Get Updates
Get notified of breaking news, exclusive insights, and must-see stories!

ಉಗ್ರ ಭಟ್ಕಳನ ಆಪ್ತ ಎನ್ಐಎ ಬಲೆಗೆ ಬಿದ್ದ

ನವದೆಹಲಿ, ಅ.1: ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಯಾಸಿನ್ ಭಟ್ಕಳನ ಆಪ್ತ ಸಹಚರನೊಬ್ಬನನ್ನು ರಾಷ್ಟ್ರೀಯ ಭಧ್ರತಾ ಸಂಸ್ಥೆ (ಎನ್‌ಐಎ)ಯ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಕೇರಳದ ಎರ್ನಾಕುಲಂನಲ್ಲಿ ಕಾರ್ಯಾಚರಣೆ ನಡೆಸಿದ ಎನ್ ಐಎ ಅಧಿಕಾರಿಗಳು ಭಟ್ಕಳ್ ನ ಸಹಚರ ಮಹಮದ್ ಮಂಜೀರ್ ಇಮಾಮ್ ಎಂಬಾತನನ್ನು ಬಂಧಿಸಿದ್ದಾರೆ. 2003ರಿಂದ ಈಚೆಗೆ ಭಾರತದಲ್ಲಿ ನಡೆದ ಎಲ್ಲ ಪ್ರಮುಖ ಬಾಂಬ್ ಸ್ಫೋಟಗಳಲ್ಲಿ ಈತನ ಕೈವಾಡ ಇತ್ತು ಎಂಬ ಅಂಶವನ್ನು ಎನ್ ಐಎ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಬಂಧಿತ ಉಗ್ರ ಇಮಾಮ್ ನನ್ನು ಎನ್ ಐಎ ಅಧಿಕಾರಿಗಳು ಮಂಗಳವಾರ(ಅ.1) ಜಿಲ್ಲಾ ನ್ಯಾಯಾಧೀಶರಾದ ಐಎಸ್ ಮೆಹ್ತಾ ಅವರ ಮುಂದೆ ಹಾಜರುಪಡಿಸಿ, 15 ದಿನಗಳ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಇಂಡಿಯನ್ ಮುಜಾಹಿದ್ದೀನ್ ಉಗ್ರ ಯಾಸಿನ್ ಭಟ್ಕಲನನ್ನು ವಿಚಾರಣೆ ಮಾಡುವ ಸಂದರ್ಭದಲ್ಲಿ ಆತ ತನ್ನ ಮೂವರು ಸಹಚರರ ಬಗ್ಗೆ ಬಾಯಿ ಬಿಟ್ಟಿದ್ದನು. ಆತ ನೀಡಿದ ಮಾಹಿತಿಯ ಮೇರೆಗೆ ಎನ್ ಐಎ ಅಧಿಕಾರಿಗಳು ಇಮಾಮ್ ನನ್ನು ಬಂಧಿಸಿದ್ದಾರೆ.

NIA arrests Yasin Bhatkal's aide in fresh case of terror strikes

ಬಂಧಿತ ಮಹಮದ್ ಮಂಜೀರ್ ಇಮಾಮ್ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸಂಸ್ಥಾಪಕರಾದ ರಿಯಾಜ್ ಭಟ್ಕಳ್ ಮತ್ತು ತೆಹಸೀನ್ ಅಖ್ತರ್ ‌ನ ಆಣತಿಯಂತೆ ಕೆಲಸ ಮಾಡುತ್ತಿದ್ದನು. ಅಲ್ಲದೆ ಬಾಂಬ್ ಸ್ಫೋಟ ನಡೆಸುವ ಪ್ರದೇಶಗಳ ಸಂಪೂರ್ಣ ಮಾಹಿತಿಯನ್ನು ಇವರಿಗೆ ತಲುಪಿಸುತ್ತಿದ್ದನು ಎಂದು ಎನ್ ಐಎ ಮೂಲಗಳು ತಿಳಿಸಿವೆ. ಪ್ರಸ್ತುತ ಮಹಮದ್ ಮಂಜೀರ್ ಇಮಾಮ್ ‌ನನ್ನು ನ್ಯಾಯಾಲಯ ಅಕ್ಟೋಬರ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕರಾದ ಯಾಸಿನ್ ಭಟ್ಕಳ ಹಾಗೂ ರಿಯಾಜ್ ಭಟ್ಕಳ ಅವರ ವಿಚಾರಣೆ ಸಂದರ್ಭದಲ್ಲಿ ಅನೇಕ ಬಾರಿ ಇಮಾಮ್ ಹೆಸರು ಪ್ರಸ್ತಾಪಿಸಿದ್ದರು. ರಿಯಾಜ್ ಆದೇಶದಂತೆ ಭಾರತದಲ್ಲಿ ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ಇಮಾಮ್ ಪಾಲ್ಗೊಂಡಿದ್ದರ ಬಗ್ಗೆ ಪುರಾವೆಗಳು ಸಿಕ್ಕಿತ್ತು.

ಸದ್ಯ ಇಂಡಿಯನ್ ಮುಜಾಹಿದ್ದೀನ್ ಅಡಗುತಾಣಗಳ ಬಗ್ಗೆ ತಿಳಿಯಲು ರಾಷ್ಟ್ರೀಯ ಭದ್ರತಾ ಪಡೆ ತನಿಖೆ ಮುಂದುವರೆಸಿದೆ. ದಕ್ಷಿಣದಲ್ಲಿ ಕರ್ನಾಟಕ, ಗೋವಾ ನಂತರ ಕೇರಳದಲ್ಲೂ ಐಎಂ ಉಗ್ರರ ತಾಣಗಳ ಗುರುತು ಸಿಕ್ಕಿದೆ. ಕೇರಳದಲ್ಲಿ ಇಮಾಂ ಮುಂದಾಳತ್ವದಲ್ಲಿ ಉಗ್ರರ ಸಂಘಟನೆ ಕಾರ್ಯ ನಡೆದಿತ್ತು ಎನ್ನಲಾಗಿದೆ. (ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+