ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದಲ್ಲಿ ರಾಜೀವ್ ಗೌಡ, ಹುಕ್ಕೇರಿ ಪ್ರಮಾಣ ವಚನ

|
Google Oneindia Kannada News

ನವದೆಹಲಿ, ಜು. 7 : ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಸಂಸದ ಪ್ರಕಾಶ್ ಹುಕ್ಕೇರಿ ಮತ್ತು ರಾಜ್ಯಸಭೆಗೆ ಕರ್ನಾಟಕ ವಿಧಾನಸಭೆಯಿಂದ ಆಯ್ಕೆಯಾದ ಪ್ರೊ.ರಾಜೀವ್ ಗೌಡ ಅವರು ಬಜೆಟ್ ಅಧಿವೇಶನದ ಮೊದಲ ದಿನ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಸತ್ತಿನಲ್ಲಿ ಹುಕ್ಕೇರಿ ಮತ್ತು ರಾಜ್ಯಸಭೆಯಲ್ಲಿ ರಾಜೀವ್ ಗೌಡ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಹಿಂದಿನ ಸುದ್ದಿ : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭಗೊಳ್ಳಲಿದ್ದು, ಆ.14ರವರೆಗೆ ನಡೆಯಲಿದೆ. ಮಂಗಳವಾರ ರೈಲ್ವೆ ಬಜೆಟ್ ಮಂಡನೆಯಾಗಲಿದ್ದು, ಗುರುವಾರ ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ.

rajeev gpwda

ಬಜೆಟ್ ಅಧಿವೇಶನದಲ್ಲಿ ಮೊದಲ ಬಾರಿಗೆ ನರೇಂದ್ರ ಮೋದಿ ಸರ್ಕಾರ ಪ್ರತಿಪಕ್ಷಗಳನ್ನು ಎದುರಿಸಲು ಸಜ್ಜಾಗಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಗೋಪಾಲ್ ಸುಬ್ರಮಣ್ಯಂ ಹೆಸರು ನಿರಾಕರಣೆ, ಕೇಂದ್ರ ಸಚಿವ ನಿಹಾಲ್‌ಚಂದ್‌ ಅತ್ಯಾಚಾರ ವಿವಾದ, ರೈಲು ಪ್ರಯಾಣ ಮತ್ತು ಸರಕು ಸಾಗಣೆ ದರ ಹೆಚ್ಚಳ ಮುಂತಾದ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಪ್ರತಿಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ.

ಮಂಗಳವಾರ ರೈಲ್ವೆ ಬಜೆಟ್ : ಜು.7 ರಿಂದ ಆ.14ರ ವರೆಗೆ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಜು.8ರಂದು ರೈಲ್ವೆ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಜು.10ರಂದು ಸಾಮಾನ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. [ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಬಳಸಿ ಎಸೆಯಬಲ್ಲ ಹಾಸಿಗೆ?]

ಸಂಸದರ ಚಿತ್ರ ಬರಲಿದೆ : ಸಂಸತ್ತಿನಲ್ಲಿ ಹಿಂದಿನ ಸಾಲಿನವರು ಮಾತನಾಡಲು ನಿಂತರೆ ಮುಂದಿನ ಸಾಲಿನಲ್ಲಿರುವ ಸಂಸದರಿಗೆ ಯಾರು ಮಾತನಾಡುತ್ತಿದ್ದಾರೆ ಎಂಬುದು ಕಾಣಿಸುತ್ತಿರಲಿಲ್ಲ. ಆದ್ದರಿಂದ ಹೊಸ ವ್ಯವಸ್ಥೆಯನ್ನು ಸಂಸತ್ ವೊಳಗೆ ಆಳವಡಿಸಲಾಗಿದ್ದು, ಸದನದಲ್ಲಿ ಮಾತನಾಡುವ ಸಂಸದರ ಚಿತ್ರ ಪರದೆ ಮೇಲೆ ಮೂಡಿಬರಲಿದೆ.

Budget Session

ಪ್ರತಿಪಕ್ಷ ಸ್ಥಾನಕ್ಕಾಗಿ ಪಟ್ಟು : ಇಂದು ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಕಾಂಗ್ರೆಸ್ ಪ್ರತಿಪಕ್ಷ ಸ್ಥಾನ ಪಡೆಯಲು ಪ್ರಯತ್ನ ಮುಂದುವರೆಸಿದೆ. ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಶನಿವಾರ ಸರಣಿ ಸಭೆಗಳೂ ನಡೆದಿವೆ. ಪ್ರತಿಪಕ್ಷ ಸ್ಥಾನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, "ಪ್ರತಿಪಕ್ಷ ಸ್ಥಾನ ನೀಡುವುದು, ಬಿಡುವುದು ಸ್ಪೀಕರ್ ನಿರ್ಧಾರಕ್ಕೆ ಬಿಟ್ಟಿದ್ದು" ಎಂದು ಹೇಳಿದ್ದಾರೆ.

English summary
As the Budget Session commences on Monday, July 7 all eyes will be set on the Narendra Modi-led NDA government, which would present its first Railway and Union Budget. The session will begin today and conclude on August 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X