ಲೋಕಸಭೆ ಚುನಾವಣೆ: ಎನ್ ಸಿಪಿ-ಕಾಂಗ್ರೆಸ್ ದೋಸ್ತಿ ಖಚಿತ
ನವದೆಹಲಿ, ಜನವರಿ 05: ಈ ವರ್ಷ ಏಪ್ರಿಲ್ -ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ನ್ಯಾಶ್ನಲಿಸ್ಟಿಕ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ) ಒಟ್ಟಾಗಿ ಚುನಾವಣೆ ಎದುರಿಸಲಿವೆ.
ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಕ್ಷೇತ್ರಗಳಿದ್ದು, ಇವುಗಳಲ್ಲಿ 40 ಕ್ಷೇತ್ರಗಳಲ್ಲಿ ಎನ್ ಸಿಪಿ-ಕಾಂಗ್ರೆಸ್ ಒಟ್ಟಾಗಿ ಸ್ಪರ್ಧೆಗಿಳಿಯಲಿವೆ. ಉಳಿದ ಎಂಟು ಕ್ಷೇತ್ರಗಳ ಬಗ್ಗೆ ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಎನ್ ಸಿಪಿ ಮುಖಂಡ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
"ಸಮಾನ ಮನಸ್ಕ ಪಕ್ಷಗಳಾಗಿರುವುದರಿಂದ ನಾವಿಬ್ಬರೂ ಒಟ್ಟಾಗಿ ಚುನಾವಣೆ ಎದುರಿಸುವುದರಿಂದ ಯಶಸ್ಸು ಪಡೆಯುವುದಕ್ಕೆ ಸಾಧ್ಯ. ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿಪಕ್ಷ ಖಂಡಿತವಾಗಿಯೂ ಯಶಸಸ್ಸು ಪಡೆಯಲಿದೆ ಎಂದು ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು.

"ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಅವರ ತತ್ತ್ವಗಳನ್ನು ನಂಬಿರುವ ಎರಡು ಪಕ್ಷಗಳನ್ನು ನಾವು ಒಂದೆಡೆ ತರುತ್ತಿದ್ದೇವೆ. ಸೀಟು ಹಂಚಿಕೆಯನ್ನು ಕಾಂಗ್ರೆಸ್ ಮತ್ತು ಎನ್ ಸಿಪಿಯ ರಾಷ್ಟ್ರೀಯ ನಾಯಕರು ನಿರ್ಧರಿಸಿಲಿದ್ದಾರೆ" ಎಂದು ಸಹ ಅವರು ಹೇಳಿದರು.












Click it and Unblock the Notifications