ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ಮತ್ತೆ ಏರಿಕೆ: ಬಿತ್ತು ಗ್ರಾಹಕರ ಜೇಬಿಗೆ ಕತ್ತರಿ

|
Google Oneindia Kannada News

Recommended Video

ಬೆಂಗಳೂರು, ದೆಹಲಿ, ಮುಂಬೈ ನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಮತ್ತೆ ಏರಿಕೆ | Oneindia Kannada

ನವದೆಹಲಿ, ಅಕ್ಟೋಬರ್ 9: ಅಬಕಾರಿ ಸುಂಕದ ಕಡಿತ ಮತ್ತು ಸರ್ಕಾರಿ ಸ್ವಾಮ್ಯದ ಕಂಪೆನಿಗಳ ದರ ಇಳಿಕೆಯ ನಿರ್ಧಾರದಿಂದ ಲೀಟರ್‌ಗೆ 2.50 ರೂ.ನಷ್ಟು ಕಡಿತಗೊಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ, ಕೆಲವೇ ದಿನಗಳಲ್ಲಿ ಹಳೆಯ ದರವನ್ನು ದಾಟುವ ಸಾಧ್ಯತೆ ಇದೆ.

ಅಬಕಾರಿ ಸುಂಕ ಕಡಿತಗೊಳಿಸಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದರಿಂದ ಪ್ರತಿದಿನ ಪರಿಷ್ಕರಣೆಯಾಗುವ ಪೆಟ್ರೋಲ್ ಮತ್ತು ಡೀಸೆಲ್ ದರದ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯವಾಗಿಲ್ಲ.

ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯ ಘೋಷಣೆ ಮಾಡಿದ ಬಳಿಕ ರಾಜ್ಯ ಸರ್ಕಾರಗಳೂ ಅಬಕಾರಿ ಸುಂಕ ಇಳಿಕೆ ಮಾಡಬೇಕು ಎಂದು ಮನವಿ ಮಾಡಿತ್ತು. ಮಹಾರಾಷ್ಟ್ರ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಇದಕ್ಕೆ ಸಹಮತ ವ್ಯಕ್ತಪಡಿಸಿ 5 ರೂ.ನಷ್ಟು ಸುಂಕ ಕಡಿತಗೊಳಿಸಿದ್ದವು.

ಪ್ರಯಾಣಿಕರೆ ಸ್ವಲ್ಪ ನಿಟ್ಟುಸಿರು ಬಿಡಿ, ಬಸ್‌ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲಪ್ರಯಾಣಿಕರೆ ಸ್ವಲ್ಪ ನಿಟ್ಟುಸಿರು ಬಿಡಿ, ಬಸ್‌ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ

ಇದರಿಂದ ಗ್ರಾಹಕರಿಗೆ ಕೊಂಚ ಸಮಾಧಾನವಾಗಿದ್ದರೂ, ಈಗ ದೈನಂದಿನ ತೈಲ ಪರಿಷ್ಕರಣೆಯ ಸಂದರ್ಭದಲ್ಲಿ ಬೆಲೆ ಏರಿಕೆಯಾಗುತ್ತಿದೆಯೇ ವಿನಾ ಇಳಿಕೆಯಾಗುವ ಲಕ್ಷಣ ತೋರಿಸುತ್ತಿಲ್ಲ.

ಹೀಗಾಗಿ ನಿತ್ಯವೂ ತೈಲ ಬೆಲೆ ಏರಿಕೆಯಾಗುತ್ತಿದ್ದು, ಮಂಗಳವಾರ ಸಹ ತೈಲ ಮತ್ತಷ್ಟು ತುಟ್ಟಿಯಾಗಿದೆ.

ಇರಾನ್‌ನಿಂದ ಖರೀದಿ

ಇರಾನ್‌ನಿಂದ ಖರೀದಿ

ಇರಾನ್ ಮೇಲಿನ ಅಮೆರಿಕದ ನಿರ್ಬಂಧಗಳು ನವೆಂಬರ್ ತಿಂಗಳಿನಿಂದ ಜಾರಿಯಾಗುತ್ತಿದೆ. ಆದರೂ ಭಾರತದ ಕಂಪೆನಿಗಳು ಇರಾನ್‌ನಿಂದ ತೈಲ ಖರೀದಿಗೆ ಅರ್ಜಿ ಸಲ್ಲಿಸುವುದನ್ನು ಮುಂದುವರಿಸುತ್ತಿವೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಅಮೆರಿಕವು ವಿಧಿಸುವ ನಿರ್ಬಂಧಗಳಿಂದ ನಮಗೆ ವಿನಾಯಿತಿ ದೊರೆಯುವುದೇ ಅಥವಾ ಇಲ್ಲವೇ ಎನ್ನುವುದು ತಿಳಿದಿಲ್ಲ. ಆದರೂ ಭಾರತದ ಕಂಪೆನಿಗಳು ಎರಡು ದಿನಗಳ ಹಿಂದಷ್ಟೇ ಇರಾನ್‌ನಿಂದ ನವೆಂಬರ್‌ನಲ್ಲಿ ತೈಲ ಖರೀದಿಗೆ ವ್ಯವಹಾರ ನಡೆಸಿವೆ. ಇದು ಭಾರತದ ರಾಜತಾಂತ್ರಿಕ ಶಕ್ತಿ ಮತ್ತು ಭಾರತದ ಹೊಸ ನಾಯಕತ್ವಕ್ಕೆ ದೊರೆತ ಮನ್ನಣೆಯಲ್ಲವೇ ಎಂದು ಅವರು ತಿಳಿಸಿದ್ದಾರೆ.

ಪ್ರಯಾಣಿಕರೆ ಸ್ವಲ್ಪ ನಿಟ್ಟುಸಿರು ಬಿಡಿ, ಬಸ್‌ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ ಪ್ರಯಾಣಿಕರೆ ಸ್ವಲ್ಪ ನಿಟ್ಟುಸಿರು ಬಿಡಿ, ಬಸ್‌ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ

Array

ರಾಜಧಾನಿಯಲ್ಲಿ ತೈಲ ಬಿಸಿ

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 23 ಪೈಸೆಯಷ್ಟು ಹಾಗೂ ಡೀಸೆಲ್ 29 ಪೈಸೆಯಷ್ಟು ಹೆಚ್ಚಳ ಕಂಡಿದೆ. ಇದರಿಂದ ಅಲ್ಲಿ ಲೀಟರ್ ಪೆಟ್ರೋಲ್‌ಗೆ 82.26 ರೂ. ಇದ್ದರೆ, ಡೀಸೆಲ್ 74.11 ರೂ. ದರ ಹೊಂದಿದೆ.

ಷೇರು ಹೂಡಿಕೆದಾರರಿಗೆ ಸಾಲು ಸಾಲು ಕೆಟ್ಟ ಸುದ್ದಿ, ಇದೇನ್ ಬುದ್ದಿ?ಷೇರು ಹೂಡಿಕೆದಾರರಿಗೆ ಸಾಲು ಸಾಲು ಕೆಟ್ಟ ಸುದ್ದಿ, ಇದೇನ್ ಬುದ್ದಿ?

ಹಳೆಯ ಬೆಲೆಗೆ ಮರಳಿದ ದರ

ಹಳೆಯ ಬೆಲೆಗೆ ಮರಳಿದ ದರ

ವಾಣಿಜ್ಯ ನಗರಿ ಮುಂಬೈನಲ್ಲಿಯೂ ತೈಲ ಬೆಲೆಯ ನಾಗಾಲೋಟ ಮುಂದುವರಿದಿದೆ. ಅಲ್ಲಿಯೂ ಪೆಟ್ರೋಲ್‌ ಬೆಲೆ 23 ಪೈಸೆ ಏರಿಕೆಯಾಗಿದ್ದು, 87.73ಕ್ಕೆ ಮರಳಿದೆ. ಡೀಸೆಲ್ ಬೆಲೆ 31 ಪೈಸೆ ಹೆಚ್ಚಾಗಿದೆ. ಪ್ರತಿ ಲೀಟರ್ ಡೀಸೆಲ್‌ಗೆ ಮುಂಬೈನಲ್ಲಿ 77.68 ರೂ.ಗೆ ತಲುಪಿದೆ.

27 ಪೈಸೆ ತುಟ್ಟಿ

27 ಪೈಸೆ ತುಟ್ಟಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 27 ಪೈಸೆ ತುಟ್ಟಿಯಾಗಿದೆ. ಲೀಟರ್ ಪೆಟ್ರೋಲ್‌ಗೆ 82.73 ರೂ. ಇದೆ. ಡೀಸೆಲ್ ಬೆಲೆ 34 ಪೈಸೆ ಹೆಚ್ಚಾಗಿದ್ದು, ಲೀಟರ್‌ಗೆ 74.24 ರೂ. ಮುಟ್ಟಿದೆ.

English summary
Petrol and Diesel prices hiked up to 23 Paise and 29 Paise respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X