ಮಹಿಳೆಯರಿಗೆ ಸಿಹಿಸುದ್ದಿ- ತಾಯ್ತನದ ರಜೆ ಇನ್ಮುಂದೆ 26 ವಾರ
ನವದೆಹಲಿ,
ಮಾರ್ಚ್ 10: ತಾಯ್ತನ ನಿರೀಕ್ಷಿಸುತ್ತಿರುವ ಉದ್ಯೋಗಸ್ಥ ಮಹಿಳೆಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. 12 ವಾರವಿದ್ದ ವೇತನ ಸಹಿತ ತಾಯ್ತನದ ರಜೆಯನ್ನು 26 ವಾರಗಳಿಗೆ ವಿಸ್ತರಿಸುವ ಹೊಸ ಕಾಯಿದೆಯನ್ನು ಸಂಸತ್ತಿನಲ್ಲಿ ಗುರುವಾರ ಅಂಗೀಕರಿಸಲಾಗಿದೆ. id="toptextpromo"> id='are-slot-1' class='oiad oi-axt oiadv'>ದಿ
ಮೆಟರ್ನಿಟಿ ಬೆನಿಫಿಟ್ (ತಿದ್ದುಪಡಿ) ಕಾಯಿದೆ- 2016 ನ್ನು ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲೇ ರಾಜ್ಯಸಭೆ ಅಂಗೀಕರಿಸಿತ್ತಾದರೂ, ಲೋಕಸಭೆಯಲ್ಲಿ ಅದಕ್ಕೆ ಅಂಗೀಕಾರ ಸಿಕ್ಕಿದ್ದು ನಿನ್ನೆ. ಇದು ಅಂತಾರಾಷ್ಟ್ರೀಯ ಮಹಿಳಾ ದಿನದ ಮರುದಿನ ಸರ್ಕಾರ ಮಹಿಳೆಯರಿಗೆ ನೀಡುತ್ತಿರುವ ಕೊಡುಗೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ. id='are-slot-2' class='oiad oi-axt oiadv'>
ಆರೋಗ್ಯವಂತ ಮಗು, ನೆಮ್ಮದಿಯ ತಾಯ್ತನ
ಮಹಿಳೆಯರು ಆರೋಗ್ಯವಂತ ಮಗುವನ್ನು ಪಡೆಯಲು ಮತ್ತು ನೆಮ್ಮದಿಯ ತಾಯ್ತನ ಅನುಭವಿಸಲು ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.

ಎಲ್ಲಿ ಅನ್ವಯ?
ಈ ಮೆಟರ್ನಿಟಿ ರಜೆ 10ಕ್ಕಿಂತ ಹೆಚ್ಚು ಜನ ಕೆಲಸ ಮಾಡುವ ಎಲ್ಲಾ ಕಚೇರಿಗಳಿಗೂ ಅನ್ವಯಿಸುತ್ತದೆ.

ಯಾರಿಗೆ ಅನ್ವಯ?
ಮೊದಲ ಎರಡು ಮಕ್ಕಳಿಗೆ ಮಾತ್ರ ತಾಯಂದಿರು 26 ವಾರಗಳ ರಜೆಯ ಉಪಯೋಗ ಪಡೆಯಬಹುದು. ಮೂರನೇ ಮಗುವಿಗಾದರೆ 12 ವಾರವಷ್ಟೇ ರಜೆ ಸಿಕ್ಕುತ್ತದೆ.

ಉಪಯೋಗ ಯಾರಿಗೆ?
ಸರ್ಕಾರದ ಈ ನಿರ್ಧಾರದಿಂದ ಭಾರತದ 1.8 ಮಿಲಿಯನ್ ಉದ್ಯೋಗಸ್ಥ ಮಹಿಳೆಯರಿಗೆ ಉಪಯೋಗವಾಗಲಿದೆ.

ಬಾಡಿಗೆ ತಾಯಿಯರಿಗೂ ಉಪಯೋಗ?
ಬಾಡಿಗೆ ತಾಯ್ತನದಿಂದ ತಾಯಿಯಾಗಿದ್ದರೆ ಅಥವಾ ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ಕಾನೂನಾತ್ಮಕವಾಗಿ ದತ್ತು ತೆಗೆದುಕೊಂಡಿದ್ದರೆ ಅಂಥವರಿಗೆ 12 ವಾರಗಳ ರಜೆ ಅನ್ವಯಿಸುತ್ತದೆ.

ಭಾರತಕ್ಕೆ ಮೂರನೇ ಸ್ಥಾನ
ಇದರಿಂದಾಗಿ ಹೆಚ್ಚು ಅವಧಿಯ ತಾಯ್ತನದ ರಜೆ ನೀಡುತ್ತಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನ ಪಡೆದಂತಾಗಿದೆ. ಕೆನಡಾ (50 ವಾರ) ಮತ್ತು ನಾರ್ವೆ (44 ವಾರ) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ.












Click it and Unblock the Notifications