ಸಹಮತ ಸೆಕ್ಸ್ ರೇಪ್ ಆಗುವುದಿಲ್ಲ: ಕೋರ್ಟ್

ನವದೆಹಲಿ, ಜ.5: ಮದುವೆ ಮಾಡಿಕೊಳ್ಳುವ ಭರವಸೆ ಸಿಕ್ಕಮೇಲೆ ಇಬ್ಬರು ವಯಸ್ಕರು ಪರಸ್ಪರ ಸಹಮತದಿಂದ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರದ ವ್ಯಾಪ್ತಿಗೆ ಸೇರಿಸಲು ಬರುವುದಿಲ್ಲ ಎಂಬ ಆದೇಶವನ್ನು ದೆಹಲಿ ನ್ಯಾಯಾಲಯ ಮತ್ತೊಮ್ಮೆ ಎತ್ತಿ ಹಿಡಿದಿದೆ. ವಿವಾಹ ಪೂರ್ವ ಲೈಂಗಿಕ ಸಂಬಂಧಗಳು ಅನೈತಿಕತೆಯ ಪರಮಾವಧಿಯಾಗಿದ್ದು, ಯಾವುದೇ ಧರ್ಮ ಇದಕ್ಕೆ ಸಮ್ಮತಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಒಬ್ಬ ಮಹಿಳೆ, ಅದರಲ್ಲೂ ವಯಸ್ಕಳಾದವಳು, ವಿದ್ಯಾವಂತೆ ಹಾಗೂ ಕಚೇರಿ ಉದ್ಯೋಗಿಯೂ ಆಗಿದ್ದು, ವಿವಾಹವಾಗುವುದಾಗಿ ಆಶ್ವಾಸನೆ ನೀಡಿದ ವ್ಯಕ್ತಿಯ ಜತೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡರೆ ಅದು ಆ ಮಹಿಳೆ ತನಗೆ ತಾನೇ ತಂದುಕೊಂಡ ಗಂಡಾಂತರವಷ್ಟೇ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವೀರೇಂದರ್‌ಭಟ್ ಸ್ಪಷ್ಟಪಡಿಸಿದ್ದಾರೆ.

ಉನ್ನತ ಶಿಕ್ಷಣವಿದ್ದು, ದೊಡ್ಡ ಉದ್ಯೋಗದಲ್ಲಿರುವ ವಯಸ್ಕ ಮಹಿಳೆ ತನ್ನ ಗೆಳೆಯ ಅಥವಾ ಸಹೋದ್ಯೋಗಿ ವಿವಾಹದ ಭರವಸೆ, ಆಶ್ವಾಸನೆಗಳನ್ನು ನೀಡಿದನೆಂದು ಅವನೊಂದಿಗೆ ವಿವಾಹಪೂರ್ವ ಲೈಂಗಿಕ ಕ್ರಿಯೆಗೆ ಸಮ್ಮತಿಸುವುದು ಅತ್ಯಾಚಾರ ಎನಿಸಲಾರದು ಎಂಬುದು ನನ್ನ ಅಭಿಪ್ರಾಯ.

Pre-marital sex 'immoral', no religion permits it: Court

ಅಲ್ಲದೆ, ಯಾವುದೇ ಧರ್ಮದ ಅನುಯಾಯಿಗಳು ವಿವಾಹೇತರ ಲೈಂಗಿಕ ಸಂಬಂಧವನ್ನು ಒಪ್ಪುವುದಿಲ್ಲ. ಒಂದು ವೇಳೆ ಮದುವೆಯಾಗುವೆನೆಂದು ಹೇಳಿದ ಪುರುಷ ಕೈ ಕೊಟ್ಟರೆ ಅದಕ್ಕೆ ನೇರವಾಗಿ ಆ ಮಹಿಳೆಯೇ ಹೊಣೆಯಾಗುತ್ತಾಳೆ. ಕಾನೂನು ಅಂಥ ಪ್ರಕರಣವನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ದೆಹಲಿಯ ಆಡಳಿತಾಧಿಕಾರಿ ಕಚೇರಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು 2011ರ ಮೇನಲ್ಲಿ ಪಂಜಾಬ್ ಮೂಲದ 29ರ ಹರೆಯದ ವ್ಯಕ್ತಿಯನ್ನು ಬಂಧಿಸಿದ್ದರು.

ಅವನ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ, ತಾನೊಬ್ಬ ಅನಾಥೆಯಾಗಿದ್ದು, ತನಗೆ ವಿವಾಹವಾಗುವ ಆಶ್ವಾಸನೆ ನೀಡಿ ನನ್ನನ್ನು ಹಲವಾರು ಬಾರಿ ಲೈಂಗಿಕವಾಗಿ ಬಳಸಿಕೊಂಡು ಈಗ ಕೈ ಕೊಟ್ಟಿದ್ದಾನೆ ಎಂದು ದೂರಿದ್ದಳು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ವೀರೇಂದರ್ ‌ಭಟ್ ಅವರು, ಈ ಮೇಲಿನಂತೆ ತೀರ್ಪು ನೀಡಿ ಅರ್ಜಿಯನ್ನು ವಜಾ ಮಾಡಿದರು. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+