ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಸಾವಿನ ಬಗ್ಗೆ ನ್ಯೂಯಾರ್ಕ್ ಟೈಮ್ಸ್‌ನ ವರದಿ ಆಧಾರ ರಹಿತ ಎಂದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಮೇ 21: ಭಾರತದಲ್ಲಿ ಕೊರೊನಾ ವೈರಸ್‌ನಿಂದಾಗಿ ಮೃತಪಟ್ಟ ದೊಡ್ಡ ಪ್ರಮಾಣದಲ್ಲಿ ಗಣನೆಗೆ ತೆಗೆದುಕೊಂಡಿಲ್ಲ ಹಾಗೂ ಮೃತಪಟ್ಟವರ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಈ ವರದಿಯನ್ನು ಸರ್ಕಾರ ನೇರವಾಗಿ ತಳ್ಳಿಹಾಕಿದ್ದು ಆಧಾರ ರಹಿತ ವರದಿ ಎಂದಿದೆ.

ನ್ಯೂಯಾರ್ಕ್ ಟೈಮ್ಸ್ ಮಾಡಿರುವ ವರದಿಗೆ ದಾಖಲೆಗಳ ಆಧಾರವಿಲ್ಲ. ಕೇವಲ ಅಂದಾಜಿನ ಮೇಲೆ ವಿಕೃತ ಅಂದಾಜು ಮಾಡಲಾಗಿದೆ ಎಂದು ನೀತಿ ಆಯೋಗದ ಸದಸ್ಯ ಮತ್ತು ಭಾರತದ ಕೋವಿಡ್ ಟಾಸ್ಕ್ ಫೋರ್ಸ್‌ನ ಮುಖ್ಯಸ್ಥ ವಿಕೆ ಪೌಲ್ ಹೇಳಿದ್ದಾರೆ.

"ಕೊರೊನಾ ಲಸಿಕೆ ಅಭಾವಕ್ಕೆ ರಾಜ್ಯ ಸರ್ಕಾರಗಳೇ ಹೊಣೆ"

ಕೊರೊನಾ ವೈರಸ್‌ನ ಕಾರಣದಿಂದಾಗಿ ಅಧಿಕೃತ ದಾಖಲೆಯ ಪ್ರಕಾರ ಭಾರತದಲ್ಲಿ ಮೂರು ಲಕ್ಷ ಜನರು ಮೃತಪಟ್ಟಿದ್ದಾರೆ. ಆದರೆ ಕಳೆದ ಮಂಗಳವಾರ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ವರದಿಯಲ್ಲಿ ಈ ಸಂಖ್ಯೆ ಅಧಿಕೃತ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿದೆ ಎಂದು ಹೇಳಿತ್ತು. ಈ ವರದಿಯಲ್ಲಿ ವಿವಿಧ ಸನ್ನಿವೇಶಗಳನ್ನು ಪ್ರಸ್ತುತಪಡಿಸಿದ್ದು ಭಾರತದಲ್ಲಿ ಕೊರೊನಾ ವೈರಸ್‌ನಿಂದಾಗಿ 42 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಿದೆ. ಆದರೆ ಭಾರತದ ಅಧಿಕೃತ ಸಾವಿನ ಸಂಖ್ಯೆ ಕೊರೊನಾ ವೈರಸ್‌ನ ನಿಜವಾದ ಪ್ರಮಾಣವನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ ಎಂದು ಹೇಳಿದೆ.

New York Times Report On Covid Deaths is baseless says Centre

ಆದರೆ ಡಾಕ್ಟರ್ ಪೌಲ್ ಈ ಬಗ್ಗೆ ಮಾತನಾಡುತ್ತಾ ಕೊರೊನಾ ವೈರಸ್ ದೃಢಪಟ್ಟ ಪ್ರಕರಣಗಳ ಸಂಖ್ಯೆ ಅಧಿಕೃತವಾಗಿರುವ ಸಂಖ್ಯೆಗಿಂತ ಕೆಲ ಪಟ್ಟು ಹೆಚ್ಚಾಗಿರುವ ಸಾಧ್ಯತೆಯಿರುತ್ತದೆ. ಆದರೆ ಸಾವಿನ ಪ್ರಮಾಣದ ಲೆಕ್ಕಾಚಾರದಲ್ಲಿ ಅದು ತಪ್ಪಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕೆಲ ಸಂದರ್ಭಗಳಲ್ಲಿ ಸಾವಿನ ಬಗ್ಗೆ ತಡವಾಗಿ ವರದಿಯಾಗಿರಬಹುದು. ಆದರೆ ಇದರಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರಗಳ ಉದ್ದೇಶಗಳು ಇಲ್ಲ. ಆದರೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಉಲ್ಲೇಖಿಸಿದ ಮೂರು ಪಟ್ಟು ಹಚ್ಚಿನ ಪ್ರಮಾಣವನ್ನು ನ್ಯೂಯಾರ್ಕ್‌ಗೆ ಅನ್ವಯಿಸಿದರೆ ಅದು 50,000 ಆಗುತ್ತದೆ. ಆದರೆ ಅವರ ಪ್ರಕಾರ 16,000 ಸಾವುಗಳು ನ್ಯೂಯಾರ್ಕ್‌ನಲ್ಲಿ ಸಂಭವಿಸಿದೆ. ತಪ್ಪು ನಡೆದಿರುವುದು ಇಲ್ಲಿ ಎಂದು ವಿಕೆ ಪೌಲ್ ತಿರುಗೇಟು ನೀಡಿದ್ದಾರೆ.

English summary
New York Times Report On Covid Deaths is baseless said head of India's Covid task force VK Paul.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X