ಚೀನಾ ಆಪ್ ನಿಷೇಧ ಬೆನ್ನಲ್ಲೆ ಗಟ್ಟಿ ಸಂದೇಶ ರವಾನಿಸಿದ ಮೋದಿ

ದೆಹಲಿ, ಜುಲೈ 1: ಭಾರತದಲ್ಲಿ ಚೀನಾದ 59 ಆಪ್‌ಗಳು ನಿಷೇಧವಾದ ಬೆನ್ನಲ್ಲೆ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿದ್ದ ನರೇಂದ್ರ ಮೋದಿಯ ಎಲ್ಲ ಪೋಸ್ಟ್‌ಗಳು ಡಿಲೀಟ್ ಆಗಿವೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ''ಚೀನಾ ಸಾಮಾಜಿಕ ಜಾಲತಾಣದಿಂದ ಹೊರಬಂದಿರುವ ಮೋದಿ ಈ ಮೂಲಕ ಗಡಿಯಲ್ಲಿ, ಆರ್ಥಿಕತೆಯಲ್ಲಿ ಹಾಗೂ ವೈಯಕ್ತಿವಾಗಿಯೂ ಗಟ್ಟಿ ಸಂದೇಶ ರವಾನಿಸಿದ್ದಾರೆ'' ಎಂದಿದ್ದಾರೆ.

ಭಾರತದಲ್ಲಿ 59 ಚೀನಾ ಆಪ್‌ಗಳನ್ನು ನಿಷೇಧ ಮಾಡಿದ ಬಳಿಕ 2015ರಿಂದ ಚೈನೀಸ್ ಸಾಮಾಜಿಕ ಜಾಲತಾಣದಲ್ಲಿ ಹೊಂದಿದ್ದ ಖಾತೆಯಿಂದ ಮೋದಿ ಹೊರಬಂದಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆದರೆ ಪ್ರಧಾನಿ ಕಚೇರಿ ಆಗಲಿ ಅಥವಾ ಕೇಂದ್ರ ಸರ್ಕಾರದ ಇನ್ನಿತರ ಇಲಾಖೆಗಳಾಗಿ ಈ ಬಗ್ಗೆ ಸ್ಪಷ್ಟತೆ ನೀಡಿಲ್ಲ.

ಇದುವರೆಗೂ ಪ್ರಧಾನಿ ಮೋದಿ ಅವರು ಚೀನಾದ ವೀಬೊ ಜಾಲತಾಣದಲ್ಲಿ 115 ಪೋಸ್ಟ್‌ಗಳನ್ನು ಹೊಂದಿದ್ದರು. ಅದರಲ್ಲಿ 113 ಪೋಸ್ಟ್‌ಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದೆ. ಉಳಿದ ಎರಡು ಫೋಟೋಗಳು ಚೀನಾದ ಅಧ್ಯಕ್ಷ ಕ್ಸಿನ್‌ಪಿಂಗ್ ಮತ್ತು ಮೋದಿ ಒಟ್ಟಿಗೆ ಇರುವ ಫೋಟೋ. ಅದನ್ನು ತೆಗೆಯಲಾಗಲಿಲ್ಲ.

PM narendra modi exits from Chinese social media platform WEIBO

ಈ ವಿಷಯಕ್ಕೆ ಸಂಬಂಧಪಟ್ಟಂತೆ ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಲ್ವಿಯಾ ಪ್ರತಿಕ್ರಿಯಿಸಿದ್ದು, ''ವೀಬೊ ತೊರೆಯುವ ಮೋದಿಯ ನಿರ್ಧಾರವು ಗಟ್ಟಿಯಾಗಿ ಮತ್ತು ಸ್ಪಷ್ಟವಾದ ಸಂದೇಶವನ್ನು ರವಾನಿಸುತ್ತದೆ. ಕೆಂಪು ಗೆರೆಗಳನ್ನು ದಾಟಿದರೆ, ಪರಿಣಾಮಗಳು ಉಂಟಾಗುತ್ತವೆ. ಗಡಿಗಳಲ್ಲಿ ಪ್ರಾರಂಭವಾದದ್ದು ಈಗ ಅನೇಕ ಆಯಾಮಗಳನ್ನು ಪಡೆದುಕೊಂಡಿದೆ. ಮತ್ತು ಇದು ಕೇವಲ ಪ್ರಾರಂಭವಾಗಿರಬಹುದು'' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+