ಮಾಜಿ ಸೈನಿಕರ ಪಿಂಚಣಿ ಯೋಜನೆ ಜಾರಿಗೊಳ್ಳುತ್ತಾ?
ನವದೆಹಲಿ, ಆಗಸ್ಟ್, 27 : ಒನ್ ರಾಂಕ್, ಒನ್ ಪೆನ್ಶನ್( ಒಂದು ಶ್ರೇಣಿ, ಒಂದು ಪಿಂಚಣಿ) ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪರಿಹಾರ ನೀಡದೆ ಹೋದಲ್ಲಿ ಪ್ರತಿಭಟನೆ ಮುಂದುವರೆಯಲಿದೆ.
ಮಾಜಿ ಸೈನಿಕರು ಪೆನ್ಶನ್ ಯೋಜನೆ ಜಾರಿಗೆ ತರಲು ದೆಹಲಿಯ ಜಂತರ್ ಮಂತರ್ ನಲ್ಲಿ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರು.ಇದಕ್ಕೆ ಕೇಂದ್ರ ಸರ್ಕಾರ ಕಿವಿಗೊಡದ ಕಾರಣ ಕೆಲವು ಮಾಜಿ ಯೋಧರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.['ಗೋ ಬ್ಯಾಕ್' ರಾಹುಲ್ ಎಂದ ಮಾಜಿ ಸೈನಿಕರು]

ಮಾಜಿ ಸೈನಿಕರ ಈ ಹೋರಾಟದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಗಳು ಕೇಳಿಬರುತ್ತಿದ್ದು, ಕೇಂದ್ರ ಸರ್ಕಾರ ತಾನು ಅನುಸರಿಸುತ್ತಿರುವ ವಿಳಂಬ ನೀತಿ ಕೈಬಿಟ್ಟು ಬೇಡಿಕೆಗಳನ್ನು ಈಡೇರಿಸುವತ್ತ ಗಮನ ಹರಿಸಬೇಕೆಂದು ಜನತೆ ಒತ್ತಾಯಿಸಿದ್ದಾರೆ.
ಮಾಜಿ ಯೋಧರ ಈ ಹೋರಾಟದಲ್ಲಿ ಅವರ ಪತ್ನಿಯರು ಕೈ ಜೋಡಿಸಿದ್ದು, ಭಾರತ ಪಾಕಿಸ್ತಾನ ಯೋಧರ ಸಂಭ್ರಮಾಚಾರಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪೆನ್ಶನ್ ಯೋಜನೆ ಜಾರಿಗೆ ಬರಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.












Click it and Unblock the Notifications