ವೀರೇಂದ್ರ ಹೆಗ್ಗಡೆ, ಬಚ್ಚನ್, ಅಡ್ವಾಣಿಗೆ ಪದ್ಮ ವಿಭೂಷಣ
ನವದೆಹಲಿ, ಜ. 25 : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಹಿಂದಿ ಚಿತ್ರನಟ ಅಮಿತಾಬ್ ಬಚ್ಚನ್, ಹಿರಿಯ ರಾಜಕಾರಣಿ ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ, ಭಾರತೀಯರು ಮತ್ತು ವಿದೇಶಿಯರು ಒಳಗೊಂಡು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 104 ಜನರನ್ನು 2015ನೇ ಸಾಲಿನ 'ಪದ್ಮ' ಪ್ರಶಸ್ತಿಗಾಗಿ ಭಾರತ ಸರಕಾರ ಆಯ್ಕೆ ಮಾಡಿದೆ.
ಒಟ್ಟು 9 ಜನರು ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮ ವಿಭೂಷಣ'ಕ್ಕೆ ಆಯ್ಕೆಯಾಗಿದ್ದರೆ, 20 'ಪದ್ಮ ಭೂಷಣ' ಪ್ರಶಸ್ತಿ ಮತ್ತು 75 ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪಟ್ಟಿಯಲ್ಲಿ 17 ಮಹಿಳಾಮಣಿಗಳಿಗೆ ಮಣೆ ಹಾಕಲಾಗಿದ್ದರೆ, 17 ವಿದೇಶಿ ಸಾಧಕರಿಗೂ ಮನ್ನಣೆ ನೀಡಲಾಗಿದೆ. ವಿದೇಶಿಯರಲ್ಲಿ ಬಿಲ್ ಗೇಟ್ಸ್ ಕೂಡ ಸೇರಿದ್ದಾರೆ.

ಕಲೆ, ಸಮಾಜ ಸೇವೆ, ರಾಜಕೀಯ, ವಿಜ್ಞಾನ, ಇಂಜಿನಿಯರಿಂಗ್, ಉದ್ಯಮ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಅಹರ್ನಿಶಿ ದುಡಿದ ಮಹನೀಯರನ್ನು ಗುರುತಿಸಿ ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸುವ ಪರಿಪಾಠವನ್ನು ಭಾರತ ಸರಕಾರ ಪಾಲಿಸಿಕೊಂಡು ಬರುತ್ತಿದೆ.
ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗುವ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಮತ್ತು ಯೋಗಗುರು ಬಾಬಾ ರಾಮದೇವ್ ಅವರು ಪದ್ಮ ಪ್ರಶಸ್ತಿಗಳನ್ನು ತಿರಸ್ಕರಿಸಿದ್ದಾರೆ. ಎಲ್ಲ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು.
ಪದ್ಮ ವಿಭೂಣ ಪ್ರಶಸ್ತಿ ಪಡೆದವರ ಪಟ್ಟಿ ಕೆಳಗಿನಂತಿದೆ
| ಕ್ರ.ಸಂ. | ಸಾಧಕರ ಹೆಸರು | ಕ್ಷೇತ್ರ | ರಾಜ್ಯ |
| 1 | ಲಾಲ್ ಕೃಷ್ಣ ಅಡ್ವಾಣಿ | ಸಾರ್ವಜನಿಕ ವಲಯ | ಗುಜರಾತ್ |
| 2 | ಅಮಿತಾಬ್ ಬಚ್ಚನ್ | ಕಲೆ | ಮಹಾರಾಷ್ಟ್ರ |
| 3 | ಪ್ರಕಾಶ್ ಸಿಂಗ್ ಬಾದಲ್ | ಸಾರ್ವಜನಿಕ ವಲಯ | ಪಂಜಾಬ್ |
| 4 | ಡಾ. ವೀರೇಂದ್ರ ಹೆಗ್ಗಡೆ | ಸಮಾಜ ಸೇವೆ | ಕರ್ನಾಟಕ |
| 5 | ಮೊಹಮ್ಮದ್ ಯುಸೂಫ್ ಖಾನ್ (ದಿಲೀಪ್ ಕುಮಾರ್) | ಕಲೆ | ಮಹಾರಾಷ್ಟ್ರ |
| 6 | ಜಗದ್ಗುರು ರಮಾನಂದಾಚಾರ್ಯ ಸ್ವಾಮಿ ರಾಮಭದ್ರಾಚಾರ್ಯ | ಇತರೆ | ಉತ್ತರಪ್ರದೇಶ |
| 7 | ಮಾಲೂರ ರಾಮಸ್ವಾಮಿ ಶ್ರೀನಿವಾಸನ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ತಮಿಳುನಾಡು |
| 8 | ಕೊಟ್ಟಾಯನ್ ಕೆ. ವೇಣುಗೋಪಾಲ್ | ಸಾರ್ವಜನಿಕ ವಲಯ | ದೆಹಲಿ |
| 9 | ಕರೀಂ ಅಲ್ ಹುಸೈನಿ ಆಗಾ ಖಾನ್ (ವಿದೇಶ) | ಉದ್ಯಮ | ಫ್ರಾನ್ಸ್/ಯುಕೆ |
ಪದ್ಮ ಪ್ರಶಸ್ತಿಗೆ ಭಾಜನರಾದ ಇತರ ಕರ್ನಾಟಕದ ಮಹನೀಯರು
* ಶಿವಕುಮಾರ ಸ್ವಾಮಿ - ಪದ್ಮ ಭೂಷಣ - ಇತರೆ
* ಡಾ. ಖರಗ್ ಸಿಂಗ್ ವಾಲ್ಡಿಯಾ - ಪದ್ಮ ಭೂಷಣ - ವಿಜ್ಞಾನ ಮತ್ತು ಇಂಜಿನಿಯರಿಂಗ್
* ಎಸ್ ಅರುಣನ್ - ಪದ್ಮಶ್ರೀ - ವಿಜ್ಞಾನ ಮತ್ತು ಇಂಜಿನಿಯರಿಂಗ್
* ಟಿ.ವಿ. ಮೋಹನದಾಸ್ ಪೈ - ಪದ್ಮಶ್ರೀ - ಉದ್ಯಮ
* ವಸಂತ ಶಾಸ್ತ್ರೀ - ಪದ್ಮಶ್ರೀ - ವಿಜ್ಞಾನ ಮತ್ತು ಇಂಜಿನಿಯರಿಂಗ್
* ಎಸ್.ಕೆ. ಶಿವಕುಮಾರ್ - ಪದ್ಮಶ್ರೀ - ವಿಜ್ಞಾನ ಮತ್ತು ಇಂಜಿನಿಯರಿಂಗ್
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications