Breaking: ದೆಹಲಿ ಡಿಸಿಎಂ ವಿರುದ್ದ ಸಿಬಿಐ ತನಿಖೆಗೆ ಶಿಫಾರಸು
ನವದೆಹಲಿ ಜುಲೈ 22: ಅಬಕಾರಿ ನೀತಿ ಉಲ್ಲಂಘನೆ, ಆಡಳಿತ ಲೋಪ ಹಿನ್ನೆಲೆ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ವಿರುದ್ಧ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ. ಕೆ. ಸಕ್ಸೇನಾ ಸಿಬಿಐ ತನಿಖೆ ನಡೆಸುವಂತೆ ಶುಕ್ರವಾರ ಶಿಫಾರಸು ಮಾಡಿದ್ದಾರೆ.
ವ್ಯವಹಾರ ನಿಯಮಗಳ ವಹಿವಾಟು 1993, GNCTD ಕಾಯಿದೆ 1991 ಹಾಗೂ ದೆಹಲಿ ಅಬಕಾರಿ ಕಾಯಿದೆ 2009 ಮತ್ತು ದೆಹಲಿ ಅಬಕಾರಿ ನಿಯಮಗಳು 2010ರ ಅನ್ನು ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ವರದಿ ಆಧರಿಸಿ ವಿ. ಕೆ. ಸಕ್ಷೇನಾ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಉದ್ದೇಶಪೂರ್ವಕವಾಗಿಯೇ ಕಳೆದ ಸಾಲಿನಲ್ಲಿ (2021-22) ಮದ್ಯದ ಪರವಾನಗಿದಾರರ ಟೆಂಡರ್ ಪ್ರಕ್ರಿಯೆಗೆ ನಿಯಮ ಮೀರಿ ಅನಗತ್ಯ ಪ್ರಯೋಜನ ಒದಗಿಸಲಾಗಿದೆ. ಇದರಲ್ಲಿ ಸಿಸೋಡಿಯಾ ಅವರ ಪಾತ್ರವಿರುವುದು ಬೆಳಕಿಗೆ ಬಂದಿದೆ. ಪವಾನಿಗೆ ನೀಡುವ ಅಥವಾ ಟೆಂಡರ್ ಪ್ರಕ್ರಿಯೆ ಮುನ್ನ ಸರ್ಕಾರದ ಶಾಸನಬದ್ಧ ನಿಬಂಧನೆ ಅಡಿ ಎಲ್ಲವು ನಡೆಯಬೇಕು. ಆದರೆ ನಿಯಮ ಉಲ್ಲಂಘಿಸಿ ಖಾಸಗಿ ಮದ್ಯದ ಉದ್ಯಮಿಗಳಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಹಲವು ನಿರ್ಧಾರಗಳನ್ನು ಸಿಸೋಡಿಯಾ ಕೈಗೊಂಡಿದ್ದಾರೆ. ಇದು ಸರ್ಕಾರದ ಬೊಕ್ಕಸಕ್ಕೆ ನಷ್ಟು ಮಾಡುತ್ತವೆ ಎಂದು ಮೂಲಗಳು ತಿಳಿಸಿವೆ.

ಮಾರಣಾಂತಿಕ ಡೆಲ್ಟಾ ಕೋವಿಡ್ 19 ಮದ್ಯದಲ್ಲಿ 2021ರಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸಂಪುಟ ಅಬಕಾರಿ ನೀತಿ ಅಂಗೀಕರಿಸಿತ್ತು. ಈ ಮೂಲಕ ಸರ್ಕಾರದ ಗರಿಷ್ಠ ಆದಾಯ ಖಚಿತತೆ, ನಕಲಿ ಮದ್ಯ ಅಥವಾ ಸುಂಕ ರಹಿತ ಮದ್ಯದ ಮಾರಾಟ ನಿರ್ಮೂಲನೆ ಕಾರಣದಿಂದ ನೀತಿ ರೂಪಿಸಲಾಗಿತ್ತು. ಇದೀಗ ಆ ನೀತಿ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
Delhi LG orders CBI probe into alleged violation of excise policy
— ANI Digital (@ani_digital) July 22, 2022
Read @ANI Story | https://t.co/O22nsg1vTa#DelhiExcisePolicy #DelhiLG #Excise #VKSaxena #AAP #ManishSisodia #ArvindKejriwal pic.twitter.com/D1xghAfKvQ












Click it and Unblock the Notifications