• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಕಲಿ ವಿಡಿಯೋ ನಂಬಿ ಮತ್ತೆ ಯಾಮಾರಿದ ಕಿರಣ್ ಬೇಡಿ

|

ನವ ದೆಹಲಿ, ಏಪ್ರಿಲ್ 7: ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಎಷ್ಟೋ ಸುದ್ದಿಗಳು, ವಿಡಿಯೋಗಳು ಫೇಕ್ ಆಗಿರುತ್ತದೆ. ಆದರೆ, ಅನೇಕ ಬಾರಿ ಅವು ಜನರನ್ನು ಯಾಮಾರಿಸಿ ಬಿಡುತ್ತದೆ. ಇದೀಗ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಸಹ ಒಂದು ನಕಲಿ ವಿಡಿಯೋವನ್ನು ನಂಬಿ ಎಡವಟ್ಟು ಮಾಡಿಕೊಂಡಿದ್ದಾರೆ.

   ಕುಟುಂಬವನ್ನು ನೆನೆದು ಕಣ್ಣೀರು ಹಾಕಿದ ಮಹಿಳಾ ಡಾಕ್ಟರ್ | Oneindia Kannada

   ಕೋಳಿ ಮರಿಗಳು ರಸ್ತೆಯಲ್ಲಿ ಇರುವ ವಿಡಿಯೋ ಇದಾಗಿದೆ. ನೂರಾರೂ ಕೋಳಿಮರಿಗಳು ವಿಡಿಯೋದಲ್ಲಿ ಇವೆ. ವಿಡಿಯೋ ಮಾಡಿರುವ ವ್ಯಕ್ತಿ ರಸ್ತೆಯಲ್ಲಿ ಹೇಗೆ ಕೋಳಿ ಮರಿಗಳು ಓಡಾಡುತ್ತಿದೆ ಎಂದು ಸುತ್ತ ಮುತ್ತ ಕ್ಯಾಮರಾ ಹಿಡಿದು ತೋರಿಸಿದ್ದಾರೆ.

   'ಓಂ' ಎನ್ನುವ ಸೂರ್ಯ: ನಕಲಿ ವಿಡಿಯೋ ಹಾಕಿ ಟ್ರಾಲ್ ಆದ ಕಿರಣ್ ಬೇಡಿ

   ಈ ವಿಡಿಯೋ ವಾಟ್ಸ್‌ ಅಪ್ ನಲ್ಲಿ ಕಿರಣ್ ಬೇಡಿಗೆ ಸಿಕ್ಕಿದೆ. ಆ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ. ಕೊರೊನಾ ವೈರಸ್‌ನಿಂದ ಮೊಟ್ಟೆಗಳನ್ನು ತಿನ್ನದೆ ಎಸೆದಿದ್ದು, ಕೋಳಿಮರಿಗಳು ಹೊರ ಬಂದಿದೆ. ಇದು ನಿಸರ್ಗದ ಸೃಷ್ಟಿ ಎಂದಿದ್ದಾರೆ.

   ಈ ವಿಡಿಯೋ ಹಂಚಿಕೊಂಡ ನಂತರ ನೆಗೆಟಿವ್ ಕಾಮೆಂಟ್ಸ್ ಗಳು ಹೆಚ್ಚಾಯ್ತು. ಮೊಟ್ಟೆಗಳನ್ನು ರಸ್ತೆಗೆ ಎಸೆದರೆ, ಕೋಳಿಮರಿ ಹೇಗೆ ಹುಟ್ಟುತ್ತದೆ ಎಂದು ಅನೇಕರು ಪ್ರಶ್ನೆ ಮಾಡಿದರು. ವ್ಯಕ್ತಿಯೊಬ್ಬ ನೀವು ವಾಟ್ಸ್ ಅಪ್‌ ಅನ್ಇನ್‍ಸ್ಟಾಲ್ ಮಾಡಿ ಎಂದು ಹೇಳಿದ್ದರೆ. ಹೀಗೆ ಪೇಕ್ ವಿಡಿಯೋ ನಂಬಿಕೊಂಡು ಕಿರಣ್ ಬೇಡಿ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿದ್ದಾರೆ.

   ಎರಡು ತಿಂಗಳ ಹಿಂದೆ ಸಹ ಇದೇ ರೀತಿ ನಕಲಿ ವಿಡಿಯೋ ಮೂಲಕ ಕಿರಣ್ ಬೇಡಿ ನಗೆಗೀಡಾಗಿದ್ದರು. ಸೂರ್ಯ 'ಓಂ' ಎಂದು ಸದ್ದು ಮಾಡುತ್ತದೆ ಎನ್ನುವ ವಿಡಿಯೋ ಇದಾಗಿತ್ತು.

   English summary
   Lieutenant Governor of Puducherry Kiran Bedi shared a fake video in her twitter account
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X