ಅವಿಶ್ವಾಸ ನಿರ್ಣಯ: ಲೋಕಸಭೆಗೆ ಹಾಜರಾಗದೆ ತಟಸ್ಥವಾಗುಳಿದ ಶಿವಸೇನಾ

ನವದೆಹಲಿ, ಜುಲೈ 20: ಬಿಜೆಪಿ ನೇತೃತ್ವದ ಕೇಂದ್ರ ಎನ್ ಡಿಎ ಮೈತ್ರಿಕೂಟದ ಸರ್ಕಾರದ ವಿರುದ್ಧ ಇಂದು ಮಂಡನೆಯಾಗುತ್ತಿರುವ ಅವಿಶ್ವಾಸ ನಿರ್ಣಯಕ್ಕೆ ಶಿವಸೇನೆ ತಟಸ್ಥವಾಗಿರಲು ನಿರ್ಧರಿಸಿದೆ.

ಆ ಕಾರಣದಿಂದಲೇ ಇಂದು ಲೋಕಸಭೆಗೇ ಹಾಜರಾಗದೆ, ಹಾಜರಿ ಪಟ್ಟಿಯಲ್ಲೂ ಸಹಿ ಮಾಡದೆ ಅದು ತನ್ನ ನಿಲುವನ್ನು ಈ ರೀತಿ ಸ್ಪಷ್ಟಪಡಿಸಿದೆ.

Monsoon Session: No confidence motion: Shiv Sena will not attend Lok Sabha

ಮುಂಗಾರು ಅಧಿವೇಶನಕ್ಕೂ ಮುನ್ನ, ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವ ವಿಪಕ್ಷಗಳಿಗೆ ಶಿವಸೇನಾ ಬೆಂಬಲ ನೀಡುತ್ತದೆಯೋ ಇಲ್ಲವೋ ಎಂಬುದು ಗೊಂದಲದಲ್ಲೇ ಇತ್ತು. ನಂತರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಶಿವಸೇನಾ ಮುಖಂಡರನ್ನು ಬೇಟಿ ಮಾಡಿ ಮಾತನಾಡಿದ ನಂತರ ಶಿವಸೇನಾ, ಎನ್ ಡಿಎಯನ್ನು ಬೆಂಬಲಿಸುತ್ತದೆ ಎನ್ನಲಾಗಿತ್ತು.

ಆದರೆ ಇದುವರೆಗೂ ತನ್ನ ಅಧಿಕೃತ ನಿರ್ಧಾರವನ್ನು ಶಿವಸೇನಾ ತಿಳಿಸಿರಲಿಲ್ಲ. ಅಧಿವೇಶನ ಆರಂಭಕ್ಕೂ ಮುನ್ನ ಸಭೆ ನಡೆಸಿದ ಶಿವಸೇನಾ ಮುಖಂಡರು ಅಧಿವೇಶನಕ್ಕೆ ಹಾಜರಾಗದೆ ತಮ್ಮ ನಡೆಯನ್ನು ಸ್ಪಷ್ಟಪಡಿಸಿದ್ದಾರೆ.

ಶಿವಸೇನೆಯಿಂದ 2014 ರ ಲೋಕಸಭಾ ಚುನಾವಣೆಯಲ್ಲಿ 18 ಸಂಸದರು ಆಯ್ಕೆಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+