ಭಾರತ ಸೇರಿದಂತೆ 14 ರಾಷ್ಟ್ರಗಳಿಗೆ ನಿರ್ಬಂಧ ಹೇರಿದ ಕತಾರ್

ದೆಹಲಿ, ಮಾರ್ಚ್ 9: ಕೊರೊನಾ ವೈರಸ್ ಭೀತಿಯಿಂದ ವಿದೇಶಿ ಪ್ರವಾಸ ಮಾಡಲು ಭಾರತೀಯರು ಹಿಂಜರಿಯುತ್ತಿದ್ದಾರೆ. ಅದೇ ರೀತಿ ವಿದೇಶಿಗರ ಭಾರತ ಪ್ರವೇಶ ಕೂಡ ಆತಂಕ ಸೃಷ್ಟಿಸಿದೆ. ಕೊರೊನಾ ವೈರಸ್‌ಗೆ ಒಳಗಾಗಿರುವ ಬಹುತೇಕ ದೇಶಗಳ ಸ್ಥಿತಿಯೂ ಹೀಗೆ ಇದೆ.

ಇದೀಗ, ಗಲ್ಫ್ ರಾಷ್ಟ್ರ ಕತಾರ್ ಭಾರತ ಸೇರಿದಂತೆ 14 ದೇಶಕ್ಕೆ ತಾತ್ಕಲಿಕ ನಿರ್ಬಂಧ ಹೇರಿದೆ. ಕೊರೊನಾ ವೈರಸ್‌ ಭೀತಿ ಹಿನ್ನೆಲೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಹೊರ ದೇಶಗಳಿಂದ ಬರುವ ಸಾರ್ವಜನಿಕರಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಭಾರತದ ಜೊತೆಗೆ ಬಾಂಗ್ಲಾದೇಶ, ಚೀನಾ, ಈಜಿಫ್ಟ್, ಇರಾನ್, ಇರಾಕ್, ನೇಪಾಳ, ಸೌತ್ ಕೊರಿಯಾ, ಶ್ರೀಲಂಕಾ, ಥೈಲ್ಯಾಂಡ್, ಸಿರಿಯಾ, ಫಿಲಿಪೈನ್ಸ್, ಲೆಬನಾನ್ ದೇಶದ ಜನರಿಗೆ ಪ್ರವೇಶಕ್ಕೆ ಅವಕಾಶ ನೀಡದಿರಲು ನಿರ್ಧರಿಸಿದೆ.

Qatar Bans Entry Of People From India And 13 Other Countries

''ಕೊರೊನಾ ವೈರಸ್ (COVID-19) ವಿಶ್ವಾದ್ಯಂತ ಹರಡುವಿಕೆಯನ್ನು ತಡೆಗಟ್ಟುವ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ'' ಎಂದು ಕತಾರ್ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.

ಮೂಲಗಳ ಮಾಹಿತಿ ಪ್ರಕಾರ ''ಭಾರತೀಯ ವಿಮಾನಗಳ ಪ್ರಯಾಣವನ್ನು ಕತಾರ್ ಏರ್ವೈಸ್ ಅವರು ನಿಲ್ಲಿಸಿದ್ದಾರೆ'' ಎನ್ನಲಾಗಿದೆ. ಕತಾರ್ ಏರ್ವೈಸ್ ಅವರು ದೋಹದಿಂದ ದೆಹಲಿ ಸೇರಿದಂತೆ ಭಾರತೀಯ ಇತರೆ ನಗರಗಳಿಗೆ ವಾರಕ್ಕೆ 102 ವಿಮಾನ ಸಂಚರ ಮಾಡುತ್ತೆ ಎಂದು ತಿಳಿದುಬಂದಿದೆ.

ಕತಾರ್‌ನಲ್ಲಿ ಇದುವರೆಗೂ 18 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+