PF ಹಿಂಪಾವತಿ ಇನ್ನು ಆನ್ ಲೈನ್ ಮೂಲಕ!
ನವದೆಹಲಿ. ಏ. 18: ಇದೇ ಸೆಪ್ಟೆಂಬರಿನಿಂದ ತನ್ನ ಎಲ್ಲಾ ಚಂದಾದಾರರಿಗೂ ಆನ್ ಲೈನ್ ಮೂಲಕವೇ ಸರ್ವ ಸೇವೆಗಳನ್ನು ಒದಗಿಸಲು ನೌಕರರ ಭವಿಷ್ಯ ನಿಧಿ ಮಂಡಳಿಯು (ಇಪಿಎಫ್ಒ) ಸರ್ವ ಸಜ್ಜಾಗಿದೆ.
ಅಂದರೆ Employees' Provident Fund Organisation ಸಂಸ್ಥೆಯು ಸೆ. 1ರಿಂದ ತನ್ನೆಲ್ಲ ವಹಿವಾಟು ಪಾವತಿಗಳನ್ನು ನೇರವಾಗಿ ಇ-ಪಾವತಿ ಮೂಲಕ (e-payment) ನೆರವೇರಿಸಲಿದೆ. ಸದ್ಯಕ್ಕೆ ಶೇ. 93ರಷ್ಟು ಸೌಲಭ್ಯಗಳು ಆನ್ ಲೈನ್ ಮೂಲಕ ವರ್ಗಾವಣೆಯಾಗುತ್ತಿವೆ.

ಸಂಸ್ಥೆಯು ಸುಮಾರು 44 ಲಕ್ಷ ಪಿಂಚಣಿದಾರರಿಗೆ ಪ್ರತಿ ತಿಂಗಳು ಪಿಂಚಣಿಯನ್ನು ಪಾವತಿಸುತ್ತದೆ. ಪಿಂಚಣಿ ಮಾಹಿತಿಗಳ ಡಿಜಿಟಲೀಕರಣ ಮೂರು-ನಾಲ್ಕು ತಿಂಗಳಿನಲ್ಲಿ ಮುಕ್ತಾಯವಾಗಲಿದೆ. ಅದಾಗುತ್ತಿದ್ದಂತೆ ಪ್ರತಿ ತಿಂಗಳೂ ಪಿಂಚಣಿಯನ್ನೂ ಸಹ ಆನ್ ಲೈನ್ ಮೂಲಕ ಪಡೆಯಬಹುದಾಗಿದೆ.
ಆನ್ ಲೈನ್ ಪದ್ಧತಿಯಲ್ಲಿ ಹಣ ಪಾವತಿಸುವುದರಿಂದ ಸಂಸ್ಥೆಯ ಕಾರ್ಯದಕ್ಷತೆ ಹೆಚ್ಚಲಿದ್ದು, ಪಾರದರ್ಶಕತೆಯೂ ಏರಲಿದೆ ಮತ್ತು ಕಾಗದ ಪತ್ರಗಳ ಹೊರೆ ಗಣನೀಯವಾಗಿ ತಗ್ಗಲಿದೆ. (PTI)












Click it and Unblock the Notifications