ವಂದೇ ಭಾರತ್ ಮಿಷನ್: ಕಳೆದ 15 ಗಂಟೆಗಳಲ್ಲಿ ಏರ್ ಇಂಡಿಯಾದ 22,000 ಟಿಕೆಟ್ ಮಾರಾಟ
ನವದೆಹಲಿ, ಜೂನ್ 6: ವಿದೇಶದಲ್ಲಿ ಸಿಲುಕಿರುವ ಭಾರತೀಯರು ಕರೆತರಲು ಹಮ್ಮಿಕೊಂಡಿರುವ ವಂದೇ ಭಾರತ್ ಮಿಷನ್ 3ಕ್ಕೆ ಬೇಡಿಕೆ ಹೆಚ್ಚಾಗಿದ್ದು, ಕಳೆದ 15 ಗಂಟೆಗಳಲ್ಲಿ ಏರ್ ಇಂಡಿಯಾದ 22,000 ಟಿಕೆಟ್ ಮಾರಾಟವಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಶುಕ್ರವಾರ ಸಂಜೆ 5ಗಂಟೆಯಿಂದ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದ್ದು, ವಿದೇಶದಲ್ಲಿರುವ ಭಾರತೀಯರು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿದ್ದಾರೆ. ವಿಮಾನಯಾನದ ವೆಬ್‌ಸೈಟ್ ಪ್ರಕಾರ 6 ರಿಂದ 7 ಪಟ್ಟು ಹೆಚ್ಚಿನ ಟಿಕೆಟ್ ಮಾರಾಟವಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.
40 ಹಿರಿಯ ಪೈಲಟ್ಗಳ ಆಯ್ಕೆ: ಇವರು ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಪೈಲಟ್ಸ್..!
ಮಿಷನ್ ವಂದೇ ಭಾರತ್‌ನ ಮೂರನೇ ಹಂತದ ಅಡಿಯಲ್ಲಿ, ಏರ್ ಇಂಡಿಯಾ ಶುಕ್ರವಾರ ಸಂಜೆ 5 ಗಂಟೆಗೆ ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುರೋಪ್‌ನ ಆಯ್ದ ತಾಣಗಳಿಗೆ ಬುಕಿಂಗ್ ತೆರೆಯಿತು.
ಜೂನ್ 10 ರಿಂದ ಆರಂಭವಾಗುವ ವಂದೇ ಭಾರತ್ ಮಿಷನ್ 3 ಜುಲೈ 1 ರವರೆಗೂ ಕಾರ್ಯಾಚರಣೆ ಮಾಡಲಿದೆ. ಸುಮಾರು 300 ಏರ್ ಇಂಡಿಯಾ ವಿಮಾನಗಳು ಈ ಮೇಲ್ಕಂಡ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಿದೆ.
ವಿಶ್ವದ 2 ದೇಶಗಳ 7 ನಗರಗಳಿಗೆ ಏರ್ಇಂಡಿಯಾ ವಿಮಾನ ಹಾರಾಟ
ಮೇ 7 ರಿಂದ ಜೂನ್ 1ರ ವರೆಗೂ ನಡೆದ ವಂದೇ ಭಾರತ್ ಮಿಷನ್ ಕಾರ್ಯಾಚರಣೆಯಲ್ಲಿ ಸುಮಾರು 423 ಏರ್ ಇಂಡಿಯಾ ವಿಮಾನಗಳು ಕೆಲಸ ಮಾಡಿದ್ದು, ಒಟ್ಟು 58,867 ಜನ ಭಾರತೀಯರನ್ನು ವಾಪಸ್ ಕರೆದುಕೊಂಡು ಬರಲಾಗಿದೆ.