ಕತುವಾ ಪ್ರಕರಣ: ದೆಹಲಿ ಕೋರ್ಟಿನಿಂದ ಮಾಧ್ಯಮಗಳಿಗೆ 10 ಲಕ್ಷ ರೂ. ದಂಡ
ನವದೆಹಲಿ, ಏಪ್ರಿಲ್ 18: ಇಡೀ ದೇಶದ ಗಮನ ಸೆಳೆದ ಜಮ್ಮು ಕಾಶ್ಮೀರದ ಕತುವಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆಯ ಗುರುತು ಬಹಿರಂಗ ಪಡಿಸಿದ ಮಾಧ್ಯಮಗಳಿಗೆ ದೆಹಲಿ ಹೈಕೋರ್ಟ್ ತಲಾ 10 ಲಕ್ಷ ರೂ. ದಂಡ ವಿಧಿಸಿದೆ.
ಜನವರಿ ತಿಂಗಳಿನಲ್ಲಿ ಕತುವಾದಲ್ಲಿ ಎಂಟು ವರ್ಷದ ಅಪ್ರಾಪ್ತೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ವಿಷಯ ಇತ್ತೀಚೆಗೆ ಬಯಲಿಗೆ ಬಂದಿತ್ತು. ಯುವತಿಯನ್ನು ಅಪಹರಿಸಿ ಹಲವು ದಿನಗಳ ಕಾಲ ದೇವಾಲಯವೊಂದರಲ್ಲಿಟ್ಟುಕೊಂಡು, ಮತ್ತು ಬರುವ ಔಷಧ ನೀಡಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ, ಎಂಟು ಜನರನ್ನು ಪೊಲೀಸರು ಬಂಧಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಮಾಡಿದ್ದ ಹಲವು ಮಾಧ್ಯಮಗಳು ಸಂತ್ರಸ್ಥೆಯ ಹೆಸರು ಮತ್ತು ಚಿತ್ರವನ್ನು ಬಹಿರಂಗ ಪಡಿಸಿದ್ದವು. ಅತ್ಯಾಚಾರ ಸಂತ್ರಸ್ಥೆಯ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವುದು ಅಪರಾಧವಾದ್ದರಿಂದ ಆ ಎಲ್ಲಾ ಮಾಧ್ಯಮಗಳಿಗೂ ದೆಹಲಿ ಉಚ್ಚ ನ್ಯಾಯಾಲಯ ತಲಾ 10 ಲಕ್ಷ ರೂ.ದಂಡ ವಿಧಿಸಿದ್ದು. ಇದರಿಂದ ಸಂಗ್ರಹವಾದ ಹಣವನ್ನು ಕತುವಾ ಸಂತ್ರಸ್ಥೆ ನಿಧಿಗೆ ನೀಡಲಿದೆ.












Click it and Unblock the Notifications