ಕಪ್ಪು ಹಣ ಖಾತೆದಾರರ ಹೆಸರು ಬಹಿರಂಗ
ನವದೆಹಲಿ, ಅ.27: ವಿದೇಶಗಳಲ್ಲಿನ ಬ್ಯಾಂಕುಗಳಲ್ಲಿ ಅಕ್ರಮವಾಗಿ ಹಣ ಇಟ್ಟಿರುವ ಭಾರತೀಯ ಮೂಲದ ಖಾತೆದಾರರ ವಿವರಗಳು ಈಗ ಲಭ್ಯವಾಗಿದೆ. ಮೂವರು ಉದ್ಯಮಿಗಳ ಹೆಸರುಳ್ಳ ಪಟ್ಟಿಯನ್ನು ಸುಪ್ರೀಂಕೋರ್ಟಿಗೆ ಎನ್ ಡಿಎ ಸರ್ಕಾರ ಸೋಮವಾರ ಸಲ್ಲಿಸಿದೆ. ಮೊದಲ ಪಟ್ಟಿಯಲ್ಲಿ ಯಾವುದೇ ರಾಜಕಾರಣಿಗಳ ಹೆಸರಿಲ್ಲ.
ಸುಪ್ರೀಂಕೋರ್ಟಿನಲ್ಲಿ ಕಪ್ಪು ಹಣ ವಾಪಸ್ ತರುವ ವಿಚಾರಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಅವರ ಸರ್ಕಾರ ಅಫಿಡವಿಟ್ ಸಲ್ಲಿಸಲಿದ್ದು, ಅದರಲ್ಲಿ ಖಾತೆದಾರರ ಹೆಸರು ಹಾಗೂ ವಿವರಗಳನ್ನು ಉಲ್ಲೇಖಿಸಲಾಗಿದೆ. ಮೊದಲ ಪಟ್ಟಿಯಲ್ಲಿ ಟಿಂಬಲೋ ಕಂಪನಿಯ ರಾಧಾ ಎಸ್. ಟಿಂಬಲೋ, ಡಾಬರ್ ಸಮೂಹದ ಉದ್ಯಮಿ ಪ್ರದೀಪ್ ಬರ್ಮನ್ ಹಾಗೂ ಪಂಕಜ್ ಚಿಮನ್ ಲಾಲ್ ಲೋಧಿಯಾ ಹೆಸರಿದೆ. [ಯಾರ್ಯಾರಿಗೆ ಸಾಡೇಸಾತಿ ಶನಿಕಾಟ ಶುರು?]

ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಸಲ್ಲಿಸಿರುವ ದೂರು ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಾಲಯವು, ವಿದೇಶಿ ಬ್ಯಾಂಕ್ ಗಳಲ್ಲಿರುವ ಅಪಾರ ಪ್ರಮಾಣದ ಹಣ ಹೂಡಿಕೆ ಮಾಡಿರುವ ತೆರಿಗೆಗಳ್ಳರ ಪತ್ತೆ ಹಾಗೂ ಆ ಹಣವನ್ನು ಭಾರತಕ್ಕೆ ಮರಳಿ ತರುವುದು ಹೇಗೆ ಎಂಬ ಬಗ್ಗೆ ಮಾರ್ಗೋಪಾಯಗಳ್ನು ಕಂಡುಕೊಳ್ಳಲು ಸಮಿತಿಯೊಂದನ್ನು ರಚಿಸಿದೆ. [ಮೂವರು ಉದ್ಯಮಿಗಳ ವಿವರ]
Government files affidavit in SC disclosing names of black money holders pic.twitter.com/vl4hAjEFpV
— ANI (@ANI_news) October 27, 2014 ಇದಕ್ಕೂ ಮೊದಲು ಕಪ್ಪು ಹಣ ಹೊಂದಿರುವ ಖಾತೆದಾರರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಮೋದಿ ಸರ್ಕಾರ ಕೋರ್ಟ್ ಗೆ ಹೇಳಿಕೆ ನೀಡಿತ್ತು. ಈ ರೀತಿ ಖಾತೆದಾರರ ವಿವರ ಬಹಿರಂಗ ಪಡಿಸಿದರೆ ಖಾತೆ ಹೊಂದಿರುವ ದೇಶಗಳ ಜೊತೆಗಿನ ತೆರಿಗೆ ಸಂಬಂಧಿಸಿದ ಕಾನೂನು ಉಲ್ಲಂಘನೆಯಾಗುತ್ತದೆ ಎಂದಿತ್ತು. ಅದರೆ, ಇದಕ್ಕೆ ಕಾಂಗ್ರೆಸ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿತ್ತು.
ವಿದೇಶದಲ್ಲಿರುವ ಬ್ಯಾಂಕುಗಳಲ್ಲಿ ಅಕ್ರಮವಾಗಿ ಹಣ ಇಟ್ಟಿರುವವರ ಹೆಸರು ಬಹಿರಂಗವಾದರೆ ಕಾಂಗ್ರೆಸ್ ಮುಜುಗರಪಟ್ಟುಕೊಳ್ಳುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿಕೆ ನೀಡಿ ವಿವಾದ ಹುಟ್ಟಿಹಾಕಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ತಿರುಗಿಬಿದ್ದಿದ್ದು, ವಾಕ್ ಪ್ರಹಾರ ನಡೆಸಿದ್ದಾರೆ.[ವಿವರ ಇಲ್ಲಿ ಓದಿ]












Click it and Unblock the Notifications