ಮೇ 30 ರಂದೇ ಕೇರಳಕ್ಕೆ ಮುಂಗಾರು ಸಿಂಚನ
ಜನರೆಲ್ಲ ಬಹುನಿರೀಕ್ಷೆಯಿಂದ ಕಾಯುತ್ತಿರುವ ಮುಂಗಾರು ಮಳೆ ಈ ಬಾರಿ ಒಂದು ದಿನ ಮುಂಚಿತವಾಗಿಯೇ ಕೇರಳಕ್ಕೆ ಲಗ್ಗೆ ಇಡಲಿದೆ. ಅಂದರೆ ಈ ಬಾರಿ ಮೇ 30 ರಂದೇ ಮುಂಗಾರು ಆಗಮಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ನವದೆಹಲಿ, ಮೇ 24: ಜನರೆಲ್ಲ ಬಹುನಿರೀಕ್ಷೆಯಿಂದ ಕಾಯುತ್ತಿರುವ ಮುಂಗಾರು ಮಳೆ ಈ ಬಾರಿ ಒಂದು ದಿನ ಮುಂಚಿತವಾಗಿಯೇ ಕೇರಳಕ್ಕೆ ಲಗ್ಗೆ ಇಡಲಿದೆ. ಅಂದರೆ ಈ ಬಾರಿ ಮೇ 30 ರಂದೇ ಮುಂಗಾರು ಆಗಮಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ನಾವು ಜೂನ್ 1 ರಿಂದ ಮುಂಗಾರು ಅಧಿಕೃತವಾಗಿ ಆರಂಭವಾಗುತ್ತದೆ ಎಂದಿದ್ದೆವು. ಆದರೆ ಈಗಿರುವ ಹವಾಮಾನವನ್ನು ನೋಡಿದರೆ ಒಂದು ದಿನ ಮುಂಚಿತವಾಗಿಯೇ ಮುಂಗು ಆರಂಭವಾಗುತ್ತದೆ ಎಂದು ಭೌಗೋಳಿಕ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ಹೇಳಿದ್ದಾರೆ.[ಈ ಬಾರಿ ನೈರುತ್ಯ್ ಮುಗಾರಿನ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿಗಳು]

ಈ ಬಾರಿಯ ಮುಂಗಾರಿನ ಸಮಯದಲ್ಲಿ ಮೋಡಬಿತ್ತನೆಯ ಸಾಧ್ಯತೆಗಳ ಬಗ್ಗೆ ಅರಿಯುವ ಕಾರ್ಯಕ್ರಮಗಳನ್ನೂ ಯೋಜಿಸಲಾಗಿದೆ ಎಂದು ಸಹ ಅವರು ತಿಳಿಸಿದ್ದಾರೆ. ಮೋಡ ಬಿತ್ತನೆಯ 200 ಕ್ಕೂ ಹೆಚ್ಚು ಮಾದರಿಗಳನ್ನು ಅಭ್ಯಸಿಸಿ, ಮೋಡ ಬಿತ್ತನೆ ಎಷ್ಟು ಪರಿಣಾಮಕಾರಿ ಎಂಬುದನ್ನೂ ಈ ಮೂಲಕ ತಿಳಿಯಲಾಗುವುದು, ಈ ಕಾರ್ಯಕ್ರಮವನ್ನು ಸತತ ಮೂರು ವರ್ಷಗಳ ಕಾಲ ಮುಂದುವರಿಸಲಾಗುವುದೆಂದು ಅವರು ತಿಳಿಸಿದ್ದಾರೆ.












Click it and Unblock the Notifications