ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಶುಭಾಶಯ ಕೋರಿದ ಮೋದಿ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 02: ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಹಾರೈಕೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಇಂದು(ಡಿ.02) ದೇಶದಾದ್ಯಂತ ಮುಸ್ಲಿಂ ಸಮುದಾಯದ ಬಾಂಧವರು ಈದ್ ಮಿಲಾದ ಹಬ್ಬವನ್ನು ಸಂಭ್ರಮ- ಸಡಗರದಿಂದ ಆಚರಿಸುತ್ತಿದ್ದು, ಹಲವು ಗಣ್ಯರು ಶುಭಕೋರಿದ್ದಾರೆ.

ಪ್ರವಾದಿ ಮಹಮ್ಮದ್ ರ ಜನ್ಮದಿನವನ್ನು ಮಿಲದ್ ಉನ್ ನಬಿ ಎಂದು ಮುಸ್ಲಿಮರು ಆಚರಿಸುತ್ತಾರೆ. ಈ ಕುರಿತು ಟ್ವೀಟ್ ಮಾಡಿದ ಮೋದಿ, "ಎಲ್ಲರಿಗೂ ಈದ್ ಮಿಲಾದ್ ನ ಶುಭಾಶಯಗಳು. ಪ್ರವಾದಿ ಮಹಮ್ಮದ್ ರ ಎಲ್ಲಾ ಬೋಧನೆಗಳೂ ಸಮಾಜದಲ್ಲಿ ಸೌಹಾರ್ದತೆಯನ್ನು ಹೆಚ್ಚಿಸಲು ಸ್ಫೂರ್ತಿಯಾಗಲಿ" ಎಂದು ಹಾರೈಸಿದ್ದಾರೆ.

PM Narendra Modi tweets: Greetings on Id-E-Milad

ಚಾಂದ್ರಮಾನ ಕ್ಯಾಲೆಂಡರ್ ಗೆ ತಕ್ಕಂತೆ ಇಡೀ ಜಗತ್ತಿನಲ್ಲೂ ಈದ್ ಮಿಲಾದ್ ಆಚರಣೆ ಬದಲಾಗುತ್ತದೆ. ಕರ್ನಾಟಕ, ತೆಲಂಗಾಣ ಮುಂತಾದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಶನಿವಾರದವರೆಗೂ ಚಂದ್ರ ಕಾಣದ ಕಾರಣ, ಚಂದ್ರ ಕಾಣಿಸಿದ ನಂತರ ಹಬ್ಬ ಆಚರಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi on Saturday greeted the nation of the occasion of Milad-un-Nabi, which marks the birthday of Prophet Muhammad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ