ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

17 ರೂಪಾಂತರ ತಾಳಬಹುದು ವೈರಸ್; ಹೈದರಾಬಾದ್ ಸಂಸ್ಥೆ ವಾರ್ನಿಂಗ್

|
Google Oneindia Kannada News

ನವದೆಹಲಿ, ಡಿಸೆಂಬರ್ 30: ಬ್ರಿಟನ್ ನಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ ರೂಪಾಂತರ, ಇನ್ನೂ 17 ರೂಪಾಂತರಗಳನ್ನು ತಾಳಬಹುದಾಗಿದ್ದು, ಇದರಲ್ಲಿ ಎಂಟು ರೂಪಾಂತರಗಳು ಪರಿಣಾಮಕಾರಿಯಾಗಿರಲಿವೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಕೊರೊನಾ ರೂಪಾಂತರ ಸೋಂಕಿನ ಕುರಿತು ಅಧ್ಯಯನ ಕೈಗೊಂಡಿರುವ ಹತ್ತು ಸಂಶೋಧನಾ ಸಂಸ್ಥೆಗಳ ಪೈಕಿ ಹೈದರಾಬಾದ್ ನ ಸಿಎಸ್ ಐಆರ್-ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲೆಕ್ಯುಲರ್ ಬಯಾಲಜಿ ಕೂಡ ಒಂದಾಗಿದ್ದು, ಈ ರೂಪಾಂತರ ಸೋಂಕಿನ ಲಕ್ಷಣಗಳಲ್ಲಿ ಯಾವುದೇ ಬದಲಾವಣೆ ಹೊಂದಿಲ್ಲ ಹಾಗೂ ಲಸಿಕೆ ಅಭಿವೃದ್ಧಿಗೆ ಇದರಿಂದ ಯಾವುದೇ ತೊಡಕು ಇಲ್ಲ ಎಂದು ಸಂಸ್ಥೆ ತಿಳಿಸಿದೆ. ಮುಂದೆ ಓದಿ...

ಬ್ರಿಟನ್‌ನಿಂದ ಮರಳಿದವರ ಪತ್ತೆ ಯಾಕಿಷ್ಟು ತಲೆನೋವಾಗಿದೆ ಗೊತ್ತಾ...ಬ್ರಿಟನ್‌ನಿಂದ ಮರಳಿದವರ ಪತ್ತೆ ಯಾಕಿಷ್ಟು ತಲೆನೋವಾಗಿದೆ ಗೊತ್ತಾ...

 ಬ್ರಿಟನ್ ನಿಂದ ಭಾರತಕ್ಕೆ ಮರಳಿದವರಲ್ಲಿ ಸೋಂಕು

ಬ್ರಿಟನ್ ನಿಂದ ಭಾರತಕ್ಕೆ ಮರಳಿದವರಲ್ಲಿ ಸೋಂಕು

ಬ್ರಿಟನ್ ನಿಂದ ಭಾರತಕ್ಕೆ ಮರಳಿದ 20 ಮಂದಿಯಲ್ಲಿ ಬುಧವಾರ ರೂಪಾಂತರ ಸೋಂಕು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಇದುವರೆಗೂ ಭಾರತದಲ್ಲಿ 33,000 ಪ್ರಯಾಣಿಕರನ್ನು ಪತ್ತೆಹಚ್ಚಿದ್ದು, ಈ ಸೋಂಕು ಭಾರತದಲ್ಲಿಯೂ ಪತ್ತೆಯಾಗಿರುವುದಾಗಿ ಮಂಗಳವಾರ ತಿಳಿದುಬಂದಿದೆ. ಈ ಬೆನ್ನಲ್ಲೇ ಸಂಶೋಧಕರು ರೂಪಾಂತರ ಸೋಂಕಿನ ಕುರಿತು ಮಾಹಿತಿ ನೀಡಿದ್ದಾರೆ.

 ತ್ವರಿತವಾಗಬೇಕಿದೆ ಪರೀಕ್ಷಾ ಪ್ರಕ್ರಿಯೆ

ತ್ವರಿತವಾಗಬೇಕಿದೆ ಪರೀಕ್ಷಾ ಪ್ರಕ್ರಿಯೆ

ಕೊರೊನಾ ವೈರಸ್ ನ ಹೊಸ ರೂಪಾಂತರ B.1.1.7 ಕೊರೊನಾ ಸೋಂಕಿಗಿಂತ ಅತಿ ವೇಗವಾಗಿ ಹರಡಬಲ್ಲದ್ದಾಗಿದೆ ಹೀಗಾಗಿ ಈ ಸೋಂಕಿನ ಜೆನೋಮ್ ಪರೀಕ್ಷೆಯನ್ನು ತ್ವರಿತಗೊಳಿಸುವ ಹಾಗೂ ಭಾರತದಲ್ಲಿ ಈ ಹೊಸ ರೂಪಾಂತರ ಸೋಂಕಿನ ಉಪಸ್ಥಿತಿ ಕುರಿತು ಪರಿಶೀಲಿಸುವ ಅಗತ್ಯವಿದೆ. ನಾವು ಈ ರೂಪಾಂತರ ಸೋಂಕಿನ ಪರೀಕ್ಷೆಗೆ ಹಳೆಯ ಹಾಗೂ ಆಧುನಿಕ ಪರೀಕ್ಷಾ ಪದ್ಧತಿ ಬಳಸಿದ್ದೇವೆ ಎಂದು ಸಿಸಿಎಂಬಿ ಡಾ. ದಿವ್ಯಾ ತೇಜ್ ಸೌಪಾತಿ ಮಾಹಿತಿ ನೀಡಿದ್ದಾರೆ.

ರೂಪಾಂತರಿ ವೈರಸ್‌ ವಿರುದ್ಧ ಯಾವ ಲಸಿಕೆಗಳೂ ಪರಿಣಾಮಕಾರಿಯಲ್ಲ ಎನ್ನಲು ಆಧಾರವಿಲ್ಲ: ಸರ್ಕಾರರೂಪಾಂತರಿ ವೈರಸ್‌ ವಿರುದ್ಧ ಯಾವ ಲಸಿಕೆಗಳೂ ಪರಿಣಾಮಕಾರಿಯಲ್ಲ ಎನ್ನಲು ಆಧಾರವಿಲ್ಲ: ಸರ್ಕಾರ

 ಎಂಟು ರೂಪಾಂತರಗಳು ಪರಿಣಾಮಕಾರಿ

ಎಂಟು ರೂಪಾಂತರಗಳು ಪರಿಣಾಮಕಾರಿ

ಈ ಹೊಸ ಕೊರೊನಾ ಸೋಂಕಿನ ರೂಪಾಂತರವು ತನ್ನ ಆನುವಂಶಿಕದಿಂದ 17 ರೂಪಾಂತರಗಳನ್ನು ಹೊಂದಬಹುದಾಗಿ ತಿಳಿದುಬಂದಿದೆ. ಇದರಲ್ಲಿ ಎಂಟು ರೂಪಾಂತರಗಳು ಪರಿಣಾಮಕಾರಿಯಾಗಿದ್ದು, ಪ್ರೊಟೀನ್ ಮೇಲೆ ಪರಿಣಾಮ ಬೀರುತ್ತವೆ. ಅತಿ ಬೇಗ ಜೀವಕೋಶಗಳಿಗೆ ಸೋಂಕು ತಗಲುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

 ಇಲ್ಲೇ ಸ್ವತಂತ್ರವಾಗಿ ರೂಪಾಂತರ ಸೃಷ್ಟಿಯಾಗಬಹುದು

ಇಲ್ಲೇ ಸ್ವತಂತ್ರವಾಗಿ ರೂಪಾಂತರ ಸೃಷ್ಟಿಯಾಗಬಹುದು

ಕೊರೊನಾ ಸೋಂಕಿನ ಲಕ್ಷಣಗಳಂತೆಯೇ ಈ ರೂಪಾಂತರ ಸೋಂಕಿನ ಲಕ್ಷಣಗಳೂ ಇರುತ್ತದೆ. ಪರೀಕ್ಷಾ ಪ್ರಕ್ರಿಯೆಯೂ ಹಾಗೇ ಇರುತ್ತದೆ. ಆದರೆ ಹೆಚ್ಚು ವೇಗವಾಗಿ ಹರಡುವುದೇ ಅತಿ ದೊಡ್ಡ ಸಮಸ್ಯೆ ಎಂದು ಹೇಳಿದ್ದಾರೆ. ಈ ಸೋಂಕಿನ ಹರಡುವಿಕೆ ತಡೆಗೆ ತೆಗೆದುಕೊಳ್ಳುವ ಕ್ರಮಗಳೂ ಒಂದೇ ಆಗಿವೆ. ಮಾಸ್ಕ್‌ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸದ್ಯಕ್ಕೆ ಈ ಸೋಂಕು ನಿವಾರಿಸುವ ಮಾರ್ಗ ಎಂದು ಸಿಸಿಎಂಬಿ ಡಾ ರಾಕೇಶ್ ಮಿಶ್ರಾ ತಿಳಿಸಿದ್ದಾರೆ. ಇದೇ ಸಂದರ್ಭ "ಕೊರೊನಾ ವೈರಸ್ ರೂಪಾಂತರ ಬ್ರಿಟನ್ ನಿಂದ ಹರಡುವುದು ಮಾತ್ರವಲ್ಲ, ಭಾರತದಲ್ಲಿ ಸ್ವತಂತ್ರವಾಗಿಯೂ ಸೃಷ್ಟಿಯಾಗಬಹುದು. ಈ ಬಗ್ಗೆ ಕಣ್ಣಿಡಬೇಕಿದೆ. ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಂಥ ದೇಶದಲ್ಲಿ ಇದರ ಅವಶ್ಯಕತೆ ಹೆಚ್ಚಿದೆ ಎಂದಿದ್ದಾರೆ.

English summary
The CSIR-Centre for Cellular and Molecular Biology (CCMB) in Hyderabad said that new coronavirus strain shows 17 mutations in its genetic material and of these eight affect the spike protein,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X