• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಶ್ಮೀರ ರಾಜ್ಯಪಾಲರ ಸವಾಲು ಸ್ವೀಕರಿಸಿದ ರಾಹುಲ್ ಗಾಂಧಿ

|

ನವದೆಹಲಿ, ಆಗಸ್ಟ್ 13: ಜಮ್ಮು ಕಾಶ್ಮೀರ ರಾಜ್ಯಪಾಲರು ರಾಹುಲ್ ಗಾಂಧಿ ಅವರಿಗೆ ಹಾಕಿದ್ದ ಸವಾಲನ್ನು ಷರತ್ತಿನೊಂದಿಗೆ ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ.

'ಒಂದು ಪ್ಲೇನ್ ಕಳಿಸುತ್ತೇನೆ ಅದರಲ್ಲಿ ಬಂದು ಜಮ್ಮು ಕಾಶ್ಮೀರದ ಸ್ಥಿತಿ ನೋಡಿಕೊಂಡು ಹೋಗಿ' ಎಂದು ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರು ರಾಹುಲ್ ಗಾಂಧಿಗೆ ಸವಾಲು ಹಾಕಿದ್ದರು.

ಜಮ್ಮು ಮತ್ತು ಕಾಶ್ಮೀರ ಸೂಕ್ಷ್ಮ ವಿಚಾರ, ಸರ್ಕಾರಕ್ಕೆ ಕಾಲಾವಕಾಶ ಬೇಕು: ಸುಪ್ರೀಂ

ಈ ಸವಾಲನ್ನು ಒಪ್ಪಿಕೊಂಡಿರುವ ರಾಹುಲ್ ಗಾಂಧಿ, ನನಗೆ ವಿಶೇಷ ವಿಮಾನ ಬೇಡ, ಅಲ್ಲಿ ಸ್ವಾತಂತ್ರ್ಯದ ಭರವಸೆ ಕೊಡಿ, ನಾನು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುತ್ತೇನೆ' ಎಂದು ರಾಹುಲ್ ಗಾಂಧಿ ಪ್ರತ್ಯುತ್ತರ ನೀಡಿದ್ದಾರೆ.

'ನಾನು ಮತ್ತು ವಿರೋಧ ಪಕ್ಷದ ನಿಯೋಗವು ಜಮ್ಮು ಕಾಶ್ಮೀರ ಮತ್ತು ಲಡಾಕ್‌ ಗೆ ಭೇಟಿ ನೀಡುತ್ತೇವೆ, ನಮಗೆ ವಿಶೇಷ ವಿಮಾನ ಬೇಡ. ಆದರೆ ಅಲ್ಲಿ ಸ್ವತಂತ್ರ್ಯವಾಗಿ ಓಡಾಡಲು ಮತ್ತು ಅಲ್ಲಿನ ಸ್ಥಳೀಯರೊಂದಿಗೆ ಬೆರೆತು ಮಾತನಾಡಲು ಅವಕಾಶ ಮಾಡಿಕೊಡಿ ಸಾಕು' ಎಂದು ರಾಹುಲ್ ಗಾಂಧಿ ಕೇಳಿದ್ದಾರೆ.

ಕಾಶ್ಮೀರ ಎಂದಿಗೂ ನಿಮ್ಮದಾಗಿರಲಿಲ್ಲ: ಪಾಕ್ ಗೆ ಮುಸ್ಲಿಂ ವಿದ್ವಾಂಸನಿಂದ ತಪರಾಕಿ

ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ನಿಂತಿಲ್ಲವೆಂದು ರಾಹುಲ್ ಗಾಂಧಿ ಅವರು ಕೆಲವು ದಿನಗಳ ಹಿಂದೆಯಷ್ಟೆ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿದ್ದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್, ಒಂದು ವಿಶೇಷ ವಿಮಾನ ಕಳಿಸುತ್ತೇನೆ, ನೀವಿಲ್ಲಿ ಬಂದು ಸತ್ಯ ಏನೆಂದು ತಿಳಿದುಕೊಳ್ಳಿ, ನೀವು ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ, ಹೀಗೆ ಜವಾಬ್ದಾರಿ ರಹಿತವಾಗಿ ಮಾತನಾಡಬಾರದು ಎಂದು ಸತ್ಯಪಾಲ್ ಮಲ್ಲಿಕ್ ಹೇಳಿದ್ದರು. ಇದಕ್ಕೀಗ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

English summary
Congress leader Rahul Gandhi accepted Jammu Kashmir governor challenge of visiting Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X