• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಧಾನಿ ನರೇಂದ್ರ ಮೋದಿ ಆಸ್ತಿ ಎಷ್ಟು ಗೊತ್ತೇ? ಇಲ್ಲಿದೆ ಮಾಹಿತಿ

|
      ಪ್ರಧಾನಿ ನರೇಂದ್ರ ಮೋದಿಯವರ ಒಟ್ಟು ಆಸ್ತಿ ಮೌಲ್ಯ ಎಷ್ಟು? | Oneindia Kannada

      ನವದೆಹಲಿ, ಸೆಪ್ಟೆಂಬರ್ 19: ದೇಶವನ್ನಾಳುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಸ್ತಿ ಎಷ್ಟು ಗೊತ್ತೇ?, ಕೇವಲ 2 ಕೋಟಿ ರೂಪಾಯಿಗಳು, ಪ್ರಧಾನ ಮಂತ್ರಿ ಕಾರ್ಯಾಲಯ ಬಿಡುಗಡೆ ಮಾಡಿರುವ ಆಸ್ತಿ ಘೋಷಣೆ ಪತ್ರದಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.

      ಪ್ರಧಾನಿ ಮೋದಿಯವರು ಕೇವಲ 50 ಸಾವಿರ ರೂ ನಗದನ್ನು ಹತ್ತಿರ ಇಟ್ಟುಕೊಂಡಿದ್ದು, ಬ್ಯಾಂಕ್ ಹಾಗೂ ಇನ್ನಿತರೆ ಸಂಸ್ಥೆಗಳಲ್ಲಿ 1 ಕೋಟಿ ರೂಗಳಷ್ಟು ಆಸ್ತಿ ಮೌಲ್ಯ ಇದೆ. ಅಲ್ಲದೆ ಕೇವಲ 1 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ 2 ಲಕ್ಷ ರೂಗಿಂತ ಕಡಿಮೆ ಪ್ರಮಾಣದ ಹೂಡಿಕೆಯನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಪ್ರಧಾನಿ ಹೂಡಿಕೆ ಮಾಡಿದ್ದಾರೆ.

      ಕೋಟ್ಯಧಿಪತಿ ಶಾಸಕರ ಪಟ್ಟಿ ಕರ್ನಾಟಕಕ್ಕೆ ಅಗ್ರಸ್ಥಾನ

      ಗುಜರಾತ್ ನ ಗಾಂಧಿನಗರದ ವಸತಿ ಕಟ್ಟಡವೊಂದರಲ್ಲಿ ಶೇ.25 ರಷ್ಟು ಮೌಲ್ಯದ ಶೇರುಗಳನ್ನು ಹೊಂದಿದ್ದು ಅದರ ಮೌಲ್ಯ 1ಕೋಟಿ ರೂನಷ್ಟು ಆಗುತ್ತದೆ. ಅಲ್ಲದೆ 2002ರಲ್ಲಿ 1.30 ಲಕ್ಷ ರೂಪಾಯಿ ಮೌಲ್ಯದ ಒಂದು ಪ್ಲಾಟ್‌ ನ್ನು ನರೇಂದ್ರ ಮೋದಿ ಖರೀದಿಸಿದ್ದಾರೆ. ಆದರೆ ಮೋದಿಗೆ ಯಾವುದೇ ತರಹದ ಸಾಲದ ಹೊರೆಗಳಿಲ್ಲ.

      ಜತೆಗೆ ಸ್ವಂತ ಕಾರು ಹಾಗೂ ಬೈಕ್ ಕೂಡ ಇಲ್ಲ ಈ ಮಾಹಿತಿಯನ್ನು ಪ್ರಧಾನಿಗಳ ಕಾರ್ಯಾಲಯ 2018ರ ಮಾರ್ಚ್ 31ರಲ್ಲಿ ಕೊನೆಗೊಂಡ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಆಸ್ತಿ ಘೋಷಣೆಯನ್ನು ಸ್ವಯಂ ಪ್ರೇರಿತವಾಗಿ ಬಿಡುಗಡೆ ಮಾಡಿದೆ.

      ವಿಧಾನಸೌಧಕ್ಕೆ ಸಿದ್ದರಾಮಯ್ಯ ಹಠಾತ್ ಭೇಟಿಯ ರಾಜರಹಸ್ಯವೇನು?

      ಪ್ರಧಾನಿಯವರ ಬಳಿ 48,944 ರೂಗಳು ನಗದು ಹಣವಿದ್ದು, 11,29,690 ರೂಗಳನ್ನು ಗಾಂಧಿನಗರದ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಠೇವಣಿಯಾಗಿ ಇರಿಸಿದ್ದಾರೆ.

      ಇನ್ನೊಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ 1,07,96,228ರೂಗಳು ಹಣವನ್ನು ಇರಿಸಿದ್ದಾರೆ. ಇದಲ್ಲದೆ ಎಲ್‌ಎನ್‌ಟಿ ಇನ್‌ಫ್ರಾಸ್ಟ್ರಕ್ಚರ್ ಬಾಂಡ್ ನಲ್ಲಿ ಆದಾಯ ತೆರಿಗೆ ಉಳಿಸುವ ನಿಟ್ಟಿನಲ್ಲಿ 20 ಸಾವಿರ ಗಳ ಮೌಲ್ಯದ ಬಾಂಡ್ ಖರೀದಿಸಿದ್ದಾರೆ. ಅಲ್ಲದೆ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಸರ್ಕಾರಿ ಒಡೆತನದ ಹೂಡಿಕೆಯಲ್ಲಿ 5,18,235ರೂಲಕ್ಷ ಮೌಲ್ಯದ ಬಾಂಡ್ ಹಾಗೂ 1,59,281ರೂಗಳ ವಿಮೆ ಪಾಲಿಸಿಯನ್ನು ಹೊಂದಿದ್ದಾರೆ.

      ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಬಿಟ್ಟು ಯಾರು ಬೆಸ್ಟ್?

      ಪ್ರಧಾನಿ ಮೋದಿ ಬಳಿ ಇರುವ ಚಿನ್ನ ಅತ್ಯಂತ ಕಡಿಮೆ ಪ್ರಮಾಣದ್ದಾಗಿದ್ದು ಅದರ ಮೌಲ್ಯ 1,38,060ರೂಗಳಾಗಿದೆ. ಚರಾಸ್ತಿ ವಿಚಾರಕ್ಕೆ ಬಂದರೆ ಪ್ರಧಾನಿ ಬಳಿ ಇರುವುದು ಒಂದು ವಸತಿ ಸಮುಚ್ಛಯದಲ್ಲಿರುವ ಒಂದು ಪ್ಲಾಟ್ ಮಾತ್ರ, ಇದನ್ನು 2002ರಲ್ಲಿ ಮೋದಿ ಕೇವಲ 1,30,488ರೂಗಳಿಗೆ ಖರೀದಿಸಿದ್ದರು. ಮೋದಿ ಪ್ರಧಾನಿಯಾದ ಬಳಿಕ 2,47,208 ರೂಪಾಯಿಗಳನ್ನು ಹೂಡಿಕೆ ಮಾಡಿದ್ದು ಇಂದು ಅದರ ಮೌಲ್ಯ 1 ಕೋಟಿ ರೂ ಆಗುತ್ತದೆ.

      ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

      English summary
      Prime Minister Narendra Modi is worth just over Rs 2 crore, according to the latest declaration of assets released by the Prime Minister's Office. PM Modi holds a little under Rs 50,000 in hard cash and a little over Rs 1 crore in banks.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X
      We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more