ಸುನಂದಾ ದಾಂಪತ್ಯದಲ್ಲಿ ಕಲಹ ತಂದಿಟ್ಟ 'ಕೇಟಿ' ಯಾರು?
ನವದೆಹಲಿ, ಜ. 10: ದಿನದಿಂದ ದಿನಕ್ಕೆ ಜಟಿಲವಾಗುತ್ತಿರುವ ಸುನಂದಾ ಪುಷ್ಕರ್ ಕೊಲೆ ಪ್ರಕರಣದಲ್ಲಿ ಹೊರಬಂದಿರುವ ಹೊಸ ಹೆಸರು ಕೇಟಿ. ಇವಳಿಂದಾಗಿಯೇ ಸುನಂದಾ ಹಾಗೂ ಶಶಿ ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು ಎಂದು ನಾರಾಯಣ ಸಿಂಗ್ ಹೇಳಿದ್ದಾರೆ. ಆದ್ದರಿಂದ ಪೊಲೀಸರು ಕೇಟಿ ಯಾರೆಂದು ತಿಳಿಯುವುದು ಪೊಲೀಸರಿಗೆ ಎದುರಾಗಿರುವ ಹೊಸ ಸವಾಲು.
ಪ್ರಕರಣದಲ್ಲಿ ಇನ್ನೂ 15 ಜನರನ್ನು ತನಿಖೆಗೊಳಪಡಿಸಲು ನವದೆಹಲಿ ಪೊಲೀಸರು ಸಜ್ಜಾಗಿದ್ದಾರೆ. ಅವರಲ್ಲಿ ಕೇಟಿ ಕೂಡ ಒಬ್ಬಳು. ಇದುವರೆಗೂ ಈ ಮಹಿಳೆ ಯಾರೆಂದು ಗೊತ್ತಾಗಿಲ್ಲ. ಸುನಂದಾ ಸಾವನ್ನಪ್ಪಿದ ನಂತರ ಕೆಲಸ ಬಿಟ್ಟು ತೆರಳಿದ ಹೋಟೆಲ್ ಸಿಬ್ಬಂದಿಯೋರ್ವನನ್ನೂ ಪ್ರಶ್ನಿಸಲು ಪೊಲೀಸರು ನಿರ್ಧರಿಸಿದ್ದಾರೆ. [ಇನ್ನಷ್ಟು ನಿಗೂಢ ಹೆಸರು ಬಯಲು]

ಮೆಹರ್ ತರಾರ್ ಉತ್ತರಿಸ್ತಾರಾ? : ಪೊಲೀಸರ ಪಟ್ಟಿಯಲ್ಲಿರುವ ಮತ್ತೊಂದು ಹೆಸರು ರಾಕೇಶ್ ಶರ್ಮಾ. ಇವರು ಶಶಿ ತರೂರ್ ಕುಟುಂಬದ ಸ್ನೇಹಿತ. ಅಲ್ಲದೆ, ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್ ಅವರನ್ನು ಪ್ರಶ್ನಿಸುವ ಯೋಚನೆಯೂ ಪೊಲೀಸರಲ್ಲಿದೆ. ಪ್ರಕರಣ ಸಂಬಂಧ ಪ್ರಶ್ನೆಗಳನ್ನು ಮೆಹರ್ ಅವರಿಗೆ ಇಮೇಲ್ ಮೂಲಕ ಕಳುಹಿಸಲಾಗುವುದು. ಇಮೇಲ್ ಮೂಲಕವೇ ಪ್ರತಿಕ್ರಿಯೆ ಪಡೆಯಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. [ಮೆಹರ್ ಪ್ರೇಮ ಪ್ರಸಂಗ]
ಒಂದು ವೇಳೆ ಪ್ರಕರಣ ಸಂಬಂಧ ಪೊಲೀಸರು ಯಾವುದೇ ಪ್ರಶ್ನೆ ಕೇಳಿದರೆ ಪ್ರತಿಕ್ರಿಯಿಸಲು ಸಿದ್ಧ ಎಂದು ಮೆಹರ್ ತರಾರ್ ಅವರು ಭಾರತೀಯ ಟಿವಿ ಚಾನಲ್ ಒಂದಕ್ಕೆ ತಿಳಿಸಿದ್ದಾರೆ. [ಶಶಿ ತರೂರ್ ಪತ್ರ ನೀಡಿದ ಹೊಸ ಟ್ವಿಸ್ಟ್]
ಸುನಂದಾ ಅವರು ಪತಿ ಶಶಿ ತರೂರ್‌ಗೆ ಫೋನ್ ಮಾಡಿ "ನಿಮ್ಮ ಕತೆ ಮುಗೀತು, ಎಲ್ಲವನ್ನೂ ಮಾಧ್ಯಮದ ಎದುರು ಬಿಚ್ಚಿಡ್ತೀನಿ" ಎಂಬ ಅಡುಗೆ ಭಟ್ಟ ನಾರಾಯಣ ಸಿಂಗ್ ಹೇಳಿಕೆ ತೀವ್ರ ಕುತೂಹಲ ಕೆರಳಿಸಿದೆ. ಆದರೆ, ಸುನಂದಾ ಮಾಧ್ಯಮದ ಎದುರು ಏನನ್ನು ಹೇಳಲು ಹೊರಟಿದ್ದರು ಎಂಬುದು ಇನ್ನೂ ಗೊತ್ತಾಗಿಲ್ಲ. [ಸುನಂದಾ ಸಾವು ಹುಟ್ಟುಹಾಕಿದ 5 ಪ್ರಶ್ನೆಗಳು]












Click it and Unblock the Notifications