2014 ಕ್ಕಿಂತ 2019 ರಲ್ಲಿ ಮತ್ತೂ ಹೆಚ್ಚಿದೆ ಮೋದಿ ಜನಪ್ರಿಯತೆ: ರಾಜನಾಥ್ ಸಿಂಗ್

Recommended Video

      lok sabha elections 2019: 2014ರಲ್ಲಿ ನರೇಂದ್ರ ಮೋದಿ ಹೇಗಿದ್ದರು?, ಈಗ ಹೇಗಿದೆ ಜನಪ್ರಿಯತೆ? |Oneindia Kannada

      ನವದೆಹಲಿ, ಮಾರ್ಚ್ 30: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಭಾರತೀಯ ವಾಯುಸೇನೆ ಪಾಕ್ ಉಗ್ರನೆಲೆಯ ಮೇಲೆ ಏರ್ ಸ್ಟ್ರೈಕ್ ನಡೆಸಿದ ನಂತರ ಮೋದಿ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

      ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲಕ್ನೋ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, 67 ವರ್ಷ ವಯಸ್ಸಿನ ರಾಜನಾಥ್ ಸಿಂಗ್ ಮುಂಬರುವ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡುತ್ತಿದ್ದರು.

       Modi is more popular in 2019 than 2014: Rajnath Singh

      "ಜನರಿಗೆ ಬೇಕಾಗಿದ್ದು, ದೇಶದ ಭದ್ರತೆಗೆ ಒತ್ತು ಕೊಡುವ ನಾಯಕ ಜೊತೆಗೆ ದೇಶದ ಅಭಿವೃದ್ಧಿಗೆ ಬದ್ಧವಾಗುವ ನಾಯಕ. ಆ ನಾಯಕತ್ವವನ್ನು ಜನರು ಮೋದಿಯವರಲ್ಲಿ ಕಂಡಿದ್ದಾರೆ. ಆದ್ದರಿಂದಲೇ ಅವರ ಜನಪ್ರಿಯತೆ ಹಿಂದಿಗಿಂತ ಹೆಚ್ಚಿದೆ" ಎಂದು ಸಿಂಗ್ ಹೇಳಿದರು.

      "2014 ರಲ್ಲಿ ಬಿಜೆಪಿ ಗೆದ್ದಿದ್ದಕ್ಕಿಂತ ಹೆಚ್ಚು ಸೀಟುಗಳಲ್ಲಿ ಈ ಬಾರಿ ಗೆಲುವು ಸಾಧಿಸಲಿದೆ. 2014 ರಲ್ಲಿ ಜನರಿಗೆ ನರೇಂದ್ರ ಮೋದಿ ಅವರ ಪರಿಚಯವಿತ್ತು. ಆಗ ದೇಶಕ್ಕೆ ಗಟ್ಟಿ ನಾಯಕತ್ವ ಬೇಕಿತ್ತು, ಆಗಿನ ಸರ್ಕಾರದ ಮೇಲೆ ಆಡಳಿತ ವಿರೋಧಿ ಅಲೆ ಇತ್ತು. ಆದರೆ ಈಗ ಮೋದಿ ಸರ್ಕಾರದ ಸಾಧನೆಗಳ ಅರಿವು ಜನರಿಗಿದೆ. ಮೋದಿ ಒಬ್ಬ ಸಮರ್ಥ ನಾಯಕ ಎಂದು ಜನರು ಒಪ್ಪಿಕೊಂಡಿದ್ದಾರೆ" ಎಂದು ಸಿಂಗ್ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+