• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಫೇಲ್: 126 ವಿಮಾನಗಳ ಬದಲು 36 ವಿಮಾನದ ಒಪ್ಪಂದ ನಡೆದಿದ್ದು ಹೀಗೆ

|

ನವದೆಹಲಿ, ಡಿಸೆಂಬರ್ 15: ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಳ್ಳಲಾದ 126 ರಫೇಲ್ ಜೆಟ್ ವಿಮಾನಗಳ ಖರೀದಿ ಹಾಗೂ ಅದರಲ್ಲಿ 108 ವಿಮಾನಗಳನ್ನು ಎಚ್ ಎಎಲ್‌ನಲ್ಲಿಯೇ ತಯಾರಿಸುವ ಒಪ್ಪಂದವನ್ನು 2016ರಲ್ಲಿ ಎನ್‌ಡಿಎ ಸರ್ಕಾರ ಆಫ್‌ಸೆಟ್ ಪಾಲುದಾರನಾಗಿ ರಿಲಯನ್ಸ್ ಏರೋಸ್ಟ್ರಕ್ಚರ್ ಲಿಮಿಟೆಡ್‌ಅನ್ನು ಹೊಂದುವುದರ ಜೊತೆಗೆ 36 ಪರಿಪೂರ್ಣ ಸುಸಜ್ಜಿತ ವಿಮಾನ ಖರೀದಿಯ ಒಪ್ಪಂದವಾಗಿ ಬದಲಾದದ್ದು ಹೇಗೆ ಎಂಬುದನ್ನು ಶುಕ್ರವಾರ ಸುಪ್ರೀಂಕೋರ್ಟ್ ವಿವರಿಸಿದೆ.

ರಕ್ಷಣಾ ಖರೀದಿ ಸಮಿತಿ (ಡಿಎಸಿ) 2007ರ ಜೂನ್ 29ರಂದು 126 ಮಧ್ಯಮ ಬಹೂಪಯೋಗಿ ಕೊಂಬಾಟ್ ಯುದ್ಧವಿಮಾನ (ಎಂಎಂಆರ್ ಸಿಎ) ಖರೀದಿಗೆ ಅಗತ್ಯ ಅನುಮೋದನೆಯನ್ನು ನೀಡಿತ್ತು.

ಇದರಲ್ಲಿ 18 ಯುದ್ಧ ವಿಮಾನಗಳನ್ನು ಮೂಲ ತಯಾರಕರೇ ಸಂಪೂರ್ಣವಾಗಿ ಸಿದ್ಧಗೊಳಿಸಿ ನೀಡಿದರೆ, 108 ವಿಮಾನಗಳನ್ನು ಎಚ್‌ಎಎಲ್ ಮೂಲಕ ತಯಾರಿಸಲಾಗುತ್ತದೆ.

ಕಿವುಡನಿಗೆ ಉತ್ತರ ಕೇಳಿಸುವುದಿಲ್ಲ: ರಾಹುಲ್‌ ವಿರುದ್ಧ ಜೇಟ್ಲಿ ವ್ಯಂಗ್ಯ

ಇದು ಒಪ್ಪಂದಕ್ಕೆ ಸಹಿ ಹಾಕಿದ 11 ವರ್ಷಗಳ ಒಳಗೆ ಪೂರೈಕೆ ಮಾಡಬೇಕು. 2008ರ ಏಪ್ರಿಲ್‌ನಲ್ಲಿ ಆರು ಉತ್ಪಾದಕರು ಪ್ರಸ್ತಾವನೆಗಳನ್ನು ಸಲ್ಲಿಸಿದ್ದರು. ಇವು ತಾಂತ್ರಿಕ ಮತ್ತು ಕ್ಷೇತ್ರ ಮೌಲ್ಯಮಾಪನಕ್ಕೆ ಸಂಬಂಧಿಸಿದವು

ಆರಂಭದ ಹಂತ

ಆರಂಭದ ಹಂತ

2011ರ ನವೆಂಬರ್‌ನಲ್ಲಿ ಕಮರ್ಷಿಯಲ್ ಬಿಡ್‌ಗಳು ಆರಂಭವಾದವು. 2012ರ ಜನವರಿಯಲ್ಲಿ ಡಸಾಲ್ಟ್ ಏವಿಯೇಷನ್ ಅತ್ಯಂತ ಕಡಿಮೆ ಬಿಡ್‌ ಸಲ್ಲಿಸಿತು. ಅಲ್ಲಿಂದ ವಿಚಾರವಿನಿಮಯಗಳು ನಡೆದು ಮುಂದುವರಿದವವು. ಆದರೆ, ಅಂತಿಮ ಫಲಿತಾಂಶ ದೊರಕಲಿಲ್ಲ. ಈ ನಡುವೆ 2014ರ ಮಧ್ಯೆ ಕೇಂದ್ರದಲ್ಲಿ ರಾಜಕೀಯ ಸ್ಥಿತ್ಯಂತರವಾಯಿತು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಬಿಜೆಪಿ ಹಿಂದೆ ಕೂಡ ರಫೇಲ್ ನಂಥ ಅಗ್ನಿ ಪರೀಕ್ಷೆ ಎದುರಿಸಿತ್ತು!

ಎಚ್ ಎಎಲ್ ಏಕಿಲ್ಲ?

ಎಚ್ ಎಎಲ್ ಏಕಿಲ್ಲ?

ಫ್ರಾನ್ಸ್‌ನ ಯುದ್ಧ ವಿಮಾನ ತಯಾರಕಾ ಸಂಸ್ಥೆಗೆ ಹೋಲಿಸಿದರೆ ಯುದ್ಧ ವಿಮಾನಗಳ ತಯಾರಿಕೆಗೆ ಎಚ್‌ ಎಎಲ್‌ಗೆ 2.7 ಪಟ್ಟು ಹೆಚ್ಚು ಮಾನವ ಗಂಟೆಗಳು ಬೇಕು. ಅಲ್ಲದೆ, ಡಸಾಲ್ಟ್ 108 ವಿಮಾನಗಳನ್ನು ಎಚ್ ಎಎಲ್ ಮೂಲಕ ತಯಾರಿಸುವ ಒಪ್ಪಂದದಲ್ಲಿನ ಗೊಂದಲಗಳು ಮೂರು ವರ್ಷಗಳಾದರೂ ಬಗೆಹರಿದಿರಲಿಲ್ಲ.

ರಫೇಲ್ ಮೌಲ್ಯ ನಿರ್ಧಾರ ನಮ್ಮ ಕೆಲಸವಲ್ಲ: ಕೋರ್ಟ್ ಹೇಳಿದ್ದೇನು?

ಯುರೋ ವಿನಿಮಯ ದರ

ಯುರೋ ವಿನಿಮಯ ದರ

'ಈ ರೀತಿಯ ವಿಳಂಬವು ವಿಮಾನ ಖರೀದಿ ದರ ಮೇಲೆ ಪರಿಣಾಮ ಬೀರಿದೆ. ಒಪ್ಪಂದದ ಪ್ರಕಾರ ವಿಮಾನ ತಯಾರಿಕೆ ಪ್ರಕ್ರಿಯೆಯು ಯುರೋ-ರೂಪಾಯಿ ವಿನಿಮಯ ದರದ ಏರಿಳಿತಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಈ ಬಿಕ್ಕಟ್ಟು 2015ರ ಮಾರ್ಚ್‌ನಲ್ಲಿ ಆರ್‌ಎಫ್‌ಪಿ (ಖರೀದಿಯ ಮನವಿ) ಪ್ರಕ್ರಿಯೆಗೆ ಹಿನ್ನಡೆ ಉಂಟುಮಾಡಿತು' ಎಂದು ಕೋರ್ಟ್ ಹೇಳಿದೆ.

ಕೇಂದ್ರ ಸರ್ಕಾರದ ಪರ ರಫೇಲ್ ತೀರ್ಪು: ಗಣ್ಯರೇನಂತಾರೆ?

ಡಿಎಸಿ ಅನುಮೋದನೆ

ಡಿಎಸಿ ಅನುಮೋದನೆ

2015ರ ಏಪ್ರಿಲ್ 10ರಂದು ಸಂಪೂರ್ಣ ಹಾರಾಟದ ಸ್ಥಿತಿಯಲ್ಲಿ ಇರುವ 36 ಯುದ್ಧ ವಿಮಾನಗಳ ಖರೀದಿ ಮಾಡುವುದಾಗಿ ಭಾರತ-ಫ್ರಾನ್ಸ್ ಜಂಟಿ ಹೇಳಿಕೆ ತಿಳಿಸಿತು.

ಇದಕ್ಕೆ ಅಂತರ್ ಸರ್ಕಾರ ಒಪ್ಪಂದ ನಡೆಸಲಾಗಿದ್ದು, ಡಿಎಸಿ ಒಪ್ಪಿಗೆ ದೊರಕಿತ್ತು. 2015ರ ಜೂನ್‌ನಲ್ಲಿ 126 ಜೆಟ್ ವಿಮಾನಗಳ ಆರ್‌ಎಫ್‌ಪಿಯನ್ನು ಕೊನೆಗೂ ಹಿಂಪಡೆಯಲಾಯಿತು.

ಬಳಿಕ ಮಾತುಕತೆಗಳು ಆರಂಭವಾಗಿ ಅಂತರ್ ಸಚಿವಾಲಯ ಚರ್ಚೆಗಳು ಪೂರ್ಣಗೊಂಡ ಬಳಿಕ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಒಪ್ಪಿಗೆ ಪಡೆದುಕೊಳ್ಳಲಾಯಿತು.

2016ರ ಸೆ. 23ರಂದು ಸಹಿ

2016ರ ಸೆ. 23ರಂದು ಸಹಿ

ಒಪ್ಪಂದದಲ್ಲಿ ಯುದ್ಧ ವಿಮಾನ ಪೂರೈಕೆ ಪ್ಯಾಕೇಜ್ ಶಿಷ್ಟಾಚಾರ, ಶಸ್ತ್ರಾಸ್ತ್ರ ಪೂರೈಕೆ ಪ್ಯಾಕೇಜ್ ಶಿಷ್ಟಾಚಾರ, ತಾಂತ್ರಿಕ ಒಪ್ಪಂದಗಳು ಮತ್ತು ಆಫ್‌ಸೆಟ್ ಒಪ್ಪಂದಗಳಿಗೆ 36 ರಫೇಲ್ ಜೆಟ್‌ಗಳ ಖರೀದಿದಾಗಿ 2016ರ ಸೆ. 23ರಂದು ಸಹಿ ಹಾಕಲಾಯಿತು.

2019ರ ಅಕ್ಟೋಬರ್‌ನಿಂದ ಈ ವಿಮಾನಗಳ ಪೂರೈಕೆ ಆರಂಭವಾಗುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ನೀಡಿದ ವಿವರಗಳನ್ನು ಸುಪ್ರೀಂಕೋರ್ಟ್ ಶುಕ್ರವಾರ ಉಲ್ಲೇಖಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Supreme Court on Friday narrated how the 126 rafale aircraft deal of UPA got replaced by 36 jets of NDA government.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more