ನೈಜೀರಿಯನ್ 'ಸೆಲೆಬ್ರಿಟಿ'ಯನ್ನು ವಶಕ್ಕೆ ಪಡೆದ ಸಿಐಎಸ್ ಎಫ್ ಸಿಬ್ಬಂದಿ

ನವದೆಹಲಿ, ಅಕ್ಟೋಬರ್ 25: ಬಾಲಿವುಡ್ ಸಿನಿಮಾಗಳಲ್ಲಿ ಕೂಡ ನಟಿಸಿರುವ ನೈಜೀರಿಯನ್ 'ಸೆಲೆಬ್ರಿಟಿ'ಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಐಎಸ್ ಎಫ್ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ. ವೀಸಾ ಅವಧಿ ಮುಗಿದ ಮೇಲೂ ದೇಶದಲ್ಲಿ ವಾಸವಿದ್ದ ಆರೋಪದ ಮೇಲೆ ಈ ಕ್ರಮ ಜರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಲಮಿಲೆಕನ್ ಎಮ್ ಅಕನ್ಬಿ ಎಂಬ ನೈಜೀರಿಯನ್ ಪ್ರಜೆಯನ್ನು ಅನುಮಾನದ ಮೇಲೆ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ವಿಸ್ತಾರ ಏರ್ ಲೈನ್ಸ್ ಮೂಲಕ ಆತ ಗೋವಾಗೆ ತೆರಳುವವನಿದ್ದ. ಆಗ ಆತನನ್ನು ಪ್ರಶ್ನಿಸಿದಾಗ, ವೀಸಾ ಅವಧಿ ಮುಗಿದಿದ್ದನ್ನು ಹೇಳಿಕೊಂಡಿದ್ದಾನೆ.

ಆ ನಂತರ ಸಿಐಎಸ್ ಎಫ್ ಅಧಿಕಾರಿಗಳು ವಲಸಿಗ ಹಾಗೂ ಕೇಂದ್ರೀಯ ಗುಪ್ತಚರ ಇಲಾಖೆಯನ್ನು ಸಂಪರ್ಕಿಸಿ, ಆತನ ಬಗ್ಗೆ ಮಾಹಿತಿ ಕೇಳಿದ್ದಾರೆ. ಎಂಟು ವರ್ಷದ ಹಿಂದೆಯೇ ವೀಸಾ ಅವಧಿ ಮುಕ್ತಾಯ ಆಗಿದೆ ಎಂದು ತಿಳಿದುಬಂದಿದೆ.

Nigerian Celebrity Apprehended By CISF Officials In New Delhi IGI

ನೈಜೀರಿಯಾದಲ್ಲಿ ಆತನನ್ನು ಸೆಲೆಬ್ರಿಟಿ ರೀತಿಯಲ್ಲಿ ನೋಡುತ್ತಿದ್ದರು. ಕೆಲವು ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದ ಆತ, ಕಾನೂನುಬಾಹಿರವಾಗಿ ಭಾರತದಲ್ಲಿ ಇದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ವಿಚಾರಣೆಗೆ ಆತನನ್ನು ಗುಪ್ತಚರ ದಳದ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+