ಚೀನಾ-ಭಾರತ ಗಡಿ ವಿವಾದ: ಸರ್ಕಾರದ ಮೌನ ಗೊಂದಲಕ್ಕೆ ಕಾರಣ-ರಾಹುಲ್ ಗಾಂಧಿ
ದೆಹಲಿ, ಮೇ 29: ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ ಎಂಬ ಭೀತಿ ಉಂಟಾಗಿದೆ. ಈ ವಿಷಯದಲ್ಲಿ ಉಭಯ ರಾಷ್ಟ್ರಗಳ ನಡುವೆ ಏನಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ದೇಶದ ಜನರಿಗೆ ಈ ಬಗ್ಗೆ ಸ್ಪಷ್ಟನೆ ನೀಡಿ, ಇಲ್ಲವಾದಲ್ಲಿ ಗೊಂದಲ ಉಂಟಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
Recommended Video
''ಚೀನಾ ಜೊತೆಯಲ್ಲಿ ಗಡಿಯಲ್ಲಿ ಉಂಟಾಗಿರುವ ಪರಿಸ್ಥಿತಿಯಲ್ಲಿ ಸರ್ಕಾರವೂ ಮೌನವಾಗಿರುವುದರಿಂದ ಗೊಂದಲಗಳಿಗೆ, ಉಹಾಪೋಹಾಗಳಿಗೆ ಕಾರಣವಾಗುತ್ತೆ. ಭಾರತ ಸರ್ಕಾರವೂ ಈ ಕುರಿತು ಸ್ಪಷ್ಟವಾಗಿ ಮತ್ತು ನಿಖರವಾಗಿ ಹೇಳಬೇಕು'' ಎಂದು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.
The Government’s silence about the border situation with China is fueling massive speculation and uncertainty at a time of crisis.
— Rahul Gandhi (@RahulGandhi) May 29, 2020
GOI must come clean and tell India exactly what’s happening.
#ChinaIndiaFaceoff
ಲಡಾಕ್ ಗಡಿ ಭಾಗದಲ್ಲಿ ಚೀನಾ ಮತ್ತು ಭಾರತ ಸರ್ಕಾರಗಳು ಸೈನ್ಯದ ಸಂಖ್ಯೆಯನ್ನು ಹೆಚ್ಚಿಸಿದೆ. ಲಡಾಖ್ ಗಡಿಯಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಭಾರತ ವೇಗ ನೀಡಿರುವುದು ಚೀನಾದ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಮತ್ತೊಂದೆಡೆ ಭಾರತ ಮತ್ತು ಚೀನಾ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾವು ಮಧ್ಯಸ್ಥಿಕೆ ವಹಿಸುತ್ತೇವೆ ಎಂದು ಹೇಳಿದ್ದರು. ಅಮೆರಿಕ ಹೇಳಿಕೆಗೆ ಚೀನಾ ಪ್ರತ್ಯುತ್ತರ ನೀಡಿದ್ದು, ಮೂರನೇ ದೇಶದ ಮಧ್ಯಪ್ರವೇಶ ನಮಗೆ ಬೇಕಿಲ್ಲ ಎಂದಿದೆ.
ಭಾರತ ಮತ್ತು ಚೀನಾದ ನಡುವೆ ಒಟ್ಟು 3,488 ಕಿ.ಮೀ ಗಡಿ ಇದೆ. ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಮತ್ತು ರಾಜ್ಯಗಳಾದ ಉತ್ತರಾಖಂಡ್, ಹಿಮಾಚಲ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶಗಳು ಚೀನಾದ ಜೊತೆ ಗಡಿಯನ್ನು ಹಂಚಿಕೊಂಡಿವೆ.












Click it and Unblock the Notifications