ಪ್ರಜಾಪ್ರಭುತ್ವ ಹಬ್ಬ: ನಿಮ್ಮ ಮತ 'ನ್ಯಾಯ' ಕ್ಕೆ ಎಂದ ರಾಹುಲ್ ಗಾಂಧಿ
ನವದೆಹಲಿ, ಏಪ್ರಿಲ್ 18: ನಿಮ್ಮ ಮತ 'ನ್ಯಾಯ'ಕ್ಕೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎರಡನೇ ಹಂತದ ಮತದಾನಕ್ಕೆ ಶುಭಹಾರೈಸಿ, ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.
"ನೀವು ಮತ ಚಲಾಯಿಸುವಾಗ ನಿಮ್ಮ ಮತ 'ನ್ಯಾಯ' ಕ್ಕೆ ಎಂಬುದನ್ನು ಮರೆಯದಿರಿ. ನಮ್ಮ ನಿರುದ್ಯೋಗಿ ಯುವಕರಿಗೆ, ಕಷ್ಟಪಡುವ ರೈತರಿಗೆ, ಜಾತಿ ಮತ್ತು ಧರ್ಮದಿಂದಾಗಿ ಕಿರುಕುಳ ಅನುಭವಿಸುವವರಿಗೆ ನ್ಯಾಯ ನೀಡುವವರಿಗೆ ಮತಚಲಾಯಿಸಿ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಕಡುಬಡವರಿಗೆ ತಿಂಗಳಿಗೆ 6000 ರೂ.ನೀಡುವ ಆದಾಯ ಖಾತ್ರಿ ಯೋಜನೆಯನ್ನು ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದರೆ ಜಾರಿಗೆ ತರುವುದಾಗಿ ಹೇಳಿದೆ. ಈ ಯೋಜನೆಗೆ ಅದು 'ನ್ಯಾಯ್' ಎಂದೇ ಹೆಸರಿಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.
When you vote today, remember that you vote for Nyay.
— Rahul Gandhi (@RahulGandhi) April 18, 2019
Nyay for our unemployed youth; for our struggling farmers; for the small traders whose businesses were destroyed by Demonetisation; for those who were persecuted because of their caste or religion. #VoteNyayVoteCongress pic.twitter.com/VvEZPPX5b8
ದೇಶದ ಒಟ್ಟು 12 ರಾಜ್ಯಗಳ 95 ಕ್ಷೇತ್ರಗಳಿಗೆ ಏಪ್ರಿಲ್ 18 ರಂದು ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ. ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿ ಮತ್ತು ಕೇರಳದ ವಯನಾಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೆ.












Click it and Unblock the Notifications