• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ವಿಡಿಯೋ; ಪುಟ್ಟ ಬಾಲಕನನ್ನು ವಿಮಾನದಲ್ಲಿ ಸುತ್ತಿಸಿದ ರಾಹುಲ್ ಗಾಂಧಿ

|

ನವದೆಹಲಿ, ಏಪ್ರಿಲ್ 6: ಪುಟ್ಟ ಬಾಲಕನೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ವಿಮಾನದ ಕಾಕ್‌ಪಿಟ್‌ನಲ್ಲಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋಗೆ ಮೆಚ್ಚುಗೆ ಹರಿದುಬರುತ್ತಿದೆ.

ಈಚೆಗೆ ಕೇರಳಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದ ಸಂದರ್ಭ ಈ ಬಾಲಕನೊಂದಿಗೆ ಮಾತನಾಡಿದ್ದಾರೆ. ನೀನು ಮುಂದೆ ಏನಾಗುತ್ತೀಯ ಎಂದು ರಾಹುಲ್ ಬಾಲಕನನ್ನು ಪ್ರಶ್ನಿಸಿದ್ದು, ತನಗೆ ಪೈಲಟ್ ಆಗಬೇಕು ಎಂದು ಆಸೆಯಿರುವುದಾಗಿ ಬಾಲಕ ಪಟ್ಟನೆ ಉತ್ತರಿಸಿದ್ದಾನೆ. "ನನಗೆ ಹಾರಲು ಇಷ್ಟ. ಅದಕ್ಕೇ ನಾನು ಪೈಲಟ್ ಆಗಲು ಬಯಸಿದ್ದೇನೆ" ಎಂದು ಹೇಳಿದ್ದಾನೆ.

ಕೇರಳದ ಕಣ್ಣೂರಿನ ಒಂಬತ್ತು ವರ್ಷದ ಬಾಲಕ ಅದ್ವೈತ್ ಆಸೆ ಕೇಳಿದ ನಂತರ ರಾಹುಲ್, ಮರುದಿನವೇ ವಿಮಾನದ ಕಾಕ್‌ಪಿಟ್‌ಗೆ ಬಾಲಕನನ್ನು ಕರೆದುಕೊಂಡು ಹೋಗಲು ಸಿದ್ಧತೆ ಮಾಡಿದ್ದಾರೆ. ಮರುದಿನವೇ ಬಾಲಕನನ್ನು ವಿಮಾನದ ಒಳಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕನೊಂದಿಗೆ ಪೈಲಟ್ ಹಾಗೂ ರಾಹುಲ್ ಗಾಂಧಿಯವರು ಕೆಲ ಕಾಲ ಮಾತಾಡುತ್ತಾ ವಿಮಾನದ ಬಗ್ಗೆ ವಿವರಣೆ ನೀಡಿದ್ದಾರೆ.

ಇದು ಭದ್ರತಾ ವೈಫಲ್ಯವಲ್ಲದೇ ಮತ್ತೇನು?; ರಾಹುಲ್ ಪ್ರಶ್ನೆ

ಈ ವಿಡಿಯೋವನ್ನು ರಾಹುಲ್ ಗಾಂಧಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, "ಯಾವ ಕನಸೂ ದೊಡ್ಡದಲ್ಲ. ಅದ್ವೈತ್ ಕನಸನ್ನು ನಿಜಗೊಳಿಸುವ ಮೊದಲ ಹೆಜ್ಜೆ ಇದು. ಇದೀಗ ಆತ ಹಾರಲು ನೆರವಾಗುವ ಪ್ರತಿ ಅವಕಾಶವನ್ನು ನೀಡುವಂತೆ ಸಮಾಜವನ್ನು ಸೃಷ್ಟಿಸಬೇಕಾದ್ದು ನಮ್ಮ ಕರ್ತವ್ಯವಾಗಿದೆ" ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 1.6 ಲಕ್ಷ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ.

English summary
Rahul gandhi taking 9 year old boy to airplane tour recently after he shared his dream of becoming pilot goes viral in social media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X