ಚೀನಾ, ಪಾಕಿಸ್ತಾನ ಯಾವುದೂ ಅಲ್ಲ, ಭಾರತಕ್ಕೆ ಭಾರತವೇ ಶತ್ರು!

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 17: ಭಾರತಕ್ಕೆ ನಿಜವಾದ ಅಪಾಯವಿರುವುದು ನೆರೆ ದೇಶಗಳಾದ ಚೀನಾ ಆಗಲೀ, ಪಾಕಿಸ್ತಾನವಾಗಲಿ ಶತ್ರುವಲ್ಲ, ಬದಲಾಗಿ ಭಾರತದೊಳಗಿನ ಆಂತರಿಕ ಶಕ್ತಿಗಳೇ ಭಾರತಕ್ಕೆ ನಿಜವಾದ ಅಪಾಯ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.

ಭಾರತದ ಪ್ರದೇಶದೊಳಕ್ಕೆ ಪ್ರವೇಶಿಸುವ ಚೀನಾ ಯತ್ನಕ್ಕೆ ತಡೆ

'ಸಂಜ್ಹಿ ವಿರಾಸತ್ ಬಚಾವೋ' ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಚೀನಾ ಆಗಲಿ, ಪಾಕಿಸ್ತಾನವಾಗಲಿ ನಮಗೆ ಏನನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ನಮ್ಮನ್ನು ಆಳುತ್ತಿರುವ ಕಳ್ಳರೇ ನಮಗೆ ಕಂಟಕಪ್ರಾಯರಾಗಿದ್ದಾರೆ ಎಂದು ಅವರು ಪರೋಕ್ಷವಾಗಿ ಎನ್ ಡಿ ಎ ಸರ್ಕಾರವನ್ನು ದೂರಿದರು.

Not China or Pakistan, some Indians inside the country are real threat to the country

'ನಾನೊಬ್ಬ ಭಾರತೀಯ ಮುಸ್ಲಿಂ ಎನ್ನುವುದಕ್ಕೆ ನನಗೆ ಹೆಮ್ಮೆಯಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಾಕಷ್ಟು ಮುಸ್ಲಿಮರು ಹೋರಾಡಿದ್ದಾರೆ. ಹಿಂದೇ ಭಾರತೀಯರಿಗೆ ಬ್ರಿಟೀಶರ ವಿರುದ್ಧ ಹೋರಾಡಬೇಕಾದ ಅಗತ್ಯವಿತ್ತು. ಆದರೆ ಇಂದು ಭಾರತೀಯರೊಂದಿಗೇ ಹೋರಾಡಬೇಕಾದ ಸನ್ನಿವೇಶ ಎದುರಾಗಿದೆ' ಎಂದು ಅವರು ಕುಟುಕಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jammu and Kashmir National Conference president ( JKNC) and former chief minister of Jammu-Kashmir, Farooq Abdullah launched a scathing attack on the ruling National Democratic Alliance ( NDA), saying that any outside source doesn't pose any threat to India, as those dwelling inside the nation are even more dangerous.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X