ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೋವಿಶೀಲ್ಡ್ ಕೊರೊನಾ ಲಸಿಕೆ ಬೆಲೆ ಎಷ್ಟಿದೆ?

|
Google Oneindia Kannada News

ನವದೆಹಲಿ, ಜನವರಿ 04: ಭಾರತದಲ್ಲಿ ಎರಡು ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಸೆರಂ ಇನ್ ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಆಸ್ಟ್ರಾಜೆನಿಕಾ ಹಾಗೂ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ದೊರೆತಿದೆ.

ಇದೀಗ ಲಸಿಕೆ ದರದ ಕುರಿತು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ವಿಶ್ವದ ಬೃಹತ್ ಲಸಿಕೆ ತಯಾರಕ ಸಂಸ್ಥೆ ಸೆರಂ ಇನ್ ಸ್ಟಿಟ್ಯೂಟ್ ಮಾಹಿತಿ ನೀಡಿದ್ದು, ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್ ಗೆ ಸರ್ಕಾರಕ್ಕೆ 219-292 ರೂ ಬೆಲೆ ಇದ್ದು, ಖಾಸಗಿ ಮಾರುಕಟ್ಟೆಯಲ್ಲಿ ಪರಿಚಿತವಾದರೆ ಇದರ ಬೆಲೆ ಅಧಿಕವಿರಲಿದೆ ಎಂದು ತಿಳಿದುಬಂದಿದೆ.

ಲಸಿಕೆಯನ್ನೂ ರಾಜಕೀಯಗೊಳಿಸುತ್ತಿರುವುದು ಬೇಸರ; ಭಾರತ್ ಬಯೋಟೆಕ್ಲಸಿಕೆಯನ್ನೂ ರಾಜಕೀಯಗೊಳಿಸುತ್ತಿರುವುದು ಬೇಸರ; ಭಾರತ್ ಬಯೋಟೆಕ್

ಸೆರಂ ಇನ್ ಸ್ಟಿಟ್ಯೂಟ್ ಈಗಾಗಲೇ 50 ಮಿಲಿಯನ್ ಡೋಸ್ ಗಳನ್ನು ತಯಾರಿಸಿದೆ. ಭಾರತಕ್ಕೆ ಮೊದಲ ಹಂತದಲ್ಲಿ ಕಂಪನಿ ಲಸಿಕೆ ಪೂರೈಕೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಖಾಸಗಿ ಮಾರುಕಟ್ಟೆಗೆ ಲಸಿಕೆಗಳನ್ನು ಪರಿಚಯಿಸಿರುವುದಾಗಿ ಸಿಇಒ ಪೂನಾವಾಲಾ ತಿಳಿಸಿದ್ದಾರೆ.

Price Of Covishield Coronavirus Vaccine In India

"ಲಸಿಕೆಗಳು ಎಲ್ಲರಿಗೂ ದೊರೆಯಬೇಕು ಹಾಗೂ ಕೈಗೆಟುಕುವ ದರದಲ್ಲಿ ಸಿಗಬೇಕು. ಬೃಹತ್ ಪ್ರಮಾಣದಲ್ಲಿ ಭಾರತ ಸರ್ಕಾರ ಲಸಿಕೆಗಳನ್ನು ಖರೀದಿಸಲಿದ್ದು, ಕಡಿಮೆ ಬೆಲೆಗೆ ಲಸಿಕೆಗಳು ದೊರೆಯಲಿವೆ. ಅವಶ್ಯಕತೆಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಖಾಸಗಿ ಮಾರುಕಟ್ಟೆಯಲ್ಲಿ ಲಸಿಕೆಯನ್ನು ಪರಿಚಯಿಸಲಾಗುವುದು. ಖಾಸಗಿಯಾಗಿ ಇದರ ಬೆಲೆ 430-580ರೂ ಇರಲಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ತಿಂಗಳಿಗೆ 100 ಮಿಲಿಯನ್ ಡೋಸ್ ಗಳನ್ನು ಉತ್ಪಾದಿಸುತ್ತಿದ್ದು, ಏಪ್ರಿಲ್ ವೇಳೆಗೆ ದುಪ್ಪಟ್ಟು ಉತ್ಪಾದನೆಯಾಗಲಿದೆ. ಭಾರತ ಸರ್ಕಾರ ಜುಲೈ ವೇಳೆಗೆ 300 ಮಿಲಿಯನ್ ಡೋಸ್ ಗಳ ಅವಶ್ಯಕತೆ ಇರುವುದಾಗಿ ಸೂಚಿಸಿದೆ. ಆರಂಭಿಕವಾಗಿ 50 ಮಿಲಿಯನ್ ಡೋಸ್ ಲಸಿಕೆ ಸರಬರಾಜು ಮಾಡುತ್ತೇವೆ. ಹೆಚ್ಚಿನ ಅವಶ್ಯಕತೆ ಬಂದಾಗ ಇನ್ನಷ್ಟು ಲಸಿಕೆಗಳನ್ನು ಪೂರೈಸಲಾಗುವುದು. ಬೇಡಿಕೆ ಬಂದ ಹತ್ತು ದಿನಗಳ ಒಳಗೆ ಲಸಿಕೆ ಪೂರೈಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

English summary
Coronavirus vaccine developed by AstraZeneca and the University of Oxford will cost USD 3-4 per shot (Rs 219-292) to the government and will be priced at double that rate in private market
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X