PF ಪೋರ್ಟಲ್ ಹ್ಯಾಕ್ : ಮಾಹಿತಿ ಸೋರಿಕೆ ತಳ್ಳಿಹಾಕಿದ ಆಧಾರ್
ನವದೆಹಲಿ, ಮೇ 03: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ)ಯ ಪೋರ್ಟಲ್ ಹ್ಯಾಕ್ ಆಗಿದ್ದು, ಆಧಾರ್ ಜೋಡಣೆಯಾಗಿರುವ ಪಿಎಫ್ ಖಾತೆಯಿಂದ ವ್ಯಕ್ತಿಯ ವೈಯಕ್ತಿಕ ಮತ್ತು ವೃತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕದಿಯಲಾಗಿದೆ ಎಂದು ವೃತ್ತ ಪತ್ರಿಕೆಯೊಂದು ಪ್ರಕಟಿಸಿದ್ದ ಸುದ್ದಿಯನ್ನು ಆಧಾರ್ ಪ್ರಾಧಿಕಾರ ತಳ್ಳಿಹಾಕಿದೆ.

ಆಧಾರ್ ಜೋಡಿಸಲಾದ ಪಿಎಫ್ ಖಾತೆಗಳ ವಿವರಕ್ಕೆ ಕನ್ನಹಾಕಿ ವ್ಯಕ್ತಿಯ ವೈಯಕ್ತಿಕ ಮತ್ತು ವೃತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕದಿಯಲಾಗಿದೆ ಎಂದು ಈ ವರದಿಯಲ್ಲಿ ಹೇಳಲಾಗಿತ್ತು. ಆದರೆ ಈ ಪೋರ್ಟಲ್ ಮೂಲಕ ಆಧಾರ್ ವಿವರಗಳನ್ನು ಕಲೆಹಾಕಲು ಸಾಧ್ಯವೇ ಇಲ್ಲ. ಈ ವೆಬ್ ಸೈಟ್ ಆಧಾರ್ ಪ್ರಾಧಿಕಾರಕ್ಕೆ ಸೇರಿದ್ದಲ್ಲ ಎಂದು ಯುಐಡಿಐಎ(Unique Identification Authority of India) ಹೇಳಿದೆ.
"ಈ ವೆಬ್ ಸೈಟ್ ಆಧಾರ್ ಪ್ರಾಧಿಕಾರಕ್ಕೆ ಸಂಬಂಧಿಸಿದ್ದಲ್ಲ. ಯಾವ ಕಾರಣಕ್ಕೂ ಆಧಾರ್ ಮಾಹಿತಿ ಸೋರಿಕೆಯಾಗುವ ಸಂಭವವಿಲ್ಲ. ಯುಐಡಿಎಐ ಸರ್ವರ್ ಗಳನ್ನು ಬಳಸಿ ಆಧಾರ್ ಮಾಹಿತಿ ಕಲೆ ಹಾಕುವುದಕ್ಕೆ ಸಾಧ್ಯವಿಲ್ಲ. ಆಧಾರ್ ದತ್ತಾಂಶಗಳು ಸುರಕ್ಷಿತವಾಗಿವೆ" ಎಂದು ಆಧಾರ್ ಪ್ರಾಧಿಕಾರ ಸಮಜಾಯಿಷಿ ನೀಡಿದೆ.












Click it and Unblock the Notifications