ಆಮ್ ಆದ್ಮಿ ಸಾಧನೆ ಕೊಂಡಾಡಿದ ನಾರಾಯಣಮೂರ್ತಿ

ನವದೆಹಲಿ, ಡಿ. 12 : "ಚುನಾವಣೆಗಳನ್ನು ಗೆಲ್ಲಲು ಸಾಕಷ್ಟು ಹಣ ಅಗತ್ಯವಿದೆ ಎಂಬ ರಾಜಕೀಯ ಪಕ್ಷಗಳ ನಂಬಿಕೆಯನ್ನು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ಜಯಗಳಿಸಿದ ಆಮ್ ಆದ್ಮಿ ಪಕ್ಷ ಹುಸಿಗೊಳಿಸಿದೆ" ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.

ಗುರುವಾರ ಪತ್ರಿಕೆಯೊಂದರ ಸಂದರ್ಶನದಲ್ಲಿ ನಾರಾಯಣ ಮೂರ್ತಿ ದೆಹಲಿ ವಿಧಾನಸಭೆ ಚುನವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಷಿಸಿದರು. ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲುವುದು ನಿಜಕ್ಕೂ ಸಾಧನೆ ಎಂದು ನಾರಾಯಣ ಮೂರ್ತಿ ವಿವರಿಸಿದರು.

narayana murthy

ಚುನಾವಣೆಯಲ್ಲಿ ಜಯಗಳಿಸಿಲು ಸಾಕಷ್ಟು ಹಣ ಬೇಕು ಎಂಬ ರಾಜಕೀಯ ಪಕ್ಷಗಳ ನಂಬಿಕೆಯನ್ನು ಆಮ್ ಆದ್ಮಿ ಪಕ್ಷ ಹುಸಿಗೊಳಿಸಿದೆ. ಉತ್ತಮ ಭರವಸೆಗಳನ್ನು ನೀಡಿದರೆ ಜನರು ಮತದಾನ ಮಾಡುತ್ತಾರೆ ಎಂದು ಆಮ್ ಆದ್ಮಿ ಪಕ್ಷ ಸಾಬೀತು ಪಡಿಸಿದೆ. ಇಂದಿನ ರಾಜಕಾರಣದಲ್ಲಿ ಇಂತಹ ಪಕ್ಷಗಳಿಗೆ ಜನರು ಬೆಂಬಲ ನೀಡಬೇಕು ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಕೆಲವು ಕ್ಷೇತ್ರಗಳಲ್ಲಿ ಪ್ರಬಲವಾಗಿರುವ ಸ್ವತಂತ್ರ್ಯವಾಗಿ ಕಣಕ್ಕೆ ಇಳಿಯುವ ಅಭ್ಯರ್ಥಿಗಳು ಆಮ್ ಆದ್ಮಿ ಪಕ್ಷದ ಚುನಾವಣೆಯಲ್ಲಿ ಬಳಸಿಕ ಕಾರ್ಯತಂತ್ರವನ್ನು ಅನುಸರಿಸಬಹುದು. ಇಂತಹ ತಂತ್ರ ನರೇಂದ್ರ ಮೋದಿ, ರಾಹುಲ್ ಗಾಂಧಿ ಎಂದು ನಡೆಯುತ್ತಿರುವ ಚರ್ಚೆಗಳ ಮೇಲೆಯೂ ಪ್ರಭಾವ ಬೀರದಲಿದೆ ಎಂದು ಹೇಳಿದ್ದಾರೆ.

ಕಿರಣ್ ಮಜುಂದಾರ್ ಷಾ ಮಚ್ಚುಗೆ : ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಸಹ ಆಮ್ ಆದ್ಮಿ ಪಕ್ಷದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರ ರಹಿತ ಮತ್ತು ಸ್ವಚ್ಛ ಆಡಳಿತ ನೀಡುವುದಾಗಿ ಪಕ್ಷಗಳು ಭರವಸೆ ನೀಡಿದರೆ ಜನರು ಬೆಂಬಲ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+