶೇ. 6.5

ಕೇಂದ್ರ ಸರ್ಕಾರದ ಅಪನಗದೀಕರಣ ಮತ್ತು ಜಿಎಸ್ಟಿ ಜಾರಿಯಿಂದಾಗಿ ದೇಶದ ಅರ್ಥವ್ಯವಸ್ಥೆಗೆ ಆಗಿರುವ ನಷ್ಟದ ಕುರಿತು ಟ್ವೀಟ್ ಮಾಡಿರುವ ಅವರು, ಹೊಸ ಬಂಡವಾಳಗಳು, ಬ್ಯಾಂಕ್ ಲಾಭದ ಬೆಳವಣಿಗೆ, ಉದ್ಯೋಗ ಸೃಷ್ಟಿ, ಕೃಷಿ ಉತ್ಪನ್ನಗಳ ಬೆಳವಣಿಗೆ, ಹಣಕಾಸು ಠೇವಣಿ ಸೇರಿದಂತೆ ಯಾವುದೂ ಮೋದಿ ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಮಾರ್ಚ್ ಹೊತ್ತಿಗೆ 7.1% ರಷ್ಟಿದ್ದ ಜಿಡಿಪಿ ದರ ಈ ಬಾರಿ ಶೇ.6.5 ಕ್ಕೆ ಕುಸಿಯುವ ಅಂದಾಜಿದೆ ಎಂದು ಸೆಂಟ್ರಲ್ ಸ್ಟೆಟಿಸ್ಟಿಕ್ಸ್ ಆಫೀಸ್ ಜ.5 ರಂದು ಹೇಳಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the wake of Ministry of Statistics and Programme Implementation releasing Gross Domestic Product (GDP) numbers during 2017-18, Congress President Rahul Gandhi on Saturday took to Twitter to make a witty remark about Prime Minister Narendra Modi and Union Finance Minister Arun Jaitley.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ