ಪ್ರಧಾನಿ ಮೋದಿಗೆ 'ಮೋಸಗಾರ' ಎಂದ ಗಲ್ಲಾ ವಿರುದ್ಧ ಬಿಜೆಪಿ ಆಕ್ರೋಶ
ನವದೆಹಲಿ, ಜುಲೈ 20: 'ಪ್ರಧಾನಿ ನರೇಂದ್ರ ಮೋದಿ ಮೋಸಗಾರ' ಎಂದು ತಮ್ಮ ಮಾತಿನ ನಡುವೆ ಟಿಡಿಪಿ ಸಂಸದ ಜಯದೇವ ಗಲ್ಲಾ ಹೇಳಿದ್ದು, ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಯಿತು.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ 2014 ರ ಚುನಾವಣೆಗೂ ಮುನ್ನ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಹೇಳಿದ್ದರು. ಆದರೆ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಲಿಲ್ಲ. ಅವರೊಬ್ಬ ಮೋಸಗಾರ(ಮೋಸಗಾಡು) ಎಂದು ಗಲ್ಲಾ ಹೇಳಿದರು.
ಅವರ ಮಾತನ್ನು ವಿರೋಧಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ದೇಶದ ಗೌರವಾನ್ವಿತ ಪ್ರಧಾನಿಗಳ ವಿರುದ್ಧ ಇಂಥ ಪದ ಬಳಕೆ ಸರಿಯೇ? ದಯವಿಟ್ಟು ಕಲಾಪದ ಕಡತದಿಂದ ಈ ಪದವನ್ನು ತೆಗೆದು ಹಾಕುವಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಲ್ಲಿ ಮನವಿ ಮಾಡಿಕೊಂಡರು.

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಇಂದು ಮುಂಗಾರು ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದು, ಅಧಿವೇಶನದಲ್ಲಿ ಸಾಕಷ್ಟು ಪರವಿರೋಧ ಚರ್ಚೆಯಾಗುತ್ತಿದೆ.












Click it and Unblock the Notifications