ಓಮಿಕ್ರಾನ್ ಗಿಂತ 'ಮಿತ್ರೋ' ತುಂಬಾ ಅಪಾಯಕಾರಿ: ಶಶಿ ತರೂರ್
ನವದೆಹಲಿ ಜನವರಿ 31: 'ಮಿತ್ರೋ' ಎನ್ನುವ ಪದ ಅಪಾಯಕಾರಿ. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಾಗಿ ಭಾಷಣಗಳ ಸಂದರ್ಭದಲ್ಲಿ ಬಳಕೆ ಮಾಡುತ್ತಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ವ್ಯಂಗ್ಯವಾಡಿದ್ದಾರೆ. ಸೋಮವಾರ ಶಶಿ ತರೂರ್ ಅವರು ಪಿಎಂ ನರೇಂದ್ರ ಮೋದಿಯವರು ಬಳಕೆ ಮಾಡುವ ಪದ 'ಮಿತ್ರೋ'ಅನ್ನು ಗೇಲಿ ಮಾಡಿದ್ದಾರೆ. ಇದು ಓಮಿಕ್ರಾನ್ ಗಿಂತ 'ಮಿತ್ರೋ' ತುಂಬಾ ಅಪಾಯಕಾರಿ ಎಂದು ಅವರು ಹೇಳಿದ್ದಾರೆ.
"ಓಮಿಕ್ರಾನ್ ಗಿಂತ ಹೆಚ್ಚು ಅಪಾಯಕಾರಿ 'ಮಿತ್ರೋ'! ಹೆಚ್ಚಿದ ಧ್ರುವೀಕರಣ, ದ್ವೇಷ ಮತ್ತು ಧರ್ಮಾಂಧತೆಯ ಪ್ರಚಾರ, ಸಂವಿಧಾನದ ಮೇಲಿನ ಕಪಟ ದಾಳಿಗಳು ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ. ಇದು ಯಾವುದೇ ಸೌಮ್ಯ ರೂಪಾಂತರವಲ್ಲ'' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಮಾತನಾಡಿ, ಇದು ದೇಶದ ಗಂಭೀರ ಕೋವಿಡ್ ಪರಿಸ್ಥಿತಿಯನ್ನು ಹಗುರಗೊಳಿಸುವ ಪ್ರಯತ್ನವಾಗಿದೆ. "ರಾಹುಲ್ ಗಾಂಧಿ ಅವರು ಕೋವಿಡ್ ಬಗ್ಗೆ ಹೇಳುತ್ತಲೇ ಇರುತ್ತಾರೆ, ಆದರೆ ಕಾಂಗ್ರೆಸ್ ನಿಜವಾಗಿಯೂ ಗಂಭೀರ ಪರಿಸ್ಥಿತಿಯನ್ನು ಹಗುರಗೊಳಿಸುತ್ತದೆ" ಎಂದು ಅವರು ಇಂಡಿಯಾ ಟುಡೇಗೆ ತಿಳಿಸಿದರು.

ಶಶಿ ತರೂರ್ ಕಳೆದ ಕೆಲವು ದಿನಗಳಿಂದ ಭಾರತೀಯ ಜನತಾ ಪಕ್ಷ ಮತ್ತು ಅದರ ನಾಯಕರನ್ನು ಸೂಕ್ಷ್ಮವಾಗಿ ಕೆಣಕುತ್ತಿದ್ದಾರೆ. ಈ ದೇಶವನ್ನು ಸ್ಮಶಾನವನ್ನಾಗಿ ಮಾಡಲಾಗಿದೆ ಎಂದು ಅವರು ಆಡಳಿತ ಪಕ್ಷವನ್ನು ದೂರಿದ್ದಾರೆ. ಶಶಿ ತರೂರ್ ಅವರು "ಕಾಂಗ್ರೆಸ್-ಯುಕ್ತ ಬಿಜೆಪಿ (ಕಾಂಗ್ರೆಸ್ ನಾಯಕರು ಹೊತ್ತ ಬಿಜೆಪಿ)" ಎಂಬ ಪದವನ್ನು ಬಳಸಿದ್ದಾರೆ, ಇದು ಪ್ರಧಾನಿ ನರೇಂದ್ರ ಮೋದಿಯವರ 'ಕಾಂಗ್ರೆಸ್ ಮುಕ್ತ ಭಾರತ' ಎಂಬ ಘೋಷಣೆಗೆ ಪ್ರತಿಕ್ರಿಯೆಯಾಗಿದೆ.
Far more dangerous than #Omicron is “O Mitron”! We are measuring the consequences of the latter every day in increased polarisation, promotion of hatred & bigotry, insidious assaults on the Constitution & the weakening of our democracy. There is no “milder variant” of this virus.
— Shashi Tharoor (@ShashiTharoor) January 31, 2022
'ಮಿತ್ರೋ' ಎಂಬ ಪದವನ್ನು ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಾಗಿ ಬಳಸುತ್ತಾರೆ. ತಮ್ಮ ಭಾಷಣವನ್ನು ಹೆಚ್ಚಾಗಿ ಈ ಪದದ ಮೂಲಕವೇ ಪ್ರಧಾನಿ ಆರಂಭಿಸುತ್ತಾರೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಸದಾ ವಾಗ್ದಾಳಿ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಇತ್ತೀಚೆಗೆ ಟೀಕೆ ಮಾಡಿದ್ದ ತರೂರ್,'' ದೇಶಕ್ಕೆ ಯಾವ ರೀತಿ ಹಾನಿ ಮಾಡುತ್ತಿದ್ದಾರೆಂಬ ಕಲ್ಪನೆಯೂ ಯೋಗಿ ಆದಿತ್ಯನಾಥ್ ಗೆ ಇಲ್ಲ. ದೇಶವನ್ನು ಇವರು ಸ್ಮಶಾನವನ್ನಾಗಿಸಿದ್ದಾರೆ' ಎಂದಿದ್ದಾರೆ.
ಶಶಿ ತರೂರ್ ತಮ್ಮ ಇಂಗ್ಲಿಷ್ ಮತ್ತು ವಿಭಿನ್ನ ಟ್ವೀಟ್ಗಳ ಮೂಲಕವೇ ಹೆಸರಾದವರು. ಜನವರಿ 29ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದ ಶಶಿ ತರೂರ್, ನೀವೆಲ್ಲ ಸೇರಿ ಈ ದೇಶಕ್ಕೆ ಎಷ್ಟು ಹಾನಿ ಮಾಡಿದ್ದೀರಿ ಎಂಬ ಬಗ್ಗೆ ನಿಮಗೆ ಅರಿವು ಇಲ್ಲ. ಇಡೀ ದೇಶವನ್ನು ಸ್ಮಶಾನದಂತೆ ಮಾಡಿದ್ದೀರಿ ಎಂದು ಕ್ಯಾಪ್ಷನ್ ಬರೆದಿದ್ದರು. ಅದಕ್ಕೂ ಮೊದಲು ಜನವರಿ 26ರಂದು ಬಿಜೆಪಿ ವಿರುದ್ಧ ಟ್ವೀಟ್ ಮಾಡಿದ್ದ ಶಶಿ ತರೂರ್, ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಆದರೆ ಬಿಜೆಪಿಯೀಗ ಕಾಂಗ್ರೆಸ್ಯುಕ್ತ ಪಕ್ಷವಾಗಿದೆ ಎಂದು ಹೇಳಿದ್ದರು.
Recommended Video
ಯೋಗಿ ಆದಿತ್ಯನಾಥ್ ಅವರು ಸಾಧು ಸಂತರೊಂದಿಗೆ ಗಂಗಾ, ಯಮುನಾ ಮತ್ತು ಸರಸ್ವತಿಯ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಅಣಿಯಾದ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಶಶಿ ತರೂರ್, ''ನೀವು ಗಂಗೆಯನ್ನು ಸ್ವಚ್ಛ ಮಾಡಬೇಕು, ಅಲ್ಲೇ ಪಾಪವನ್ನೂ ತೊಳೆದುಕೊಳ್ಳಿ. ತ್ರಿವೇಣಿ ಸಂಗಮದಲ್ಲಿ ಎಲ್ಲರೂ ನಗ್ನರಾಗಿದ್ದಾರೆ, ಜೈ ಗಂಗಾ ಮಾಯಿ ಕಿ,'' ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.












Click it and Unblock the Notifications