• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿ7 ಶೃಂಗಸಭೆಯಲ್ಲಿ ನಾಯಕರನ್ನು ಭೇಟಿ ಮಾಡಲು ಎದುರುನೋಡುತ್ತಿದ್ದೇನೆ: ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಜೂನ್ 26: ಜೂನ್ 26-27ರವರೆಗೆ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜರ್ಮನಿಗೆ ತೆರಳಿದ್ದು, ಅಲ್ಲಿ ಜಿ7 ಮತ್ತು ಅತಿಥಿ ರಾಷ್ಟ್ರಗಳೊಂದಿಗೆ ಸಭೆ ನಡೆಸಲಿದ್ದಾರೆ ಮತ್ತು ಸಮಕಾಲೀನ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.

ಶೃಂಗಸಭೆಯಿಂದ ಪ್ರಧಾನಿ ಮೋದಿ ಭಾರತಕ್ಕೆ ವಾಪಸಾಗುವ ಸಂದರ್ಭದಲ್ಲಿ ಯುಎಇಗೂ ಪ್ರಯಾಣಿಸಲಿದ್ದಾರೆ. ಸಭೆಯಲ್ಲಿ ಭಾಗವಹಿಸುವ ಮೊದಲು ಜರ್ಮನಿಗೆ ತೆರಳುವ ಮೊದಲು ಶೃಂಗಸಭೆ ಕುರಿತು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದ ಮಾನವ ಸಂಪನ್ಮೂಲ ಕೃಷಿಯಲ್ಲಿ ತೊಡಗಿಕೊಳ್ಳುವ ಅಗತ್ಯವಿದೆಭಾರತದ ಮಾನವ ಸಂಪನ್ಮೂಲ ಕೃಷಿಯಲ್ಲಿ ತೊಡಗಿಕೊಳ್ಳುವ ಅಗತ್ಯವಿದೆ

"ನಾನು ಜಿ7 ದೇಶಗಳು, ಜಿ7 ಪಾಲುದಾರ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಪರಿಸರ, ಶಕ್ತಿ, ಹವಾಮಾನ, ಆಹಾರ ಭದ್ರತೆ, ಆರೋಗ್ಯ, ಭಯೋತ್ಪಾದನೆ ನಿಗ್ರಹ, ಲಿಂಗ ಸಮಾನತೆ ಮತ್ತು ಪ್ರಜಾಪ್ರಭುತ್ವದಂತಹ ಸಾಮಾಜಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇನೆ. ಶೃಂಗಸಭೆಯಲ್ಲಿ ಭಾಗವಹಿಸುವ ಕೆಲವು ಜಿ7 ಮತ್ತು ಅತಿಥಿ ರಾಷ್ಟ್ರಗಳು ನಾಯಕರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ," ಎಂದು ಪ್ರಧಾನಿ ಮೋದಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ, ಪ್ರಧಾನಿ ಮೋದಿ ಜೂನ್ 28 ರಂದು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಗೆ ಪ್ರಯಾಣಿಸಲಿದ್ದಾರೆ.

ಉದ್ಯಮ ವಿಸ್ತರಣೆಗೆ ಫಾಕ್ಸ್‌ಕಾನ್ ಅಧ್ಯಕ್ಷರಿಗೆ ಸ್ವಾಗತ ಕೋರಿದ ಮೋದಿಉದ್ಯಮ ವಿಸ್ತರಣೆಗೆ ಫಾಕ್ಸ್‌ಕಾನ್ ಅಧ್ಯಕ್ಷರಿಗೆ ಸ್ವಾಗತ ಕೋರಿದ ಮೋದಿ

ಜರ್ಮನಿ ಜೊತೆ ಮೋದಿ ದ್ವಿಪಕ್ಷೀಯ ಸಭೆ

ಜರ್ಮನಿ ಜೊತೆ ಮೋದಿ ದ್ವಿಪಕ್ಷೀಯ ಸಭೆ

ಶೃಂಗಸಭೆಯಲ್ಲಿ, ಪಿಎಂ ಮೋದಿ ಭಾಗವಹಿಸುವ ಕೆಲವು ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಜಿ7 ಶೃಂಗಸಭೆಯ ಆಹ್ವಾನವು ಭಾರತ ಮತ್ತು ಜರ್ಮನಿ ನಡುವಿನ ಬಲವಾದ ಮತ್ತು ನಿಕಟ ಪಾಲುದಾರಿಕೆ ಮತ್ತು ಉನ್ನತ ಮಟ್ಟದ ರಾಜಕೀಯ ಸಂಪರ್ಕಗಳ ಸಂಪ್ರದಾಯಕ್ಕೆ ಅನುಗುಣವಾಗಿದೆ.

ಭಾರತ-ಜರ್ಮನಿ ಅಂತರ ಸರ್ಕಾರಿ ಸಮಾಲೋಚನೆಗಳ (IGC) ಆರನೇ ಆವೃತ್ತಿಗಾಗಿ 2022 ರ ಮೇ 2 ರಂದು ಪ್ರಧಾನಿ ಮೋದಿ ಜರ್ಮನಿಗೆ ಭೇಟಿ ನೀಡಿದ್ದರು.

ಜರ್ಮನಿ ಚಾನ್ಸಲರ್ ಭೇಟಿಯಾಗಲು ಸಂತೋಷವಾಗುತ್ತದೆ

ಜರ್ಮನಿ ಚಾನ್ಸಲರ್ ಭೇಟಿಯಾಗಲು ಸಂತೋಷವಾಗುತ್ತದೆ

ಜಿ7 ಶೃಂಗಸಭೆಗೆ ನಿರ್ಗಮಿಸುವ ಮೊದಲು, ಉತ್ಪಾದಕ ಭಾರತ-ಜರ್ಮನಿ ಐಜಿಸಿ ನಂತರ ಜರ್ಮನಿಯ ಚಾನ್ಸೆಲರ್ ಸ್ಕೋಲ್ಜ್‌ರನ್ನು ಮತ್ತೆ ಭೇಟಿಯಾಗಲು ಸಂತೋಷವಾಗುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

"ಜರ್ಮನ್ ಪ್ರೆಸಿಡೆನ್ಸಿಯ ಅಡಿಯಲ್ಲಿ ಜಿ7 ಶೃಂಗಸಭೆಗಾಗಿ ನಾನು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಆಹ್ವಾನದ ಮೇರೆಗೆ ಜರ್ಮನಿಯ ಸ್ಕ್ಲೋಸ್ ಎಲ್ಮೌ (Schloss Elmau)ಗೆ ಭೇಟಿ ನೀಡಲಿದ್ದೇನೆ. ಕಳೆದ ತಿಂಗಳು ಸರ್ಕಾರಿ ಸಮಾಲೋಚನೆಗಳಲ್ಲಿ ಭೇಟಿಯಾದ ನಂತರ ಮತ್ತೊಮ್ಮೆ ಚಾನ್ಸೆಲರ್ ಸ್ಕೋಲ್ಜ್ ಅವರನ್ನು ಭೇಟಿಯಾಗಲು ಸಂತೋಷವಾಗುತ್ತದೆ" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಶೃಂಗಸಭೆಯಲ್ಲಿ ಜಗತ್ತಿನ ದೇಶಗಳ ನಾಯಕರ ಭೇಟಿ

ಶೃಂಗಸಭೆಯಲ್ಲಿ ಜಗತ್ತಿನ ದೇಶಗಳ ನಾಯಕರ ಭೇಟಿ

ಶೃಂಗಸಭೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇತರರು ಭಾಗವಹಿಸುವ ಸಾಧ್ಯತೆಯಿದೆ.

ಜರ್ಮನಿಯಲ್ಲಿ ಅವರು ತಮ್ಮ ಸ್ಥಳೀಯ ಆರ್ಥಿಕತೆಗೆ ಅಪಾರ ಕೊಡುಗೆ ನೀಡುತ್ತಿರುವ ಮತ್ತು ಯುರೋಪಿಯನ್ ರಾಷ್ಟ್ರಗಳೊಂದಿಗಿನ ನಮ್ಮ ಸಂಬಂಧವನ್ನು ಶ್ರೀಮಂತಗೊಳಿಸುತ್ತಿರುವ ಯುರೋಪಿನಾದ್ಯಂತದ ಭಾರತೀಯರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಯುಎಇಗೆ ಭೇಟಿ ನೀಡಲಿರುವ ಮೋದಿ

ಯುಎಇಗೆ ಭೇಟಿ ನೀಡಲಿರುವ ಮೋದಿ

ಪ್ರಧಾನಿ ಮೋದಿ ಜೂನ್ 28 ರಂದು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಗೆ ಪ್ರಯಾಣಿಸಲಿದ್ದಾರೆ. ಯುಎಇ ಮಾಜಿ ಅಧ್ಯಕ್ಷ ಮತ್ತು ಅಬುಧಾಬಿ ಆಡಳಿತಗಾರ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ನಿಧನದ ಬಗ್ಗೆ ತಮ್ಮ ಸಂತಾಪ ವ್ಯಕ್ತಪಡಿಸಲಿದ್ದಾರೆ.

"ಯುಎಇಯ ಹೊಸ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರರಾಗಿ ಆಯ್ಕೆಯಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಲಿದ್ದಾರೆ" ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಜೂನ್ 28 ರಂದು ಅದೇ ರಾತ್ರಿ ಪ್ರಧಾನಿ ಮೋದಿ ಯುಎಇಯಿಂದ ನಿರ್ಗಮಿಸಲಿದ್ದಾರೆ.

English summary
Prime Minister Narendra Modi on Sunday departed for Germany to attend the G7 Summit, scheduled from June 26-27. He will also travel to UAE while coming back to India. "I look forward to meeting leaders of some of the participating G7 and guest countries on the sidelines of the Summit". Prime Minister said in an official statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X